2023 ಕ್ಕೆ ಕಮಲ ಅರಳಿಸುವದೇ ನಮ್ಮ ಗುರಿ ರಮೇಶ ಜಾರಕಿಹೋಳಿ

0
🌐 Belgaum News :
ಅಥಣಿ.  ರಾಜ್ಯದ ಮುಖ್ಯಮಂತ್ರಿಯಾಗಿ ನನ್ನ ನೆಚ್ಚಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿರುವುದು ನನಗೆ ವ್ಯಯಕ್ತಿಕವಾಗಿ ಸಂತೋಷವಾಗಿದೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಅವರು ಅಥಣಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಿರೀಕ್ಷಣಾ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತ ಮಂತ್ರಿ ಆಗುವ ಆಸೆ ನನಗಿಲ್ಲ ಮಂತ್ರಿಯಾಗಲು ನನ್ನ ತಮ್ಮನಿದ್ದಾನೆ ಜೊತೆಗೆ ಅಥಣಿ ಮತಕ್ಷೇತ್ರದ ಶಾಸಕ ಮಹೇಶ ಕುಮಠಳ್ಳಿ ಇದ್ದಾರೆ. ಮಂತ್ರಿಯಾಗಲು ಹೈ ಕಮಾಂಡ ಅಥವಾ ಸಂಘ ಪರಿವಾರದ ಮೇಲೆ ಯಾವುದೇ ಒತ್ತಡ ತಂದಿಲ್ಲ ಎಂದು ಸ್ಪಷ್ಟಪಡಿಸಿದರು.
 
 ಮಂತ್ರಿಯಾಗುವುದಕ್ಕಿಂತ ಅಭಿವೃದ್ಧಿ ಮತ್ತು ಜನಪರ ಕಾರ್ಯಗಳ ಅನುಷ್ಠಾನಗೊಳ್ಳುವುದೇ ನನಗೆ ಪ್ರಾಮುಖ್ಯವಾಗಿದೆ ಎಂದ ಅವರು ಐದಾರು ತಿಂಗಳ ಅವಧಿಯಲ್ಲಿ ಅಥಣಿ ಅಭಿವೃದ್ಧಿ ಕುಂಠಿತಗೊಂಡಿತ್ತು ಇದೇ ಕಾರಣಕ್ಕಾಗಿಯೇ ಝುಂಜರವಾಡ ಲಿಫ್ಟ ಮೂಲಕ ತೆಲಸಂಗ ಜಿಲ್ಲಾ ಪಂಚಾಯತ ಹಾಗೂ ಐಗಳಿ ಜಿಲ್ಲಾ ಪಂಚಾಯತ ಕ್ಷೇತ್ರದ ಕೆಲ ಭಾಗಗಳಿಗೆ ನೀರು ಒದಗಿಸುವ ಹಾಗೂ ಇನ್ನಿತರ ನೀರಾವರಿ ಯೋಜನೆಗಳು ಕೂಡ ಕುಂಠಿತ ಗೊಂಡಿದ್ದವು ಇನ್ನು ಕೆಲವೇ ದಿನಗಳಲ್ಲಿ ಈ ಯೋಜನೆಗಳಿಗೆ ಚಾಲನೆ ಸಿಗಲಿದ್ದು, ಈ ಕಾರಣಕ್ಕಾಗಿಯೇ ಇಂದು ನಾನು ಅಥಣಿಗೆ ಭೇಟಿ ನೀಡಿರುವೆ ಎಂದರು. 
 
ಬಿಜೆಪಿಯಲ್ಲಿ ಸಂತೋಷವಾಗಿದ್ದೇನೆ ಬಿಜೆಪಿಯ ರಾಜ್ಯ ಹಾಗೂ ದಿಲ್ಲಿ ಮಟ್ಟದ ಹೈ ಕಮಾಂಡ ಮತ್ತು ಸಂಘ ಪರಿವಾರ ನನಗೆ ಪ್ರೀತಿ, ವಿಶ್ವಾಸ ನೀಡಿದೆ. ನಾನು ೨೦ ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದರೂ ಕೂಡ ಅಲ್ಲಿ ನನಗೆ ಪ್ರೀತಿ, ವಿಶ್ವಾಸ ಸಿಗಲಿಲ್ಲ ಹೀಗಾಗಿ ಬಿಜೆಪಿಯಲ್ಲಿರುವುದು ನನಗೆ ಸಂತೋಷ ತಂದಿದೆ ಎಂದರು. ಸಿಡಿ ಪ್ರಕರಣ  ಅಂತ್ಯಗೊಳಿಸಿ ನಿಮ್ಮನ್ನು ಬೊಮ್ಮಾಯಿ ಸರಕಾರದಲ್ಲಿ ಬಿಜೆಪಿ ಹೈ ಕಮಾಂಡ ಮಂತ್ರಿ ಮಾಡಬಹುದಿತ್ತು ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದ್ದು, ಪ್ರಕರಣದ ಕುರಿತಾಗಿ ಈಗಲೇ ನಾನು ಉತ್ತರಿಸುವುದಿಲ್ಲ ಆದರೆ ೨೦೨೩ ರ ವರೆಗೆ ಬಿಜೆಪಿಯನ್ನು ಮತ್ತಷ್ಟು ಭದ್ರಗೊಳಿಸಿ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ
 ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಶಾಸಕರನ್ನು ಗೆಲ್ಲುವಂತೆ ಮಾಡಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಗುರಿ ತಮ್ಮದಾಗಿದೆ ಎಂದರು. ಈ ಹಿಂದೆ ನಾನು ನೀರಾವರಿ ಸಚಿವನಾಗಲು ಅಥಣಿ ಶಾಸಕ ಮಹೇಶ ಕುಮಠಳ್ಳಿಯೇ ಕಾರಣ. ಮಹೇಶ ಕುಮಠಳ್ಳಿ ಇಂದು ತಮ್ಮ ಮಂತ್ರಿ ಸ್ಥಾನ ತ್ಯಾಗ ಮಾಡಿದ್ದಾರೆ ಬಿಜೆಪಿ ಹೈ ಕಮಾಂಡ ಕೈ ಗೊಂಡ ನಿರ್ಣಯಕ್ಕೆ ಅವರು ಬದ್ಧರಾಗಿದ್ದಾರೆ
 ಮುಂದಿನ ದಿನಗಳಲ್ಲಿ ಅವರ ಈ ತ್ಯಾಗಕ್ಕೆ ಉತ್ತಮ ಫಲ ದೊರಕಲಿದೆ ಎಂದು ಹೇಳಿದ ಅವರು ರಾಜಕೀಯದಲ್ಲಿ ಯಡ್ಯಂತ್ರಗಳು ಸಾಮಾನ್ಯ ಅದರಲ್ಲಿ ತಮಗಿಂತ ಶೂರರಿದ್ದವರಿಗಂತೂ ಷಡ್ಯಂತ್ರ ಮಾಡೇ ಮಾಡುತ್ತಾರೆ ಷಡ್ಯಂತ್ರಗಳಿಗೆ ನಾನು ಹೆದರುವವನಲ್ಲ ಎಂದು ಸ್ಪಷ್ಟಪಡಿಸಿದರು.
ಅಥಣಿ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಶಾಸಕ ಮಹೇಶ ಕುಮಠಳ್ಳಿ, ಧುರೀಣರಾದ ಕಿರಣಕುಮಾರ ಪಾಟೀಲ, ಮಲ್ಲಪ್ಪ ಹಂಚಿನಾಳ, ಅಮೂಲ ನಾಯಿಕ, ಸುರೇಶ ಮಾಯಣ್ಣವರ, ಮಲ್ಲಿಕಾರ್ಜುನ ಅಂದಾನಿ, ಶಿವಗೌಡಾ ಜಗದೇವ, ಅನೀಲ ಸೌದಾಗರ,  ದರೂರ ಗ್ರಾಮ ಪಂಚಾಯತಿ ಅಧ್ಯಕ್ಷ ದಿಲೀಪ ಕಾಂಬಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');