ಇನ್ಮುಂದೆ ಹೈವೇನಲ್ಲಿ ಸ್ಪೀಡ್​​ ಆಗಿ ಓಡಿಸಿದ್ರೆ ಬೀಳುತ್ತೇ ಭಾರೀ ದಂಡ !

0
🌐 Belgaum News :

ಬೆಂಗಳೂರು : ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನವನ್ನು ವೇಗವಾಗಿ ಓಡಿಸುವ ಮುನ್ನ ಎಚ್ಚರದಿಂದ ಇರಬೇಕು. ಇನ್ಮುಂದೆ ಒಂದು ವೇಳೆ ಸವಾರರು ಅಗತ್ಯಕ್ಕಿಂತ ವೇಗವಾಗಿ ವಾಹನ ಚಲಾಯಿಸಿದರೆ ದಂಡ ತೆರಲೇಬೇಕಾಗುತ್ತದೆ.

ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸೂಕ್ತ ಕ್ಯಾಮರಾಗಳ ಅಳವಡಿಕೆಗೆ ಕೇಂದ್ರ ಸಾರಿಗೆ ಇಲಾಖೆ ಮುಂದಾಗಿದೆ. ಹೀಗಾಗಿ ಕರ್ನಾಟಕದ ಎಲ್ಲಾ ಹೆದ್ದಾರಿಗಳಲ್ಲೂ ಸಾರಿಗೆ ಇಲಾಖೆ ಕ್ಯಾಮರಾ ಅಳವಡಿಕೆ ಅಗತ್ಯ ತಯಾರಿ ನಡೆಸಿಕೊಂಡಿದೆ.

ವಾಹನ ಸವಾರರು ಇನ್ಮುಂದೆ ಎಚ್ಚರಿಕೆಯಿಂದ ಇರಲೇಬೇಕು. ಹೆದ್ದಾರಿಗಳಲ್ಲಿ ಸ್ಪೀಡ್​​ಆಗಿ ವಾಹನ ಓಡಿಸುವ ಮುನ್ನ ಎರಡು ಬಾರಿ ಯೋಚಿಸಬೇಕು. ಕೇಂದ್ರ ಸಾರಿಗೆ ಇಲಾಖೆ ಕಠಿಣ ರೂಲ್ಸ್ ಜಾರಿ ಮಾಡಲಿದ್ದು, ಚೂರು ಎಡವಿದರೂ ಭಾರೀ ಪ್ರಮಾಣದಲ್ಲಿ ದಂಡ ಬೀಳುತ್ತದೆ.

ಯಾರಾದರೂ ಒಂದು ವೇಳೆ ನಿಯಮ ಉಲ್ಲಂಘಿಸಿ ಸ್ಪೀಡ್​​ ಆಗಿ ವಾಹನ ಚಲಾಯಿಸಿದರೆ ಮುಂದಿನ ಟೋಲ್​​ನಲ್ಲೇ ಫೈನ್​​ ಕಟ್ಟಬೇಕಾಗುತ್ತದೆ. ನಿಮ್ಮ ಗಾಡಿ ಸಂಖ್ಯೆ ಮತ್ತು ಸ್ಪೀಡ್​​ ಬಗ್ಗೆ ಇಲಾಖೆಗೆ ಕೂಡಲೇ ಮಾಹಿತಿ ರವಾನೆಯಾಗುತ್ತದೆ.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');