ಸಚಿವರ ಆತಿಥ್ಯಕ್ಕೆ ಅಧಿಕಾರಿಗಳ ನಿಯೋಜನೆ ಸುದ್ದಿ ಸುಳ್ಳು: ಸ್ಪಷ್ಟನೆ

0
🌐 Belgaum News :

 

ಬೆಳಗಾವಿ, ಆ.15. : ಜಲಸಂಪನ್ಮೂಲ ಹಾಗೂ ಜಿಲ್ಲಾ ಸಚಿವರ ಪ್ರವಾಸ ಸಮಯದಲ್ಲಿ ಊಟೋಪಹಾರ ಮತ್ತಿತರ ಸಮನ್ವಯಕ್ಕಾಗಿ ಅಧಿಕಾರಿಗಳನ್ನು ನಿಯಮಿಸಿದ ಕುರಿತು ಆದೇಶ ಪ್ರತಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಆದರೆ ಈ ರೀತಿಯ ಯಾವುದೇ ಆದೇಶವನ್ನು ಹೊರಡಿಸಿಲ್ಲ ಎಂದು ಜಿ.ಆರ್.ಬಿ.ಸಿ. ಹಿಡಕಲ್ ಡ್ಯಾಮ್ ಅಧಿಕ್ಷಕ ಅಭಿಯಂತರರು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿರುವ ಈ ರೀತಿಯ ಆದೇಶಪತ್ರಕ್ಕೆ ಯಾವುದೇ ಸಹಿ ಅಥವಾ ಕಚೇರಿಯ ಮೊಹರು ಇರುವುದಿಲ್ಲ.

ಇಂತಹ ಆದೇಶವನ್ನು ಕೂಡ ಸದರಿ ಕಚೇರಿಯಿಂದ ಹೊರಡಿಸಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');