ಮಾನ್ಯ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಸಾಹೇಬರೆ ನಿಮಗೊಂದು ಮನವಿ

0
🌐 Belgaum News :

 

ಹಾರ ತುರಾಯಿಗಳನ್ನು,ಹೂ ಗುಚ್ಚಗಳನ್ನು ಕಾಸ್ಟ್ಲಿ ಗಿಪ್ಟಗಳನ್ನು ಕೊಡುವ ಪದ್ದತಿಯನ್ನು ರದ್ದು ಮಾಡಿ ನಿಮ್ಮದೆ ಬಳಗದ ಕೆಲವು ಶೋಕಿಲಾಲ ರಾಜಕಾರಣಿಗಳು ಮತ್ತು ಕೆಲವಷ್ಟು ಸ್ವಯಂಘೋಷಿತ ಬೆಂಬಲಿಗರು ಮತ್ತು ಕಾರ್ಯಕರ್ತರ ಆಕ್ರೋಶಕ್ಕೆ ನೀವು ಕಾರಣವಾಗಿದ್ದೀರಿ ಯಾರೋ ಒಬ್ಬರು ಮಂತ್ರಿಗಳು ತಮ್ಮ ಅಭಿಮಾನಿಗಳಿಗೆ ಹೇಳಿ ಹಾರ ತುರಾಯಿ ಬದಲು ಪುಸ್ತಕ ಕೊಡಿ ಅಂದ ವಿಷಯ ಸ್ವಲ್ಪ ಮಟ್ಟಿಗೆ ಸಂಚಲನ ಮೂಡಿಸುತ್ತಿದ್ದಂತೆಯೆ ತಾವು ಕೂಡಲೆ ಅದನ್ನೆ ತಾವು ಸುತ್ತೋಲೆ ಹೊರಡಿಸಿದ್ದೀರಿ.ಆದರೆ ಈ ಆದೆಶಕ್ಕೂ ಮುನ್ನ ತಾವು ಒಂದಷ್ಟು ಯೋಚನೆಯನ್ನು ಖಂಡಿತ ಮಾಡಬೇಕಿತ್ತು.

ಕೊರೊನಾ ಸಂಕಷ್ಟದ ಸಮಯದಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಂಡು ಕೈಗೆ ಬಂದ ಬೆಳೆ ಮಾರುಕಟ್ಟೆ ತಲುಪಿದರೂ ಕೊಳ್ಳುವವರೇ ಇಲ್ಲದೆ ಕಂಗಾಲಾದ ಹೂ ಬೆಳೆಗಾರರ ಬದುಕು ಇದರಿಂದ ಮತ್ತಷ್ಟು ಸಂಕಷ್ಟಕ್ಕೆ ಈಡಾಗಿದೆ.ಜನಪರ ಆಡಳಿತ ಕೊಡುವ ಧಾವಂತದಲ್ಲಿ ಬಡ ಮತ್ತು ಕೆಳ ವರ್ಗದ ಹಾಗೂ ರೈತರ ಹೊಟ್ಟೆಯ ಮೇಲೆ ತಣ್ಣಿರ ಬಟ್ಟೆಯನ್ನು ಹೊದಿಸುವ ಹುನ್ನಾರದಂತೆ ತಮ್ಮ ಆದೇಶ ಕಾಣಿಸುತ್ತಿದೆ.ನೂರು ಇನ್ನೂರು ರೂಪಾಯಿ ಕೆ ಜಿ ಮಲ್ಲಿಗೆ,ಸಂಪಿಗೆ, ಸೇವಂತಿ,ಚಂಡು,ಹೀಗೆ ಹೂವುಗಳನ್ನು ಖರೀದಿಸಿ ಮಾಲೆ,ಹಾರ,ತುರಾಯಿ ಮಾಡುವ ಹೂಗಾರರ ಬದುಕು ಶತ ಶತಮಾನಗಳಿಂದ ಅದೆಷ್ಟು ಹಸನಾಗಿದೆ ಅನ್ನುವ ಕನಿಷ್ಠ ಜ್ಞಾನವನ್ನು ತಮ್ಮ ಅಧೀನ ಅಧಿಕಾರಿಗಳು ಹೊಂದಿದ್ದರೆ

ಅಥವಾ ರಸ್ತೆಯಲ್ಲಿ ನಿಂತು ಹತ್ತು ರೂಪಾಯಿ ಹಾರವನ್ನು ಇಪ್ಪತ್ತು ರೂಪಾಯಿ ಹೇಳಿ ಗಿರಾಕಿಯ ಚೌಕಾಸಿಯ ಬಳಿಕ ಹದಿನೈದಕ್ಕೆ ಇಳಿಸಿ ಮಾರಾಟ ಮಾಡಿ ಉಳಿದ ಐದು ರೂಪಾಯಿ ವೆಚ್ಚದಲ್ಲಿ ತನ್ನ ಶಾಲೆಯ ಫೀಜು,ಯುನಿಪಾರಮ್ ,ಒಂದಷ್ಟು ಪುಸ್ತಕ ಅಥವಾ ಮನೆಗೆ ಒಂದು ಕೆಜಿ ಅಕ್ಕಿ ತೆಗೆದುಕೊಂಡು ಹೋಗುವ ಅಪ್ರಾಪ್ತ ವಯಸ್ಸಿನ ಹುಡುಗರ ಬದುಕಿನ ಅನಿವಾರ್ಯತೆ ನಿಮ್ಮ ಕಣ್ಣಿಗೆ ಬೀಳದೆ ಇರುವದು ಶತಮಾನದ ದುರಂತವೇ ಸರಿ.

ನಿಮ್ಮ ಮನೆಯ ನಾಯಿ ಸತ್ತಾಗ ಹಾರ ತುರಾಯಿ ಹಾಕಿ ನಮಸ್ಕರಿಸಿದ ನಿಮ್ಮನ್ನು ಮತ್ತು ನೀವು ಸಂಸ್ಕಾರ ಮಾಡಿದ ಪದ್ದತಿಯನ್ನು ನೋಡಿ ನಮಗೆ ಸಿಕ್ಕ ಮುಖ್ಯಮಂತ್ರಿ ಕರುಣಾಳು ಅಂದುಕೊಂಡಿದ್ದ ನಮಗೆ ಸದ್ಯ ತಮ್ಮ ಆದೇಶದಿಂದ ಬರಸಿಡಿಲು ಬಡಿದಂತಾಗಿದೆ.ಒಂದು ದಿನ ಕಟಾವಿನ ಬಳಿಕ ಅಬ್ಬಬ್ಬಾ ಅಂದರೆ ಮೂರು ದಿನ ಉಳಿಯುವ ಅತಿ ಹೆಚ್ಚು ಅಂದರೆ ಇಪ್ಪತ್ತು ರೂಪಾಯಿ ಇಂದ ಹಿಡಿದು ಇಪ್ಪತ್ತೈದು ಸಾವಿರದ ಬೆಲೆ ಬಾಳುವ ಹಾರ,ತುರಾಯಿ,ಬೊಕೆಗಳನ್ನ ಕೊಡೊದನ್ನ ತಾವು ಬೇಡ ಅಂದು ಬಿಟ್ಟಿದ್ದೀರಿ ಅಷ್ಟೇ..ಇದರಿಂದ ಅದೇನೊ ಸಾಧಿಸಿದ ಸಂತೃಪ್ತ ಮನೋಭಾವ ನಿಮದಾಗಿದ್ದರೆ ಅದಕ್ಕಿಂತ ದುಃಖದ ಸಂಗತಿ ನಮಗೆ ಮತ್ತೊಂದಿಲ್ಲ.ಪುಸ್ತಕಗಳ ಕೊಡುಗೆಯನ್ನು ನಾವು ಒಪ್ಪಿಕೊಳ್ಳುತ್ತೇವೆ

ಆದರೆ ಅರ್ಧದಷ್ಟು ಹೆಬ್ಬೆಟ್ಟಿನ ಜನರು, ಸರಿಯಾಗಿ ಕನ್ನಡ ಪದಗಳ ಉಚ್ಚಾರಣೆ ಬಾರದವರು ತಮ್ಮ ಹಣಬಲ ಮತ್ತು ತೊಳ್ಬಲದಿಂದ ಶಾಸಕರಾಗಿ ವಿಧಾನಸೌಧದಲ್ಲಿ ವಿರಾಜಮಾನರಾಗಿರುವಾಗ ಜನಸಾಮಾನ್ಯರು ಕೊಡುವ ಪುಸ್ತಕಗಳು ಅರ್ಹರ ಕೈ ಸೇರಬಹುದೆ?? ಅದರ ಬದಲಾಗಿ ಸರ್ಕಾರಿ ಶಾಲೆಗಳಲ್ಲಿ ಗ್ರಾಂಥಾಲಯ ಸ್ಥಾಪಿಸಿ ಕನಿಷ್ಠ ಒಂದು ಕೊಠಡಿ ಕಟ್ಟಿಸಿ ನಾಡಿನ ಜನರಿಂದ ಪುಸ್ತಕಗಳನ್ನು ದೇಣಿಗೆಯಾಗಿ ಸಂಗ್ರಹಿಸಿದ್ದರೆ ಕನಿಷ್ಠ ಪಕ್ಷ ನಮ್ಮ ನಾಡಿಗೆ ಮತ್ತೊಬ್ಬ ಬೇಂದ್ರೆ,ಮಾಸ್ತಿ,ಕುವೆಂಪು, ಕಂಬಾರರಂತಹ ಮಹಾನ್ ಸಾಹಿತಿಗಳನ್ನು

ಸೃಷ್ಟಿಸಬಹುದಿತ್ತು.ಅದರ ಜೊತೆಗೆ ಬಡ ಮಕ್ಕಳ ಓದಿನ ದಾಹ ತೀರಿಸಿದ ಪುಣ್ಯವಾದರೂ ನಿಮಗೆ ಸಿಗುತ್ತಿತ್ತು ಅಲ್ಲವೇ?? ತಮ್ಮ ಆದೇಶದಿಂದ ಇನ್ನುಮುಂದೆ ರಾಜಕಾರಣಿಗಳಿಗೆ,ಚುನಾಯಿತ ಪ್ರತಿನಿಧಿಗಳಿಗೆ ಅವರ ಬೆಂಬಲಿಗರು,ಅಭಿಮಾನಿಗಳು ಮತ್ತು ಅವರಿಂದ ಕೆಲಸ ಆಗಬೇಕಾದವರು ತಮ್ಮ
ಕಪ್ಪ ಕಾಣಿಕೆಗಳನ್ನು
ಬಹಿರಂಗವಾಗಿ ಕೊಡುವದನ್ನು ನಿಲ್ಲಿಸಿ ಗೌಪ್ಯವಾಗಿ ಕೊಡುವ ಪದ್ದತಿ ರೂಢಿಗೆ ಬರುತ್ತದೆಯೆ ಹೊರತು ದೊಡ್ಡ ಬದಲಾವಣೆ ಅಂತೂ ಖಂಡಿತ ಆಗುವದಿಲ್ಲ.ದಯವಿಟ್ಟು ಹೂವು ಬೆಳೆಯುವ ರೈತ,ಅಥವಾ ರಸ್ತೆಯಲ್ಲಿ ಮಾಲೆ ಮಾರುವ ಹುಡುಗರು ಒಂದು ಹೊತ್ತಿನ ಊಟಕ್ಕೂ ಪರದಾಡುವ ಮುನ್ನ ಯಾರದೋ ಬಡವರ ಮನೆಯ ಎದುರು ಒಂದಷ್ಟು ಗುಲಾಬಿಗಳು ಅರಳಿದ ಜಾಗದಲ್ಲೆ ಬಾಡಿಹೋಗುವ ಮುನ್ನ ನಿಮ್ಮ ಆದೇಶದಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆ ತರಬಹುದಾ ಯೋಚಿಸಿ ನೋಡಿ.

-ದೀಪಕ ಶಿಂಧೇ

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');