ಜೈನ ಸಮುದಾಯಕ್ಕೆ ಮಾಡಿದ ಘೋರ ಅನ್ಯಾಯ ಜೈನ ಸಮಾಜ ಸಂಘಟನೆಯ ನಿರ್ದೇಶಕರು ಹಾಗೂ ನಿವೃತ್ತ ಅಭಿಯಂತರಾದ ಅರುಣಕುಮಾರ ಯಲಗುದ್ರಿ ಆಕ್ರೋಶ ವ್ಯಕ್ತ

0
🌐 Belgaum News :

ಶೇಡಬಾಳ :: – ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಜೈನ ಸಮುದಾಯದ ಶಾಸಕರಿಗೆ ಸಚಿವಸ್ಥಾನ ನೀಡುತ್ತಾ ಬಂದಿದ್ದಾರೆ. ಆದರೆ ಬಿಜೆಪಿ ಸರ್ಕಾರದಲ್ಲಿ ಜೈನರನ್ನು ಕಡೆಗಣಿಸಿರುವುದು ಜೈನ ಸಮುದಾಯಕ್ಕೆ ಮಾಡಿದ ಘೋರ ಅನ್ಯಾಯವಾಗಿದೆ ಎಂದು ಕರ್ನಾಟಕ ರಾಜ್ಯ ಜೈನ ಸಮಾಜ ಸಂಘಟನೆಯ ನಿರ್ದೇಶಕರು ಹಾಗೂ ನಿವೃತ್ತ ಅಭಿಯಂತರಾದ ಅರುಣಕುಮಾರ ಯಲಗುದ್ರಿ ಆಕ್ರೋಶ ವ್ಯಕ್ತ ಪಡಿಸಿದರು.

ಅವರು ಶನಿವಾರ ದಿ.14 ರಂದು ಕಾಗವಾಡದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತ ಈ ವಿಷಯ ತಿಳಿಸಿದರು. 1978 ರಿಂದ ದೇವರಾಜ ಅರಸು, ಆರ್.ಗುಂಡುರಾವ್, ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ, ಎಸ್.ಎಂ.ಕೃಷ್ಣ ಕುಮಾರಸ್ವಾಮಿ, ಧರ್ಮಸಿಂಗ್ ಹಾಗೂ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಜೈನ ಸಮುದಾಯದ ಎ.ಬಿ.ಜಕನೂರ, ಅಭಯಚಂದ್ರ ಜೈನ್, ಲಕ್ಷ್ಮೀಸಾಗರ, ಡಿ.ಸುಧಾಕರ, ವೀರಕುಮಾರ ಪಾಟೀಲರು ಸಚಿವರಾಗಿದ್ದರು. ಆದರೆ 2008 ರಲ್ಲಿ ಬಿಜೆಪಿ ನೇತೃತ್ವದ ಯಡಿಯುರಪ್ಪ, ಸದಾನಂದಗೌಡ ಹಾಗೂ ಜಗದೀಶ ಶೆಟ್ಟರ ಅವರ ಮಂತ್ರಿಮಂಡಲದಲ್ಲಿ ಜೈನರಿಗೆ ಪ್ರಾತಿನಿದ್ಯ ನೀಡಲಿಲ್ಲ.

ಈಗ ಬಸವರಾಜ ಬೊಮ್ಮಾಯಿಯವರ ಸಚಿವ ಸಂಪುಟದಲ್ಲೂ ಜೈನರ ಏಕೈಕ ಬಿಜೆಪಿ ಬೆಳಗಾವಿಯ ಅಭಯ ಪಾಟೀಲರು ಶಾಸಕರಾಗಿದ್ದರೂ ಕೂಡ ಸಚಿವ ಸ್ಥಾನ ನೀಡದೇ ಸಮುದಾಯವನ್ನು ಕಡೆಗಣಿಸಿದ್ದು ಜೈನರಿಗೆ ಘೋರ ಅನ್ಯಾಯ ಮಾಡಿದ್ದಾರೆ, ಬಿಜೆಪಿಯ ರಾಜ್ಯ ಹಾಗೂ ರಾಷ್ಟ್ರೀಯ ವರಿಷ್ಟರು ಗಂಭಿರವಾಗಿ ಪರಿಗಣಿಸಿ ಸರಿ ಪಡಿಸದಿದ್ದರೆ ಮುಂದಿನ ದಿನಮಾನಗಳಲ್ಲಿ ಜೈನರು ಯೋಗ್ಯ ನಿರ್ಣಯ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಸುಮಾರು 1 ಕೋಟಿ ಜೈನ ಸಮಾಜದ ಜನಸಂಖ್ಯೆ ಇದ್ದರೂ ಏಕೈಕ ಶಾಸಕರಿದ್ದಾರೆ ಅವರಿಗೆ ಸಚಿವ ಸ್ಥಾನ ನೀಡದೆ ಅನ್ಯಾಯವೆಸಗಿದ್ದು ತಕ್ಷಣವೇ ಪಕ್ಷದ ವರಿಷ್ಟರು ಜೈನ ಸಮಾಜದ ಬೆಳಗಾವಿ ಶಾಸಕ ಅಭಯ ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕೆಂದು À ಅರುಣಕುಮಾರ ಯಲಗುದಿ ಒತ್ತಾಯಿಸಿದರು.

ರಾಜ್ಯದಲ್ಲಿ ಜೈನ ಸಮಾಜ ಅಲ್ಪಸಂಖ್ಯಾತ ಸಮಾಜವಾಗಿದ್ದರೂ ಕೂಡ ಒಂದು ಕೋಟಿ ಜನಸಂಖ್ಯೆ ಹೊಂದಿದ್ದೇವೆ. ಜೈನ ಸಮಾಜದ ಶಾಸಕ ಅಭಯ ಪಾಟೀಲÀರಿಗೆ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ನೀಡದೆ ಸಮಾಜವನ್ನು ಕಡೆಗಣಿಸಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');