ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಹಳೆಯ ಕಮೀಟಿಯನ್ನು ವಿಸರ್ಜಿಸಿ ನೂತನವಾಗಿ ಕಮೀಟಿಯನ್ನು ರಚಿಸಲಾಯಿತು :ಜಿಲ್ಲಾಧ್ಯಕ್ಷ ರಾಜೇಂದ್ರ ಐಹೋಳೆ

0
🌐 Belgaum News :

ಶೇಡಬಾಳ :: – ಕಾಗವಾಡ ತಾಲೂಕಾ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಹಳೆಯ ಕಮೀಟಿಯನ್ನು ವಿಸರ್ಜಿಸಿ ನೂತನವಾಗಿ ಕಮೀಟಿಯನ್ನು ರಚಿಸಲಾಯಿತು ಎಂದು ಜಿಲ್ಲಾ ಮಾದಿಗ ಮಿಸಲಾತಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ರಾಜೇಂದ್ರ ಐಹೋಳೆ ತಿಳಿಸಿದರು.

ಗುರುವಾರ ದಿ.12 ರಂದು ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ ಪ್ರವಾಸಿ ಮಂದಿರದಲ್ಲಿ ಸಭೆ ಈ ನಿರ್ಣಯ ಕೈಗೊಳ್ಳಲಾಯಿತೆಂದು ತಿಳಿಸಿದರು.ಸಮಾಜವನ್ನು ಸದೃಡಗೊಳಿಸಲು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತ ಯುವಕರನ್ನು ಕಮೀಟಿಯಲ್ಲಿ ಪದಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ ಎಂದರು.

ಕೇಂದ್ರದಲ್ಲಿ ಸಚಿವರಾಗಿರುವ ಎ. ನಾರಾಯಣಸ್ವಾಮಿಯವರು ದಿ.16 ರಂದು ಕೇಂದ್ರ ಸಚಿವರಾದ ನಂತರ ಪ್ರಥಮ ಬಾರಿಗೆ ಬೆಂಗಳೂರಿಗೆ ಆಗಮಿಸುತ್ತಿದ್ದು ಅವರನ್ನು ಭವ್ಯವಾಗಿ ಸ್ವಾಗತಿಸಲು ಬೆಳಗಾವಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಿಂದ ಮುಖಂಡರು ಹೋಗುತ್ತಿದ್ದು ಅಥಣಿ ಹಾಗೂ ಕಾಗವಾಡ ತಾಲೂಕಿನಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.

ಪದಾಧಿಕಾರಿಗಳ ಆಯ್ಕೆ;- ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ.ಸುಕುಮಾರ ಮೊಳೇಕರ ಕಾಗವಾಡ ತಾಲೂಕಾ ಅಧ್ಯಕ್ಷರಾಗಿ ಯಶವಂತ ಮೆಲಗಡೆ, ಗೌರವ ಅಧ್ಯಕ್ಷರಾಗಿ ಪರಶುರಾಮ ಅವಳೆ, ಉಪಾಧ್ಯಕ್ಷರಾಗಿ ರಮೇಶ ಐಹೊಳೆ, ಮಾರುತಿ ಲೊಕುಂಡೆಯವರನ್ನು ಆಯ್ಕೆ ಮಾಡಲಾಯಿತು.

ಈ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ರಾಜೇಂದ್ರ ಐಹೊಳೆ ವಹಿಸಿದ್ದರು. ಅಥಣಿ ತಾಲೂಕಾ ಅಧ್ಯಕ್ಷ ಹಣಮಂತ ಅರ್ಧಾವೂರ ಮಹಿಳಾ ಅಧ್ಯಕ್ಷರಾದ ಸುನಿತಾ ಐಹೊಳೆ, ಸಮಾಜದ ಮುಖಂಡರಾದ ಸಂಗಪ್ಪ ಮಾಯನಟ್ಟಿ, ಬಸವರಾಜ ಹೊಳಿಕಟ್ಟಿ, ಚನ್ನಪ್ಪ ಜಗದಾಳೆ, ಸದಾಶಿವ ಮಾಶ್ಯಾಳೆ, ಮುತ್ತಪ್ಪ ಜಮಖಂಡಿ,ಅಜಿತ ದೂಳಗಾವಿ, ಆನಂದ ವಂಟಗೂಡಿ, ಪರಶುರಾಮ ಅವಳೆ, ಶೇಖರ ಕಾಟ್ಕರ್, ರಮೇಶ ಐಹೊಳೆ, ಸಂದೀಪ ಬಿರುಣಗಿ, ಸೇರಿದಂತೆ ಅನೇಕ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಜಿಲ್ಲಾಧ್ಯಕ್ಷ ರಾಜೇಂದ್ರ ಐಹೊಳೆ, ಅಥಣಿ ತಾಲೂಕಾ ಅಧ್ಯಕ್ಷ ಹಣಮಂತ ಅರ್ಧಾವೂರ ಮತ್ತಿತರರು ಸನ್ಮಾನಿಸಿದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');