ದಂಪತಿಗಳ ನಡುವೆ ಜಗಳ : ಹತ್ಯೆ, ಬಾವನ ಕೈ ಕತ್ತರಿಸಿ ಠಾಣೆಗೆ ತಂದ ಬಾಮೈದ

0
🌐 Belgaum News :

ಮೈಸೂರು : ಗಂಡ ಹೆಂಡತಿ ನಡುವೆ ನಡೆದ ಗಲಾಟೆಯಾಗಿಯಲ್ಲಿ ಬಾಮೈದ ಬಾವನನ್ನೇ ಕೊಂದು ಹಾಕಿದ ಘಟನೆ ಮೈಸೂರಿನ ಗೌಸಿಯಾ ನಗರದಲ್ಲಿ ನಡೆದಿದೆ.

ಮಹಮದ್ ಸರಾನ್ (27) ಕೊಲೆಯಾದವನು.

ಕಳೆದ ಐದು ತಿಂಗಳ ಹಿಂದಷ್ಟೇ ಮಹಮ್ಮದ್ ಸರಾನ್ ಮತ್ತು ರೂಬೀನಾ ಎಂಬುವರನ್ನ ಮದುವೆಯಾಗಿದ್ದರು. ಇಬ್ಬರ ನಡುವೆ ಜಗಳ ಶುರುವಾಗಿತ್ತು. ಈ ಜಗಳದಲ್ಲಿ ಪತ್ನಿ ಕಡೆಯ ಸಂಬಂಧಿಕರು ಮಧ್ಯೆ ಪ್ರವೇಶಿಸಿದ್ದಾರೆ. ಇದರಿಂದ ಜಗಳ ಅತಿರೇಕಕ್ಕೆ ಹೋಗಿದೆ.

ಆಗ ಪತ್ನಿಯ ಸಂಬಂಧಿಕರು ಪತಿ ಮಹಮದ್ ಸರಾನ್​ನ್ನು ಹತ್ಯೆಗೈದಿದ್ದಾರೆ. ಅಲ್ಲದೇ ಬಾಮೈದ ಕದೀರ್ ತನ್ನ ಬಾವನ ಮಹಮದ್ ಸರಾನ್​ನ ಕೈ ಕತ್ತರಿಸಿ ಪೊಲೀಸ್ ಠಾಣೆಗೆ ತಂದಿದ್ದಾನೆ.

ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ./////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');