ಅಥಣಿಯಲ್ಲಿ ಮೋಹರಮ್ ಶಾಂತಿಪಾಲನಾ ಸಭೆ

0
🌐 Belgaum News :
ಮೋಹರಮ್ ಹಿನ್ನೆಲೆಯಲ್ಲಿ ಅಥಣಿ ಪಟ್ಟಣದ ಪೊಲಿಸ್ ಸಮುದಾಯ ಭವನದಲ್ಲಿ ಶಾಂತಿಪಾಲನಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ಅಥಣಿ ಸಿ ಪಿ ಐ ಶಂಕರಗೌಡ ಬಸನಗೌಡರ ಕೊರೊನಾ ಮೂರನೆಯ ಅಲೆಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಸ್ವಲ್ಪ ವ್ಯತ್ಯಾಸ ಆದರೂ ಕೂಡ ಮಾನಸಿಕವಾಗಿ ಕುಂದಿ ಬಿಡುತ್ತೇವೆ ಅನ್ನುವ ಭಯ ಜನರನ್ನು ಕಾಡುವ ಸಂಧರ್ಭದಲ್ಲಿ ಇರುವ ನಾವು ಸರ್ಕಾರದ ಸುತ್ತೋಲೆ ಪಾಲಿಸಬೇಕಾಗಿರುವದು ನಮ್ಮ ಕರ್ತವ್ಯ ವಾಗಿದೆ.
ಮಾಸ್ಕ್ ಧರಿಸಿ,ಶುಭಾಷಯ ಹಂಚಿಕೆ ಮತ್ತು ಪ್ರಾರ್ಥನೆ ವೇಳೆ ಸಾಮಾಜಿಕ ಅಂತರ ಕಾಯ್ದುಕೊಂಡು ನಿಗದಿತ ಸಂಖ್ಯೆಯಲ್ಲಿ ಮಾತ್ರ ಜನರು ಸೇರಬೇಕು ಯಾವುದೆ ರೀತಿಯ ಮೆರವಣಿಗೆಗಳನ್ನು ಮಾಡುವಂತಿಲ್ಲ ಕಾನೂನು ಬದ್ದವಾಗಿ ಮೊಹರಮ್ ಆಚರಿಸುವ ಕಾರ್ಯವನ್ನು ನಡೆಸಬೇಕು ಮುಂಬರುವ ಅಲೆಗಳನ್ನು ಎದುರಿಸಲು ಪೂರ್ವ ತಯಾರಿ ಅಗತ್ಯ ಇರುವದರಿಂದ ಸರ್ಕಾರದ ಸುತ್ತೋಲೆ ಪಾಲಿಸಿ ಸಾಮಾಜಿಕ ಕಾಳಜಿಯನ್ನು ಎತ್ತಿ ಹಿಡಿಯಬೇಕು ಎಂದರು.
ಈ ವೇಳೆ ಮಾತನಾಡಿದ ಮುಸ್ಲಿಂ ಸಮಾಜದ ಮುಖಂಡ ಅಸ್ಲಮ್ ನಾಲಬಂದ್ ಮಾತನಾಡಿ ರಮಜಾನ,ಬಕ್ರೀದ್ ಹಬ್ಬಗಳನ್ನು ಸರ್ಕಾರದ ನಿಯಮಗಳಂತೆ ಆಚರಿಸುತ್ತ ಬಂದಿದ್ದೇವೆ.ಬೂಧವಾರ ಪೇಟ ಸೇರಿದಂತೆ ಉಳಿದ ನಾಲ್ಕು ಕಡೆ  ಮೊಹರಮ್ ಆಚರಿಸಲಾಗುತ್ತಿದ್ದು ಈ ಬಾರಿ ಸರ್ಕಾರದ ಸುತ್ತೋಲೆಯಂತೆ ನಿಯಮಾವಳಿ ಪಾಲಿಸುವ ಮೂಲಕ ಶಾಂತಿಯುತವಾಗಿ ಮೊಹರಮ್ ಆಚರಿಸಲು ಸಮಾಜದ ವತಿಯಿಂದ ಸಹಕರಿಸಲಿದ್ದೇವೆ ಎಂದರು.
ಮುಖಂಡರಾದಅಥಣಿ ಡಿ ವೈ ಎಸ್ ಪಿ ಎಸ್ ವಿ ಗಿರೀಶ್, ಅಥಣಿ ಪಿ ಎಸ್ ಐ ಕುಮಾರ ಹಾಡಕಾರ ಮತ್ತು  ಮುಖಂಡರಾದ ಮಹೇಂದ್ರ ರಾಜಂಗಳೆ,ಅರ್ಜುನ ರಾಜಂಗಳೆ,ಅಯಾಜ್ ಮಾಸ್ಟರ್,ಮಂಜು ಹೋಳಿಕಟ್ಟಿ,ಶಬ್ಬೀರ ಸಾತಬಚ್ಚೆ,ಗುಲಾಬ ನಾಲಬಂದ,ಸಯ್ಯದ ಅಮೀನ ಗದ್ಯಾಳ,ಸೇರಿದಂತೆ ಹಲವು ಸಮಾಜಗಳ ಮುಖಂಡರು ಉಪಸ್ಥಿತರಿದ್ದರು
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');