17 ಸಾವಿರ ಅಡಿಯಲ್ಲಿ ಹಾರಾಡಿದ ತಿರಂಗ; ಇದು ‘ನಮ್ಮ ನೆಲ’ ಎಂದು ಚೀನಾಗೆ ಭಾರತೀಯ ಯೋಧರ ಸಂದೇಶ

0
🌐 Belgaum News :

ಹೊಸದಿಲ್ಲಿ: ಚೀನಾ ಗಡಿ ಕ್ಯಾತೆ ತೆಗೆದಿರುವ ಲಡಾಕ್‍ನ ಪ್ಯಾಂಗಾಂಗ್ ಸರೋವರದ ಬಳಿಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರು (ಐಟಿಬಿಪಿ) ಧ್ವಜಾರೋಹಣ ನಡೆಸಿ ತಮ್ಮ ಸಾರ್ವಭೌಮತ್ವದ ಸಂದೇಶ ರವಾನಿಸಿದ್ದಾರೆ.

ಸರೋವರದ ಸುತ್ತಲೂ ಗಸ್ತು ತಿರುಗಿರುವ ಯೋಧರು, ಕೈಯಲ್ಲಿ ರಾಷ್ಟ್ರಧ್ವಜವನ್ನು ಗೌರವದಿಂದ ಹಿಡಿದು ಸಾಗಿರುವುದು ವಿಶೇಷ. ಬಳಿಕ ರಾಷ್ಟ್ರಗೀತೆ ಮೂಲಕ ನಮನ ಸಲ್ಲಿಸಿ , ಸಿಹಿ ಹಂಚಿಕೊಂಡಿದ್ದಾರೆ. ಸಮುದ್ರಮಟ್ಟದಿಂದ 17000 ಅಡಿಗಳಷ್ಟು ಎತ್ತರವಿರುವ ಲಡಾಕ್‍ನ ಗಡಿಯ ಚೆಕ್‍ಪೋಸ್ಟ್ ಗಳ ತ್ರಿವರ್ಣ ಧ್ವಜ ಹಾರಾಡಿದೆ. ಉತ್ತರಾಖಂಡ ಗಡಿಯಲ್ಲೂ ಐಟಿಬಿಪಿ ಯೋಧರು ಧ್ವಜಾರೋಹಣ ನಡೆಸಿ ಗೌರವ ಸಲ್ಲಿಸಿದ್ದಾರೆ.

ಈ ವರ್ಷ 23 ಐಟಿಬಿಪಿ ಯೋಧರಿಗೆ ಶೌರ್ಯ ಪದಕ (ಪಿಎಂಜಿ) ನೀಡಿ ಗೌರವಿಸಲಾಗಿದೆ. ಈ ಪೈಕಿ 20 ಯೋಧರು ಕಳೆದ ವರ್ಷ ಪೂರ್ವ ಲಡಾಕ್‍ನಲ್ಲಿನ ಚೀನಾ ಸೈನಿಕರೊಂದಿಗಿನ ಘರ್ಷಣೆಯಲ್ಲಿ ಭಾಗಿಯಾಗಿದ್ದರು. ಇದುವರೆಗಿನ ಅತಿ‌ ಹೆಚ್ಚು ಶೌರ್ಯ ಪದಕಗಳನ್ನು ಪಡೆದ ಸಂಭ್ರಮದಲ್ಲಿ ಐಟಿಬಿಪಿ ಯೋಧರಿದ್ದಾರೆ./////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');