ಯಾವುದೇ ತಾರತಮ್ಯ ಎಸಗದೇ ಅಧಿಕಾರಿಗಳು ಸರ್ವೆ ಮಾಡಿ ಫಲಾನುಭವಿಗಳಿಗೆ ಯೋಗ್ಯ ಪರಿಹಾರ ದೊರಕಿಸಿ ಕೊಡಲು ಶ್ರಮಿಸುವಂತೆ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಅಧಿಕಾರಿಗಳಿಗೆ ಸೂಚನೆ

0
🌐 Belgaum News :

ಶೇಡಬಾಳ ::: ಕೃಷ್ಣಾ ನದಿಯ ಪ್ರವಾಹದಿಂದ ಹಾನಿಯಾದ ಮನೆಗಳ ಹಾಗೂ ಬೆಳೆ ಸಮೀಕ್ಷೆಯನ್ನು ಯಾವುದೇ ತಾರತಮ್ಯ ಎಸಗದೇ ಅಧಿಕಾರಿಗಳು ಸರ್ವೆ ಮಾಡಿ ಫಲಾನುಭವಿಗಳಿಗೆ ಯೋಗ್ಯ ಪರಿಹಾರ ದೊರಕಿಸಿ ಕೊಡಲು ಶ್ರಮಿಸುವಂತೆ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಶುಕ್ರವಾರ ದಿ. 13 ರಂದು ಕೆಂಪವಾಡದ ಶಾಸಕರ ಕಾರ್ಯಾಲಯದಲ್ಲಿ ಜರುಗಿದ ತಾಲೂಕಾಧಿಕಾರಿಗಳ ಸಭೆಯಲ್ಲಿ ಮಾತನಾಡುತ್ತಿದ್ದರು.

ಅವರು ಮುಂದೆ ಮಾತನಾಡಿ ಇತ್ತೀಚಿಗೆ ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದಾಗಿ ಕೃಷ್ಣಾ ನದಿಗೆ ಮಹಾಪೂರ ಬಂದು ನದಿ ತೀರದ ಗ್ರಾಮಗಳಾದ ಜುಗೂಳ, ಮಂಗಾವತಿ, ಶಹಾಪೂರ, ಕುಸನಾಳ, ಮೋಳವಾಡ, ಉಗಾರ, ಐನಾಪೂರ, ಕೃಷ್ಣಾಕಿತ್ತೂರ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳ ಜನರು ಮನೆ ಹಾಗೂ ಬೆಳೆ ಹಾನಿ ಸಂಭವಿಸಿದೆ. ಅಧಿಕಾರಿಗಳು ಸರ್ವೇ ಮಾಡುವ ಸಮಯದಲ್ಲಿ ನಿಷ್ಪಕ್ಷಪಾತವಾಗಿ

ಕಾರ್ಯ ನಿರ್ವಹಿಸಿ ಫಲಾನುಭವಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ದೊರಕಿಸಿ ಕೊಡಲು ಸಹಕರಿಸುವಂತೆ ಹೇಳಿದರು.

ಈ ಸಮಯದಲ್ಲಿ ಕಾಗವಾಡ ತಹಶೀಲ್ದಾರ್ ಶ್ರೀ ರಾಜೇಶ್ ಬುರ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಮ್ ಆರ್ ಮುಂಜೆ, ಅನೇಕ ಅಧಿಕಾರಿಗಳು ಮತ್ತು ಹಿರಿಯ ಮುಖಂಡರಾದ ದಾದಾಗೌಡ ಪಾಟೀಲ, ಶಿವಾನಂದ ಬುರ್ಲಿ, ರೇವಣ್ಣಾ ಪಾಟೀಲ, ಮಹಾದೇವ ಕೋರೆ, ದಿಲೀಪ ಪವಾರ, ಹರೀಬಾ ಹಂಚನಾಳೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');