ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನ, ಆಸ್ತಿಗಾಗಿ ಶರಣೆಯರ ಕಿತ್ತಾಟ; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಭಕ್ತರು

0
🌐 Belgaum News :

ಬೀದರ್: ನಗರದ ಸುಪ್ರಸಿದ್ಧ ಬಸವಗಿರಿಯ ಬಸವಸೇವಾ ಪ್ರತಿಷ್ಠಾನದ ಶರಣೆಯರ ಕಿತ್ತಾಟ ತಾರಕ್ಕೇರಿದೆ. ಅಕ್ಕ ಅನ್ನಪೂರ್ಣಾ ಹಾಗೂ ಡಾ. ಗಂಗಾಂಬಿಕೆ ನಡುವೆ ನಡೆದ ಜಗಳದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೆಲವು ದಿನಗಳಿಂದ ಬೂದಿಮುಚ್ಚಿದ ಕೆಂಡದಂತಿದ್ದ ಬಸವಗಿರಿಯ ಶರಣು ಉದ್ಯಾಣದಲ್ಲಿ ಆಂತರಿಕ ಕಚ್ಚಾಟವೀಗ ಬೀದಿಗೆ ಬಿದ್ದಿದೆ. ಪೂಜ್ಯ ಅಕ್ಕ ಅನ್ನಪೂರ್ಣಾ ಹಾಗೂ ಅಕ್ಕ ಡಾ. ಗಂಗಾಂಬಿಕೆ ಪಾಟೀಲ್ ಅವರ ನಡುವೆ ಆಗಾಗ ನಡೆಯುತ್ತಿದ್ದ ಸಮರವೀಗ ತಾರಕ್ಕೇರಿದ್ದು ಅಕ್ಕದ್ವಯರ ಭಕ್ತರಲ್ಲಿ ತಳಮಳ ಸೃಷ್ಟಿಸುವಂತೆ ಮಾಡಿದೆ.

ಕಳೆದ ಎರಡು ದಿನಗಳ ಹಿಂದೆ ಬಸವಗಿಯಲ್ಲಿ ಇಬ್ಬರ ನಡುವೆ ಜಗಳ ನಡೆಯುತ್ತಿದ್ದು, ಇವರು ಜಗಳ ಮಾಡುವ ದೃಶ್ಯವನ್ನು ಅಲ್ಲಿಯೇ ಇದ್ದ ಅವರ ಭಕ್ತರು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದು ಸಹಜವಾಗಿ ಅಕ್ಕ ಅನ್ನಪೂರ್ಣಾ ಹಾಗೂ ಡಾ. ಗಂಗಾಂಭಿಕಾಗೆ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಭಕ್ತರಲ್ಲಿ ಆತಂಕ ಹೆಚ್ಚಿಸುವಂತೆ ಮಾಡಿದೆ.

ಅಕ್ಕ ಅನ್ನಪೂರ್ಣಾ ದೀರ್ಘಕಾಲದ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಈ ಸಮಯವನ್ನು ನೋಡಿಕೊಂಡ ಕೆಲವು ಭಕ್ತರು ಅಕ್ಕ ಅನ್ನಪೂರ್ಣಾ ಅವರನ್ನು ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ಆ ಜಾಗದಲ್ಲಿ ಡಾ. ಗಂಗಾಂಬಿಕಾರನ್ನು ತಂದು ಅಧ್ಯಕ್ಷರನ್ನಾಗಿ ಮಾಡಿದ್ದರು.

ಈ ವಿಚಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಕ್ಕ ಅನ್ನಪೂರ್ಣಾಗೆ ಗೊತ್ತಿರಲಿಲ್ಲ. ಅವರು ಗುಣಮುಖರಾಗಿ ಬಸವಗಿರಿಗೆ ಬರುತ್ತಿದ್ದಂತೆ ಈ ವಿಚಾರ ಗೊತ್ತಾಗಿದೆ. ಹೀಗಾಗಿ ನೀನು ಅಧ್ಯಕ್ಷ ಸ್ಥಾನವನ್ನು ನನಗೆ ಬಿಟ್ಟುಕೊಡಬೇಕು ಎಂದು ಅಕ್ಕ ಅನ್ನಪೂರ್ಣಾ ಪಟ್ಟುಹಿಡಿದ್ದಾರೆ./////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');