ತೆರೆ ಮೇಲೆ ಬರಲಿದೆ ಚಿನ್ನದ ಹುಡುಗ ನೀರಜ್ ಚೋಪ್ರಾ ಜೀವನ ಆಧಾರಿತ ಸಿನಿಮಾ

0
🌐 Belgaum News :

ಹೊಸದಿಲ್ಲಿ : ಟೋಕಿಯೊ 2020 ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಎಸೆತದ ಮೂಲಕ ಭಾರತಕ್ಕೆ ಅಥ್ಲೆಟಿಕ್ಸ್‌ ವಿಭಾಗದಲ್ಲಿ ಚಿನ್ನದ ಪದಕ ತಂದುಕೊಟ್ಟ ನೀರಜ್ ಚೋಪ್ರಾ ಸಾಧನೆ ದೇಶದೆಲ್ಲೆಡೆ ಮನೆ ಮಾತಾಗಿದೆ. ಈ ಬೆನ್ನೆಲ್ಲೆ ನೀರಜ್​ ಚೋಪ್ರಾ ಕುರಿತು ಸಿನಿಮಾ‌ ಮಾಡಲು ನಿರ್ಮಾಪಕ, ದಕ್ಷಿಣ ಕನ್ನಡ ಜಿಲ್ಲೆಯ ಅರುಣ್‌ ರೈ ತೋಡಾರ್ ಮುಂದಾಗಿದ್ದಾರೆ.

ಈಗಾಗಲೇ ಕಂಬಳದ ಬಗ್ಗೆ ‘ಬಿರ್ದ್‌ದ ಕಂಬುಲ’ ಸಿನಿಮಾ ನಿರ್ಮಾಣ ಮಾಡುತ್ತಿರುವ ಅರುಣ್ ರೈ ತೋಡಾರ್, ಈ ಮೂಲಕ ಮತ್ತೊಂದು ಸಾಹಸಕ್ಕೆ ಅಣಿಯಾಗಿದ್ದಾರೆ.

ಇನ್ನು 2018ರ ಸಂದರ್ಶನವೊಂದರಲ್ಲಿ ತಮ್ಮ ಕುರಿತ ಚಿತ್ರ ತಯಾರಾದರೆ ಯಾರು ಮಾಡಬೇಕು ಅನ್ನೋ ಪ್ರಶ್ನೆಗೆ ಉತ್ತರಿಸಿದ್ದ ನೀರಜ್ ಚೋಪ್ರಾ, ನನ್ನ ಬಗ್ಗೆ ಚಿತ್ರ ನಿರ್ಮಾಣವಾದ್ರೆ ಅದ್ಭುತವಾಗಿರುತ್ತದೆ. ಅಕ್ಷಯ್ ಕುಮಾರ್​ ಅಥವಾ ರಣದೀಪ್ ಹೂಡಾ ಅವರು ನಟಿಸಬೇಕು ಎಂದಿದ್ದರು.

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜಾವೆಲಿನ್‌ ಥ್ರೋ ಫೈನಲ್​​ನಲ್ಲಿ ಎದುರಾಳಿಯನ್ನು ಸೋಲಿಸುವ ಮೂಲಕ ನೀರಜ್‌ ಚೋಪ್ರಾ ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತಕ್ಕೆ ಟೋಕಿಯೋ ಒಲಿಂಪಿಕ್​ನಲ್ಲಿ ಚಿನ್ನದ ಪದಕವನ್ನ ತಂದುಕೊಟ್ಟಿದ್ದಾರೆ. ಫೈನಲ್​​​ನಲ್ಲಿ 87.58 ಮೀ. ದೂರಕ್ಕೆ ಜಾವೆಲಿನ್‌ ಎಸೆದು ಅಗ್ರಸ್ಥಾನ ಪಡೆದುಕೊಳ್ಳುವ ಮೂಲಕ ನೀರಜ್​​ ಗೆದ್ದು ಬೀಗಿದರು./////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');