ಜಾರಕಿಹೊಳಿ ಕುಟುಂಬದವರಿಗೆ ಸಚಿವಸ್ಥಾನ ಸಿಗಬೇಕೆಂದು ಯಾವ ಸಂವಿಧಾನದಲ್ಲಿಯೂ ಇಲ್ಲ : ಸತೀಶ ಜಾರಕಿಹೊಳಿ

0
🌐 Belgaum News :

ಅಥಣಿ : ಬಿಜೆಪಿಯವರು ದಿನಾಲೂ ಒಂದೊಂದು ಹೇಳ್ತಾರೆ. ಅವರಿಗೆ ನಾವು ಉತ್ತರ ಕೊಡುವ ಅವಶ್ಯಕತೆ ಇಲ್ಲ, ಅದನ್ನು ಅವರ ಪಕ್ಷದವರೇ ನಿಯಂತ್ರಣ ಮಾಡಬೇಕು, ಅವರೆ ಹೇಳ್ತಾರೆ ತಮ್ಮದು ಶಿಸ್ತಿನ ಪಕ್ಷ ಎಂದು ಆದರೆ ಕೆಲವರ ಹೇಳಿಕೆ ನೋಡಿದರೆ ಶಿಸ್ತಿನ ಪಕ್ಷಕ್ಕೆ ಚ್ಯುತಿ ಬರುವಂತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಹೇಳಿದರು.

ಸ್ಥಳೀಯ ಮುಖಂಡ ರಮೇಶ ಸಿಂದಗಿ ಅವರ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪೆಟ್ರೋಲ್, ಡಿಸೇಲ್, ಅಡುಗೆ ಗ್ಯಾಸ್ ಬೆಲೆ‌ ನಿಯಂತ್ರಣ ಆಗ್ತಿಲ್ಲ, ನಿಯಂತ್ರಣಕ್ಕೆ ಸರಿಯಾದ ಸಮಯ ಬರಬೇಕು. ಅಂದರೆ 2023-24 ರ ವರೆಗೆ ಕಾಯಬೇಕು ಎಂದರು. ಈಗಾಗಲೇ ನಮ್ಮ ಪಕ್ಷ ಬಲಸಂವರ್ಧನೆಗೆ ಒತ್ತು ಕೊಟ್ಟಿದ್ದು, ಕೆಪಿಸಿಸಿ ವತಿಯಿಂದ ಕೊವಿಡ್ ಸಂದರ್ಭದಲ್ಲಿ ಹಲವು ಜನಮುಖಿ‌ ಕಾರ್ಯಗಳನ್ನು ಮಾಡಿದ್ದೆವೆ ಎಂದರು.

ಸಚಿವೆ ಶಶಿಕಲಾ ಜೊಲ್ಲೆ ಅವರ ಪ್ರಕರಣ ವಿರುದ್ದ ನಮ್ಮಷ್ಟು ಯಾರೂ ಪ್ರತಿಭಟಣೆ ಮಾಡಿಲ್ಲ. ಅವರು ಆರೋಪ ಬಂದ ತಕ್ಷಣ ನೈತಿಕ ಹೊಣೆ ಹೊತ್ತು ತಕ್ಷಣ ರಾಜೀನಾಮೆ ಕೊಡಬೇಕಾಗಿತ್ತು. ಇದರಿಂದ ಬಿಜೆಪಿ ಪಕ್ಷಕ್ಕೆ ನೈತಿಕಥೆ ಇಲ್ಲ ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ. ಅವರು ರಾಜಿನಾಮೆ ಕೊಟ್ಟು ತನಿಖೆ ಆಗಲಿ ಎಂದು ಹೇಳಬೇಕಿತ್ತು ಎಂದು ಹೇಳಿದರು.

ಬಿಜೆಪಿಯವರು ಈಶ್ವರಪ್ಪ ಹಾಗೂ ಸಿ.ಟಿ.ರವಿ ಅವರಿಗೆ ಕರೆದು ಬುದ್ದಿ ಹೇಳಬೇಕು. ಜಾರಕಿಹೊಳಿ ಕುಟುಂಬದವರಿಗೆ ಪ್ರತಿ ಸರಕಾರದಲ್ಲಿ ಅಧಿಕಾರ ಸಿಗಬೇಕು ಎಂದು ಯಾವ ಸಂವಿಧಾನದಲ್ಲಿಯೂ ಇಲ್ಲ ಅದು ಜನರ ಹಾಗೂ ಪಕ್ಷದ ಮುಖಂಡರ ತೀರ್ಮಾನ, ಹಾಗೆಯೇ ಈಗಾಗಲೇ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋದ 17 ಜನರಿಗೆ ಟಿಕೇಟ್ ಸಿಗೋದು ಕಷ್ಟ ಟಿಕೆಟ್ ಪಡೆಯಲು ಅವರು ಹರಸಾಹಸ ಮಾಡಬೇಕಾಗುತ್ತದೆ ನೋಡ್ತಾಯಿರಿ ಅಥಣಿಯವರೂ ಸಹ  ಎಂದು ಹೇಳಿದರು.

ಈ ವೇಳೆ ಕಾಂಗ್ರೆಸ್ ಮುಖಂಡರಾದ ಗಜಾನನ ಮಂಗಸೂಳಿ, ರಮೇಶ ಸಿಂದಗಿ, ಸಿದ್ದಾರ್ಥ ಸಿಂಗೆ, ಶ್ರೀಕಾಂತ ಪೂಜಾರಿ, ಎಸ್ ಕೆ ಬುಟಾಳಿ, ಬಸವರಾಜ ಬುಟಾಳಿ, ಭರಮಗೌಡ (ರಾಜು) ಕಾಗೆ ಸೇರಿದಂತೆ ಇತರರು ಉಪಸ್ಥಿತರಿದ್ದರು./////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');