ಪ್ರವಾಹದಲ್ಲಿ ನೊಂದವರಿಗೆ ಸಿಹಿ ಸುದ್ದಿ: ಮನೆ ಹಾನಿ ಪರಿಹಾರ ಏರಿಕೆ

0
🌐 Belgaum News :

ಬೆಂಗಳೂರು : ರಾಜ್ಯ ಸರ್ಕಾರವು ಪ್ರವಾಹದಲ್ಲಿ ಮಳೆ ಕಳೆದುಕೊಂಡವರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಪ್ರವಾಹದಲ್ಲಿ ಭಾಗಶಃ ಅಥವಾ ಪೂರ್ಣ ಮನೆ ಹಾನಿಗೆ ಪರಿಹಾರ ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಜುಲೈನಲ್ಲಿ ರಾಜ್ಯದ 13 ಜಿಲ್ಲೆಗಳ 61 ತಾಲೂಕುಗಳನ್ನು ಪ್ರವಾಹಪೀಡಿತ ತಾಲೂಕು ಎಂದು ಘೋಷಿಸಲಾಗಿದೆ.

ಈ ವ್ಯಾಪ್ತಿಯಲ್ಲಿ ಮನೆ ಹಾನಿ, ಮನೆಗಳಲ್ಲಿನ ಗೃಹೋಪಯೋಗಿ ವಸ್ತುಗಳು ಹಾನಿಯಾಗಿರುವ ನೆರೆ ಸಂತ್ರಸ್ತರಿಗೆ ಪರಿಹಾರವನ್ನು ಕೇಂದ್ರ ಸರ್ಕಾರದ ಎಸ್ ಡಿಆರ್ ಎಫ್, ಎನ್ ಡಿಆರ್ ಎಫ್ ಮಾರ್ಗಸೂಚಿ ಪ್ರಕಾರ ನೀಡಲಾಗುತ್ತಿತ್ತು.

ಆಗಸ್ಟ್ 12 ರಂದು ಆದೇಶ ಹೊರಡಿಸಿರುವ ರಾಜ್ಯ ಸರ್ಕಾರವು ಪರಿಷ್ಕೃತ ಪರಿಹಾರ ಪಟ್ಟಿ ಪ್ರಕಟಿಸಿದೆ.

ಪ್ರವಾಹದ ನೀರು ನುಗ್ಗಿರುವ ಮನೆಗಳ ಗೃಹೋಪಯೋಗಿ ವಸ್ತು, ಬಟ್ಟೆ, ಬರೆ ಹಾನಿಗೆ 3,800 ರೂ.ಬದಲಿಗೆ 10 ಸಾವಿರ ರೂ. ಪರಿಹಾರ ನೀಡಲಾಗುವುದು. ಶೇ.75 ಕ್ಕಿಂತ ಹೆಚ್ಚು ಹಾನಿಯಾಗಿರುವ ಮನೆಗಳಿಗೆ 95,100 ರೂ. ಬದಲಿಗೆ 5 ಲಕ್ಷ ರೂ.ಗಳಿಗೆ ಪರಿಷ್ಕರಿಸಲಾಗಿದೆ.

 

ಶೇ. 25 ರಿಂದ ಶೇ. 75 ರಷ್ಟು ಹಾನಿಯಾಗಿರುವ ಮನೆಗಳಿಗೆ 95,100 ರೂ. ಬದಲಿಗೆ 5 ಲಕ್ಷ ರೂ. ಶೇ. 25 ರಿಂದ 75 ರಷ್ಟು ತೀವ್ರ ಹಾನಿಯಾಗಿದ್ದರೂ ದುರಸ್ತಿ ಮಾಡಬಹುದಾದ ಮನೆಗೆ 3 ಲಕ್ಷ ರೂ.ಗಳಿಗೆ ಪರಿಷ್ಕರಿಸಲಾಗಿದೆ. 15 ರಿಂದ ಶೇ.25 ರಷ್ಟು ಭಾಗಶಃ ಮನೆ ಹಾನಿಗೆ 5,200 ರೂ. ಗಳಿದ್ದ ಪರಿಹಾರವನ್ನು 50,000 ರೂ.ಗಳಿಗೆ ಹೆಚ್ಚಿಸಲಾಗಿದೆ./////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');