75 ನೇ ಅಮೃತ ಸ್ವಾತಂತ್ರ್ಯ ಮಹೋತ್ಸವ ಹಾಗೂ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣಜಯಂತಿಆಚರಣೆ

0
🌐 Belgaum News :

ಅಂಗಡಿತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯ, ಬೆಳಗಾವಿ
75 ನೇ ಅಮೃತ ಸ್ವಾತಂತ್ರ್ಯ ಮಹೋತ್ಸವ ಹಾಗೂ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣಜಯಂತಿಆಚರಣೆ

ನಗರದ ಸುರೇಶಅಂಗಡಿ ಶಿಕ್ಷಣ ಸಂಸ್ಥೆಯಅಂಗಡಿತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ75 ನೇಯಅಮೃತ ಸ್ವಾತಂತ್ರ್ಯ ಮಹೋತ್ಸವ ಹಾಗೂ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣಜಯಂತಿಯನ್ನುಆಚರಿಸಲಾಯಿತು. ಸಂಸ್ಥೆಯಕಾರ್ಯಾಧ್ಯಕ್ಷೆ ಹಾಗೂ ಸಂಸದೆ ಮಂಗಲ ಅಂಗಡಿಧ್ವಜಾರೋಹಣ ನೆರವೇರಿಸಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಹಾಗೂ ಕಿತ್ತೂರುರಾಣಿಚೆನ್ನಮ್ಮರನ್ನು ನೆನೆಯುತ್ತ ಮಾತನಾಡಿ, ಸ್ವದೇಶಿ ಕೈಗಾರಿಕೆ ಬೆಳವಣಿಗೆ, ಸ್ವದೇಶಿ ವಸ್ತುಗಳ ಬಳಕೆ, ಆತ್ಮನಿರ್ಭರ ಭಾರತವನ್ನು ಬೆಳೆಸುವಲ್ಲಿ ಎಲ್ಲರೂ ಸಹಭಾಗಿಗಳಾಗಿ ದೇಶ ಸೇವೆ ಮಾಡಬೇಕೆಂದುಕರೆ ನೀಡಿದರು.

ಸಂಸ್ಥೆಯ ನಿರ್ದೇಶಕಿಡಾ. ಸ್ಪೂರ್ತಿ ಪಾಟೀಲ ಮಾತನಾಡಿ, ಭಾರತದೇಶವು ಸ್ವಾತಂತ್ರ್ಯ ನಂತರ ಶೈಕ್ಷಣಿಕ, ತಾಂತ್ರಿಕ, ಕ್ರೀಡಾ ಹಾಗೂ ಸಾಂಸ್ಕøತಿಕ ಕಲೆಗಳಿಂದ ಶ್ರೇಷ್ಟವಾಗಿದೆ. ಭಾರತದಲ್ಲಿನಯುವಶಕ್ತಿಜಗತ್ತಿನಲ್ಲೇ ಪ್ರಸಿದ್ಧಿಯಾಗಿದ್ದು, ಯುವಕರು, ವಿದ್ಯಾರ್ಥಿಗಳು ಕೌಶಲ್ಯ ಕಲೆಗಳನ್ನು ಕಲಿತುದೇಶವನ್ನುಉನ್ನತ ಮಟ್ಟಕ್ಕೆಒಯ್ಯುವಲ್ಲಿ ಶ್ರಮಿಸಬೇಕೆಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯಡಾ. ಆನಂದದೇಶಪಾಂಡೆಕಾಲೇಜಿನ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಮತ್ತುಎಲ್ಲ ನಾಗರಿಕರು ನಿರ್ವಹಿಸಬೇಕಾದತಮ್ಮ ಕರ್ತವ್ಯಗಳ ಬಗ್ಗೆ, ಶೈಕ್ಷಣಿಕ ಮತ್ತು ಪಠ್ಯೇತರ ಕೌಶಲ್ಯಗಳ ತರಬೇತಿಯೊಂದಿಗೆ ವಿದ್ಯಾರ್ಥಿಗಳಲ್ಲಿ ಸ್ವದೇಶಿಯತೆ ಹಾಗೂ ಭಾರತೀಯತೆಯಅರಿವು ಮೂಡಿಸುವಂತೆ ಶಿಕ್ಷಕರಿಗೆ ಸಲಹೆ ನೀಡಿದರು.

ಅಂಗಡಿ ಸ್ಕೂಲ್‍ಆಫ್‍ಆರ್ಕಿಟೆಕ್ಚರ್‍ನ ಪ್ರಾಚಾರ್ಯ ಪ್ರೊ. ಎಚ್.ಎಸ್. ಪಾಟೀಲ, ಎಂ.ಬಿ.ಎ. ನಿರ್ದೇಶಕಡಾ. ರಾಜೇಂದ್ರಇನಾಮದಾರ, ಅಂಗಡಿ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯೆ ಪ್ರೊ. ಸಂಗೀತಾದೇಸಾಯಿ, ಅಂಗಡಿಇಂಟರ್‍ನ್ಯಾಷನಲ್ ಸ್ಕೂಲ್‍ನ ಮುಖ್ಯಾಧ್ಯಾಪಕಿ ಆಶಾ ರಜಪೂತ ಸ್ವಾತಂತ್ರ್ಯೋತ್ಸವಆಚರಣೆ, ಬಲಿದಾನ ಮಾಡಿದ ಮಹನೀಯರ ಬಗ್ಗೆ ವಿವರವಾಗಿ ತಿಳಿಸಿದರು.
ಆಡಳಿತಾಧಿಕಾರಿ ರಾಜು ಜೋಶಿ, ಡಾ. ಬಿ.ಟಿ. ಸುರೇಶ ಬಾಬು, ಡಾ. ಸಂಜಯ ಪೂಜಾರಿ, ಡಿಪ್ಲೋಮಾ ಪ್ರಾಚಾರ್ಯ ಪ್ರೊ.

ಕೃಷ್ಣಕುಮಾರಜೇರೆ, ದೈಹಿಕ ನಿರ್ದೇಶಕ ವಿಶಾಂತದಮೋಣೆ, ದೈಹಿಕ ಶಿಕ್ಷಕ ಮಹಾದೇವ ಶಿರಗಾಂವಕರ, ಬ್ರಿಜೇಶ ಪಾಟೀಲ, ಪ್ರಸಾದ ಪಂಚಾಕ್ಷರಿಮಠ, ಗಿರೀಶ ಮಡ್ಡಿಮನಿ, ಶಂಕರ ಹಿರೇಮಠ, ಪ್ರೇಮನಾಥ ಜವಳಿ, ತೇಜಸ್ವಿನಿ ಸೊಬರದ ಸೇರಿದಂತೆಎಲ್ಲ ವಿಭಾಗಗಳ ಮುಖ್ಯಸ್ಥರು, ಶಿಕ್ಷಕ ಹಾಗೂ ಶಿಕ್ಷೇತರ ವೃಂದ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹರ್ಷೋಲ್ಲಾಸದಿಂದಅಮೃತ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಉಪಸ್ಥಿತರಿದ್ದರು.
ಪ್ರೊ. ಧನಶ್ರಿ ಕುಲಕರ್ಣಿ ನಿರೂಪಿಸಿದರು. ಡಾ. ರಶ್ಮಿ ಮಾಲಗನ ವಂದಿಸಿದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');