ಸ್ವಾತಂತ್ರ್ಯ ಪೂರ್ವಜರ ತ್ಯಾಗ, ಬಲಿದಾನದ ಪ್ರತಿಫಲ : ರೈತ ಶಂಕರಗೌಡ ಪಾಟೀಲ

0
🌐 Belgaum News :

ಬೆಳಗಾವಿ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಒಡೆತನದ ಹುದಲಿಯ ಬೆಳಗಾಂ ಶುಗರ ಪೈ.ಅ ಕಾರ್ಖಾನೆಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. 2020-21 ನೇ ಕಬ್ಬು ನುರಿಸುವ ಹಂಗಾಮಿನಲ್ಲಿ ಕಾರ್ಖಾನೆಗೆ ಹೆಚ್ಚು ಕಬ್ಬನ್ನು ಸಂದಾಯ ಮಾಡಿದ ಪ್ರಗತಿಪರ ರೈತ ಶಂಕರಗೌಡಾ ಶಿವನಗೌಡಾ ಪಾಟೀಲ, ಹಾಗೂ ಬಸಪ್ಪಾ ಅಪ್ಪಯ್ಯಪ್ಪಾ ಹಮ್ಮಿಗಿ ಅವರು ಧ್ವಜಾರೋಹಣ ನೆರವೇರಿಸಿದರು.

ಬಳಿಕ ರೈತ ಶಂಕರಗೌಡಾ ಪಾಟೀಲ ಮಾತನಾಡಿ, ಭಾರತ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಲು ಮಹಾತ್ಮಾ ಗಾಂದೀಜಿ ಮೊದಲಿಗರಾಗಿ , ಹಲವಾರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳ ನಂತರ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಇಂದಿಗೆ 75 ವರ್ಷಗಳಾಗಿದೆ. ಆದರು ಸಹ ನಮ್ಮ ದೇಶ ಇನ್ನು ಹಲವಾರು ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಬೇಕಾಗಿದೆ ಎಂದು ಹೇಳಿದರು .

ಈ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ  ಸತೀಶ ಜಾರಕಿಹೊಳಿಯವರು ಹುದಲಿ ಗ್ರಾಮದಲ್ಲಿ ಬೆಳಗಾಂ ಶುಗರ ಪೈ ಅ ಕಾರ್ಖಾನೆ ಸ್ಥಾಪನೆ ಮಾಡಿರುವುದರಿಂದ ಈ ಭಾಗದ ರೈತರಿಗೆ ಕಬ್ಬು ಕಳುಹಿಸಲು ಅನುಕೂಲ ಮಾಡಿಕೊಟ್ಟಿರುತ್ತಾರೆ.  ಸಧ್ಯ ಸಂಸ್ಥೆಯ ಚೇರಮನರಾದ ಪ್ರದೀಪಕುಮಾರ ಇಂಡಿಯವರ ಮಾರ್ಗದರ್ಶನದಲ್ಲಿ ರೈತರಿಗೆ ಸಾಕಷ್ಟು ಸೌಲಭ್ಯಗಳನ್ನು ಒದಗಿಸುವ ಮೂಲಕ ರೈತರ ಅಜವೃದ್ಧಿಗೆ ಕಾರಣರಾಗಿದ್ದಾರೆ ಎಂದು ತಿಳಿಸಿದರು .

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಎಲ್.ಆರ್.ಕಾರ ಮಾತನಾಡಿ, ನಮ್ಮ ದೇಶ ಆರ್ಥಿಕತೆ ಬಲಪಡಿಸಲು ನಾವು ನಮ್ಮ ಕಾರ್ಖಾನೆ ಕಾರ್ಯ ಕ್ಷಮತೆಯನ್ನು ಸಂರ್ಪೂಣವಾಗಿ ಉಪಯೋಗಿಸಿಕೊಂಡು ಬರುವ ಹಂಗಾಮಿನಲ್ಲಿ ಹೆಚ್ಚು ಕಬ್ಬನ್ನು ನುರಿಸುವ ಮೂಲಕ ದೇಶದ ಆರ್ಥಿಕತೆ ಸುಧಾರಣೆ ಮಾಡಲು ನಾವು ಸಹ ಕೊಡುಗೆ ನೀಡಬೇಕಾಗಿದೆ ಎಂದು ತಿಳಿಸಿದರು . ಈ ವೇಳೆ  ತಾಂಕ ಉಪಾಧ್ಯಕ್ಷ ಎ.ಎಸ್.ರಾಣಾ , ಹಾಗೂ ಕಾರ್ಖಾನೆಯ ಹಿರಿಯ ವ್ಯವಸ್ಥಾಪಕರುಗಳು , ಕಾರ್ಮಿಕ ಸಿಬ್ಬಂದಿ ಇದ್ದರು.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');