ಬೆಳಗಾವಿಯಲ್ಲಿ ಗಾಂಜಾ ಮಾರಾಟ : ಇಬ್ಬರ ಬಂಧನ

0
🌐 Belgaum News :

ಬೆಳಗಾವಿ : ಬೆಳಗಾವಿ ಗಾಂಧಿನಗರ ಸರ್ವಿಸ್ ರೋಡ ಹತ್ತಿರ ಗಾಂಜಾ ಮಾರಾಟದಲ್ಲಿ ತೊಡಗಿದ ಇಬ್ಬರು ವ್ಯಕ್ತಿಗಳ  ಮೇಲೆ ಸಿಐಡಿ ತಂಡ  ದಾಳಿ ಮಾಡಿ, ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.

ಬೆಳಗಾವಿ ಘಟಕದ ಡಿಟೆಕ್ಟಿವ್ ಸಬ್ ಇನ್ಸ್ಪೆಕ್ಟರ್ ಲಕ್ಷ್ಮಣ ಹುಂಡರದ ರವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಶಮಶುದ್ದಿನ್(37) ಮತ್ತು ಮಹಮ್ಮದ್ ಹನೀಫ್ (57) ಇವನ್ನು ಬಂಧಿಸಿರು.

ಅವರಿಂದ  40,800 ರುಪಾಯಿ ಮೌಲ್ಯದ 2 ಕೆಜಿ 200 ಗ್ರಾಂ ಗಾಂಜಾ ಮತ್ತು ಎರಡು ಮೊಬೈಲ್‍ಗಳು ಹಾಗೂ ರೂ.650/- ನಗದು ಹಣ ಜಪ್ತು  ಮಾಡಲಾಗಿದೆ. ಈ ಕುರಿತು ಬೆಳಗಾವಿ ನಗರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸದರಿ ಪ್ರಕರಣದಲ್ಲಿ ಪತ್ತೆ ಹಚ್ಚಿ ದಾಳಿ ಮಾಡುವಲ್ಲಿ, ಸಿಐಡಿ ಎನ್.ಡಿ.ಸಿ ಬೆಳಗಾವಿ ಘಟಕದ ಸಿಬ್ಬಂದಿಯವರಾದ ಜಗದೀಶ ಎಂ ಬಾಗನವರ, ಜಿ.ಆರ್ಶಿರಸಂಗಿ, ಚಿದಂಬರ ಚಟ್ಟರಕ್ಕಿ ಮತ್ತು ಜೆ.ಎಂ.ನಗಾರಿ ಉಪಸ್ಥಿತರಿದ್ದರು./////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');