ಒಂದು ವರ್ಷ ಕಾಲ ಹಬ್ಬ, ಜಾತ್ರೆಗಳಿಗೆ ನಿಷೇಧ ಹೇರಬೇಕು : ಸಿದ್ದರಾಮಯ್ಯ

0
🌐 Belgaum News :

ಬೆಂಗಳೂರು : ಕೊರೊನಾ ನಿಯಂತ್ರಣಕ್ಕೆ ವೀಕೆಂಡ್ ಲಾಕ್‍ಡೌನ್ ಸಾಲುವುದಿಲ್ಲ. ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವರ್ಷಗಳ ಕಾಲ ಹಬ್ಬ, ಜಾತ್ರೆಗಳಿಗೆ ನಿಷೇಧ ಹೇರಬೇಕು. ದಕ್ಷಿಣಕನ್ನಡ, ಉಡುಪಿ ಸೇರಿದಂತೆ ಕೇರಳ, ಮಹಾರಾಷ್ಟ್ರದ ಗಡಿಭಾಗದ ಜಿಲ್ಲೆಗಳಲ್ಲಿ ಸೋಂಕು ಹೆಚ್ಚುತ್ತಿದೆ. 3ನೇ ಅಲೆ ಬರುವ ಆತಂಕವೂ ಇದೆ. ಹೀಗಾಗಿ ಕಟ್ಟೆಚ್ಚರ ಅಗತ್ಯವಿದ್ದು, ಬಿಗಿಯಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಜನ ಕೂಡ ಮಾಸ್ಕ್ ಧರಿಸಬೇಕು, ಸರ್ಕಾರ ಹೆಚ್ಚು ಪ್ರಮಾಣದಲ್ಲಿ ಲಸಿಕೆ ತರಿಸಬೇಕು, 6 ವರ್ಷದ ಮಕ್ಕಳಿಗೂ ಲಸಿಕೆ ನೀಡಲು ಸಂಶೋಧನೆಗಳಾಗಬೇಕು, ಸಭೆಗಳ ಮೇಲೆ ಸಭೆ ನಡೆಸಿದರೆ ಸಾಲದು.ಯಡಿಯೂರಪ್ಪ ಕೂಡ ಸಭೆಗಳ ಮೇಲೆ ಸಭೆ ಮಾಡುತ್ತಿದ್ದರು. ಅದರಿಂದ ಏನೂ ಪ್ರಯೋಜನವಾಗಲಿಲ್ಲ ಎಂದು ಚಾಟಿ ಬೀಸಿದರು.

ರಾಜ್ಯ ಸರ್ಕಾರ ಇನ್ನು ಟೇಕಾಫ್ ಆಗಿಲ್ಲ. ಉಳಿದ ಅವಯನ್ನೂ ಪೂರೈಸುವುದಿಲ್ಲ. ಮಂತ್ರಿಯಾಗದೆ ಇರುವ ಬಹಳಷ್ಟು ಮಂದಿ ಬಿಜೆಪಿಯಲ್ಲಿದ್ದಾರೆ.ಅವರು ಹಂತ ಹಂತವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಮೈಸೂರು, ಚಾಮರಾಜನಗರ ಸೇರಿ 13 ಜಿಲ್ಲೆಗಳಿಗೆ ಸಂಪುಟದಲ್ಲಿ ಅವಕಾಶವೇ ಇಲ್ಲ. ಸರ್ಕಾರದಲ್ಲಿ ಇನ್ನೂ ಸಾಕಷ್ಟು ಗೊಂದಲಗಳಿವೆ ಎಂದರು.

ಸಚಿವರು ಕೊರೊನಾ ಸಂದರ್ಭದಲ್ಲಿ ಸಂಭ್ರಮಾಚರಣೆಯಲ್ಲಿ ಭಾಗವಹಿಸಬಾರದು. ಪೂಜೆ ಹಾಗೂ ಇತರೆ ಕಾರ್ಯಕ್ರಮಗಳಲ್ಲಿ ಮಾಸ್ಕ್ ಧರಿಸದೆ ಬೇಜಾವಬ್ದಾರಿಯಿಂದ ವರ್ತಿಸಲಾಗುತ್ತಿದೆ. ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ಎಲ್ಲ ಸಂದರ್ಭಗಳಲ್ಲೂ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');