ಮಾರುಕಟ್ಟೆ ಅಸ್ತಿತ್ವ ವಿಸ್ತರಿಸಲು ಟ್ರಿಲಿಯಮ್ ಫ್ಲೋಟೆಕ್ನಾಲಜೀಸ್ ಖರೀದಿಸಿದ ಐಎಂಸಿ ಸ್ವರ್ಣಾ

0
🌐 Belgaum News :

 

ಹುಬ್ಬಳ್ಳಿ:ಹುಬ್ಬಳ್ಳಿ ಮೂಲದ ಐಎಂಸಿ ಮತ್ತು ಸ್ವರ್ನಾಗ್ರೂಪ್‍ಆಫ್ ಕಂಪನಿಗಳ ಜಂಟಿ ಉದ್ಯಮವಾದ ಐಎಂಸಿ ಸ್ವರ್ಣ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಪ್ರಸಿದ್ಧವಾದ “ಬಿಡಿಕೆ ವಾಲ್ವ್‍ಸ್” ಬ್ರಾಂಡ್ ಅಡಿಯಲ್ಲಿ ಬಾಲ್ ವಾಲ್ವ್‍ಗಳು, ಬಟರ್‍ಫ್ಲೈ ವಾಲ್ವ್‍ಗಳು, ಡಯಾಫ್ರಾಮ್ ವಾಲ್ವ್‍ಗಳು, ಸುರಕ್ಷತಾ ಪರಿಹಾರ ಕವಾಟಗಳು ಮತ್ತು ಪ್ಲಗ್ ವಾಲ್ವ್‍ಗಳನ್ನು ತಯಾರಿಸುತ್ತಿದ್ದ ಮುಂಚೂಣಿ ಕಂಪನಿಯಾದ ಟ್ರಿಲಿಯಂ ಫ್ಲೋಟೆ ಕ್ನಾಲಜೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಈ ಹಿಂದೆ ವೀರ್‍ಇಂಡಿಯಾ ಪ್ರೈ. ಲಿಮಿಟೆಡ್ ಎಂದು ಕರೆಯಲ್ಪಡುತ್ತಿತ್ತು) ಕಂಪನಿಯ 100% ಷೇರುಗಳನ್ನು ಯಶಸ್ವಿಯಾಗಿ ಖರೀದಿಸಿರುವುದನ್ನು ಘೋಷಿಸಿದೆ.

ದೇಶೀಯ ಮಾರುಕಟ್ಟೆಯಲ್ಲಿ ಹೆಸರುವಾಸಿಯಾಗಿರುವ ಟ್ರಿಲಿಯಂ ಫ್ಲೋಟೆಕ್ನಾಲಜೀಸ್, ಪ್ರತಿಷ್ಠಿತ ಗ್ರಾಹಕರಾದ ರಿಲಯನ್ಸ್, ಅದಾನಿ, ಒಎನ್ಜಿಸಿ, ಎಚ್‍ಎಂಇಎಲ್, ಎನ್ ಟಿಪಿಸಿ, ಜೆಎಸ್‍ಡಬ್ಲ್ಯು, ಎಲ್‍ಅಂಡ್ ಟಿ, ಜನರಲ್‍ಎಲೆಕ್ಟ್ರಿಕ್, ದೂಸನ್, ಸೀಮೆನ್ಸ್, ಅಯಾನ್ ಎಕ್ಸ್‍ಚೇಂಜ್, ಅಂತಾರಾಷ್ಟ್ರೀಯ ಗ್ರಾಹಕರಾದ ಎಬಿಬಿ ಅಲ್ಸ್ಟಮ್, ಹಿಟಾಚಿ ಮತ್ತು ಹನಿವೆಲ್, ಮತ್ತಿತರ ಕಂಪನಿಗಳಿಗೆ ಸೇವೆ ಒದಗಿಸುತ್ತಿದೆ.

ಐಎಂಸಿ ಸ್ವರ್ಣಾ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್‍ನ ಅಧ್ಯಕ್ಷ ಬಿಮಲ್ ಮೆಹ್ತಾ ಮಾತನಾಡಿ, ಟ್ರಿಲಿಯಂ ಸ್ವಾಧೀನವು ಒಂದು ವಿಶಿಷ್ಟವಾದ ವಹಿವಾಟಾಗಿದ್ದು, ವಾಲ್ವ್ ಉತ್ಪಾದನೆಯಲ್ಲಿ ಆದ್ಯ ಪ್ರವರ್ತಕ ಎನಿಸಿದ ಅಗ್ರಗಣ್ಯ ಸಂಸ್ಥೆ ಮತ್ತೆ ಭಾರತೀಯರ ಕೈಗೆ ಬಂದಿದೆ. ಐಎಂಸಿ ಸ್ವರ್ಣಾದ ಸಾಮಥ್ರ್ಯಗಳನ್ನು ನಾವು ಟ್ರಿಲಿಯಮ್ ತಂಡ ತಂದಿರುವ ಪ್ರತಿಭೆ ಮತ್ತು ಪರಿಣತಿಯೊಂದಿಗೆ ಸಂಯೋಜಿಸಿ ಮಾರುಕಟ್ಟೆ ಅಸ್ತಿತ್ವವನ್ನು ವಿಸ್ತರಿಸುವುದನ್ನು ನಾವು ಎದುರು ನೋಡುತ್ತಿದ್ದೇವೆ ಎಂದರು.

ಐಎಂಸಿ ಗುಂಪಿನ 56 ವರ್ಷಗಳ ಲೋಹಗಳ ವ್ಯಾಪಾರ ಅನುಭವವು ಗುಣಮಟ್ಟದ ಉತ್ಪಾದನಾ ಪರಿಣತಿಯೊಂದಿಗೆ ಸೇರಿ, ಹೊಸದಾಗಿ ಸ್ವಾಧೀನಪಡಿಸಿಕೊಂಡ ಸಂಸ್ಥೆಯ ಅ ಸಾಮಾನ್ಯ ಬೆಳವಣಿಗೆಗೆ ಕಾರಣವಾಗಲಿದೆ ಎಂದು ಐಎಂಸಿ ಸ್ವರ್ಣ ವೆಂಚರ್ಸ್ ಪ್ರೈ. ಲಿಮಿಟೆಡ್‍ನ ಸಹ ಅಧ್ಯಕ್ಷ ಡಾ. ಸಿಎಚ್ ವಿ.ಎಸ್.ವಿ. ಪ್ರಸಾದ್ ಅಭಿಪ್ರಾಯಪಟ್ಟರು.

ನಾವು ನಮ್ಮ ಗ್ರಾಹಕರ ನಿರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸುತ್ತೇವೆ ಮತ್ತು ಮುಂದಿನ 6 ತಿಂಗಳಲ್ಲಿ ನಮ್ಮ ಆರ್ಡರ್ ಪುಸ್ತಕ ಮತ್ತು ಮಾರಾಟವನ್ನು ಹಲವು ಗುಣಕಗಳಲ್ಲಿ ಹೆಚ್ಚಿಸುತ್ತೇವೆ ಎಂದು ಐಎಂಸಿ ಸ್ವರ್ಣಾದ ನಿರ್ದೇಶಕ ಶ್ಯಾಮ್ ಮೆಹ್ತಾ ಹೇಳಿದ್ದಾರೆ.

ಪೂರೈಕೆ ಸರಪಣಿ ನಿರ್ವಹಣೆಯಲ್ಲಿ ಹಲವಾರು ಸುಧಾರಣೆಗಳು ಆಗಬೇಕಿವೆ ಎನ್ನುವುದು ನಮ್ಮ ಭಾವನೆ. ಇದನ್ನು ಯಶಸ್ವಿಯಾಗಿ ಪರಿಹರಿಸುವ ಮತ್ತು ಉತ್ಪಾದನೆ ಮತ್ತು ವಿತರಣಾ ಪ್ರಕ್ರಿಯೆಗಳನ್ನು ದಕ್ಷ ನಿರ್ವಹಣೆ ಮೂಲಕ ಹೆಚ್ಚಿಸುವ ವಿಶ್ವಾಸವಿದೆ ಎಂದು ಐಎಂಸಿ ಸ್ವರ್ಣಾ ನಿರ್ದೇಶಕಿ ಶ್ರೀಮತಿ ಮೌನಿಕಾಕೋರೆ ತಿಳಿಸಿದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');