ಸಾರಥಿ ನಗರ ಧ್ವಜಾರೋಹಣ ಕಾರ್ಯಕ್ರಮ: ಶಾಲಾ ಕಟ್ಟಡ ನಿರ್ಮಾಣಕ್ಕೆ ದಾನಿಗಳಿಂದ ನಿವೇಶನ ಮನವಿ: ಮುಖ್ಯೋಪಾಧ್ಯಾಯ ರಾಜು ಕೋಲಕಾರ

0
🌐 Belgaum News :

 

ಬೆಳಗಾವಿ: ಶಾಲೆಯನ್ನು ಖಾಸಗಿ ಕಟ್ಟಡದಲ್ಲಿ ನಡೆಸಲಾಗುತ್ತಿದ್ದು, ಯಾರಾದರೂ ದಾನಿಗಳು ಇದ್ದಲ್ಲಿ ಶಾಲಾ ಕಟ್ಟಡಕ್ಕೆ ನಿವೇಶನವನ್ನು ನೀಡಬೇಕು ಇದರಿಂದ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಉನ್ನತ ಕಲಿಕಾ ಗುಣಮಟ್ಟವನ್ನು ಹೆಚ್ಚಿಸಬಹುದು ಎಂದು ಶಾಲಾ ಮುಖ್ಯೋಪಾಧ್ಯಾಯ ರಾಜು ಕೋಲಕಾರ ಮನವಿ ಮಾಡಿದರು.

ನಗರದ ಸಾರಥಿ ನಗರದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ರವಿವಾರ (ಆ.15) ಧ್ವಜಾರೋಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಾಲೆಯನ್ನು ಖಾಸಗಿ ಕಟ್ಟಡದಲ್ಲಿ ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ಹೆಚ್ಚಿಸಲು ಕೊಠಡಿಗಳ ವ್ಯವಸ್ಥೆ ಬೇಡಿಕೆಯಿದೆ. ಯಾರಾದರೂ ನಿವೇಶನ ದಾನಿಗಳು ಇದ್ದಲ್ಲಿ ಶಾಲಾ ಕಟ್ಟಡಕ್ಕೆ ನೆರವು ಮಾಡಬೇಕೆಂದು ಕಾರ್ಯಕ್ರಮದಲ್ಲಿ ಮನವಿ ಮಾಡಿಕೊಂಡರು.

ಶಾಲೆಯನ್ನು ಉನ್ನತಮಟ್ಟದಲ್ಲಿ ಕೊಂಡೊಯ್ಯುವುದು ನಮ್ಮ ಗುರಿಯಾಗಿದೆ. ಆದರ್ಶ ವ್ಯಕ್ತಿಗಳಾದ, ಮಹಾತ್ಮ ಗಾಂಧೀಜಿ, ರಾಣಿ ಚೆನ್ನಮ್ಮ, ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ವಿದ್ಯಾರ್ಥಿಗಳು ತಮ್ಮ ಜೀವನಕ್ಕೆ ಸ್ಪೂರ್ತಿಯಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಈಗಾಗಲೇ ಅಧಿಕ ವಿದ್ಯಾರ್ಥಿಗಳು ಶಾಲೆಯಲ್ಲಿ ಪ್ರವೇಶಾತಿ ಪಡೆದುಕೊಳ್ಳುತ್ತಿದ್ದು, ಹೊಸ ಕಟ್ಟಡ ಅಥವಾ ಕೊಠಡಿಗಳ ವ್ಯವಸ್ಥೆಗಳಾದಲ್ಲಿ ಇನ್ನೂ ಅಧಿಕ ಮಟ್ಟದಲ್ಲಿ ವಿದ್ಯಾರ್ಥಿಗಳ ಪ್ರವೇಶ ಪಡೆಯಲು ಬರುತ್ತಾರೆ ಹಾಗಾಗಿ ನಿವೇಶನ ನೀಡುವುದಾಗಿ ಶಿಕ್ಷಕರಾದ ಕೊಲಕಾರ ಮನವಿ ಮಾಡಿದರು.

ಕಂಗ್ರಾಳಿ ಗ್ರಾಮ ಪಂಚಾಯಿತಿ ವಾರ್ಡ್ ಸಂಖ್ಯೆ 12ರ ಸದಸ್ಯರಾದ ಜನಾಬಾಯಿ ಸತೀಶ ಗುಡುಗೇನಟ್ಟಿ ಮಹಾತ್ಮ ಗಾಂಧೀಜಿ, ಬಾಬಾ ಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಶಾಲೆಯ ಎಸ್.ಡಿ.ಎಫ್.ಸಿ ಕಮಿಟಿಯ ಉಪಾಧ್ಯಕ್ಷರಾದ ಆಶಿಫ್ ಮುಲ್ಲಾ ಅವರು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು.

  ಧ್ವಜಾರೋಹಣ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆಯ ಜಿಲ್ಲಾಧ್ಯಕ್ಷರಾದ ಬಾಳಪ್ಪ ಗುಡುಗೇನಟ್ಟಿ ಅವರು ಒಂದು ಜೊತೆ ಪುಸ್ತಕ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ಶಾಲಾ ಮಕ್ಕಳಿಗೆ ಪುಸ್ತಕ ಕಿಟ್ ವಿತರಣೆ ಮಾಡಿದರು ಹಾಗೂ ಶಾಲೆಯ ವತಿಯಿಂದ ಗಣ್ಯ ಮಾನ್ಯರಿಗೆ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶಾಲೆ ಇಲ್ಲಿ ಆಗಲು ಕಾರನಿಬುತರಾದ  ಬೆಳಗಾವಿ ವರದಿ ದಿನ ಪತ್ರಿಕೆ ವ್ಯವಸ್ಥಾಪಕರಾದ ಸತೀಶ ಬ ಗುಡಗೇನಟ್ಟಿ ಹಾಗೂ ಸುಮಾ ದೊಡಮನಿ  ಗೀತಾ ಪಿ ಜಮಕಂಡಿ ವಿನಯ ನಾವಲಗಟ್ಟಿ, ಮಂಜು ಕಾಂಬಳೆ, ರಾಜೇಂದ್ರ ಪಾಟೀಲ, ನೇತ್ರಾ ಅಂಬಿಗೇರ ಹಾಗೂ ಅನ್ನಪೂರ್ಣೇಶ್ವರಿ ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕರಾದ ನಾಮದೇವ ಹತ್ತಿ ನಿರೂಪಿಸಿ ವಂದಿಸಿದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');