ಅಥಣಿ ತಾಲೂಕು ಆಡಳಿತದಿಂದ 75ನೇ ಸ್ವಾತಂತ್ರ್ಯ ದಿನ ಆಚರಣೆ

0
🌐 Belgaum News :
ಅಥಣಿ: ಸ್ವಾತಂತ್ರೋತ್ಸವದ ಅಮೃತಮಹೋತ್ಸವ ನಿಮಿತ್ಯವಾಗಿ ಅಥಣಿ ತಾಲೂಕು ಆಡಳಿತದಿಂದ ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮವನ್ನು ಪಟ್ಟಣದ ಭೋಜರಾಜ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಅಥಣಿ ತಾಲೂಕು ದಂಡಾಧಿಕಾರಿ ದುಂಡಪ್ಪ ಕೋಮಾರ ಧ್ವಜಾರೋಹಣ ನೆರವೇರಿಸಿದರು.೭೫ ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಕೊರೊನಾ ಕಾರಣದ ವಾರಾಂತ್ಯದ ಲಾಕ್ ಡೌನ್ ನಡುವೆಯೂ ದೇಶಭಕ್ತಿಯಿಂದ ಕೂಡಿದ ಸರಳ ಆಚರಣೆಯಾಗಿದ್ದು ಸರ್ಕಾರದ ಸುತ್ತೋಲೆಯಂತೆ ಗಣ್ಯರಿಗೆ ಹಾರ ಮತ್ತು ಹೂವುಗಳ ಬದಲಾಗಿ ಪುಸ್ತಕಗಳ ವಿತರಣೆಯೊಂದಿಗೆ ವಿನೂತನವಾಗಿ ಆಚರಿಸಲಾಯಿತು.
ಈ ವೇಳೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಾಲೂಕು ದಂಡಾಧಿಕಾರಿ ದುಂಡಪ್ಪ ಕೊಮಾರ್ ಬಾರದು ಬಪ್ಪದು ಬಪ್ಪದು ತಪ್ಪದು ಆಯುಷ್ಯ ತೀರದ ಹೊರತು ಸಾವು ಸಮೀಪ ಸುಳಿಯದು ಎನ್ನುವ ಮೂಲಕ ಕೋವಿಡ್ ಮೂರನೆಯ ಅಲೆಯ ಸಂಕಷ್ಟದ ಸಮಯದಲ್ಲಿ ವೈಧ್ಯರು, ತಾಲೂಕು ಮತ್ತು ಜಿಲ್ಲಾಡಳಿತ ಸಹಕಾರಿ ಕೆಲಸ ನೆನೆಸುವಂತದ್ದು, ಪ್ರವಾಹ ಸಮಯದಲ್ಲಿ ಪೋಲಿಸ್ ಇಲಾಖೆ, ಆರೋಗ್ಯ, ಆಶಾ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಗೆ ಧನ್ಯವಾದಗಳನ್ನು ತಿಳಿಸಿದರಲ್ಲದೆ ಆದರ್ಶ ಶಿಕ್ಷಕ ವಾಮನ ಕುಲಕರ್ಣಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಅಮೃತ ಮಹೋತ್ಸವ ಸಂಧರ್ಭದಲ್ಲಿ ಕೊರೊನಾವನ್ನು ನಾವೆಲ್ಲರೂ ಒಗ್ಗಟ್ಟಿನಿಂದ ನಿಯಮಗಳನ್ನು ಪಾಲಿಸುವ ಮೂಲಕ ಗೆಲ್ಲೋಣ ಎಂದರು.
ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಅರವಿಂದರಾವ್ ದೇಶಪಾಂಡೆ ಮಾತನಾಡಿ  ಭಾರತ ಮಾತೆಯ ಪುತ್ರರು ಸಂಭ್ರಮಿಸುವ ಹಬ್ಬ ಸ್ವಾತಂತ್ರ್ಯ ದಿನಾಚರಣೆ ಆಗಿದೆ. ಚೀನಾದಿಂದ ಬಂದ ಕೊರೊನಾ ಕಾರಣದಿಂದ ದೇಶಭಕ್ತಿಯ ಕಾರ್ಯಕ್ರಮ ದಲ್ಲಿಯೂ ವಿದ್ಯಾರ್ಥಿಗಳ ಗೈರು ಎದ್ದು ಕಾಣುತ್ತಿದೆ. ಕೊರೊನಾ ಸಮಯವಿರಲಿ ಅಥವಾ ಸಂಕಷ್ಟದ ಸಮಯವೇ ಇರಲಿ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸುವದು ನಮ್ಮೆಲ್ಲರ ಕರ್ತವ್ಯ. ಕೊರೊನಾ ಸಮಯದಲ್ಲಿ ಬಹಳ ಜನರನ್ನು ಕಳೆದುಕೊಂಡಿದ್ದೇವೆ ಆದರೆ ಪ್ರತಿವರ್ಷ ನಿರೂಪಕರಾಗಿ ಭಾಗವಹಿಸುತ್ತಿದ್ದ ವಾಮನ ಕುಲಕರ್ಣಿ ಅವರ ಆತ್ಮಕ್ಕೆ ಶಾಂತಿ ಕೋರೋಣ ಎಂದರು.
ಮುಖ್ಯಮಂತ್ರಿಗಳ ಆದೇಶದಂತೆ ತಾಲೂಕು ಆಡಳಿತ ಹಾರ ತುರಾಯಿಗಳ ಬದಲಾಗಿ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದು ಸಂತಸ ತಂದಿದ್ದು ಸ್ವಾತಂತ್ರ್ಯ ಉತ್ಸವದ ಎಪ್ಪತ್ತೈದನೆ ವರ್ಷ ಅಮೃತ ಮಹೊತ್ಸವದ ಬಳಿಕ ನಾವೆಲ್ಲ ಶತಮಾನೋತ್ಸವದತ್ತ ಸಾಗುತ್ತೆವೆ ಸಾಧಿಸಿದ್ದು ಕಡಿಮೆ ಸಾಧಿಸಬೇಕಾದದ್ದು ಬಹಳ. ಸ್ವಾತಂತ್ರ್ಯ ಉತ್ಸವದ ಸಮಯದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮತ್ತು ಬಲಿದಾನ ಮಾಡಿದ ಹೋರಾಟಗಾರರನ್ನು ನೆನಪಿಸಿಕೊಳ್ಳುವ ಕೆಲಸ ಆಗಬೇಕಿದೆ.ಅಸಹಕಾರ ಚಳುವಳಿಯ ರೂವಾರಿ ಮಹಾತ್ಮ ಗಾಂಧಿ, ಮತ್ತು ಹೋರಾಟಗಾರರಾದ ಸುಭಾಸಚಂದ್ರ ಭೋಸ,ಚಂದ್ರಶೇಖರ ಆಝಾದ,ಭಗತ ಸಿಂಗ್, ರಾಜಗುರು, ಸುಖದೇವ,ಲಾಲಾ ಲಜಪತ ರಾಯ,ಬಾಲ ಗಂಗಾಧರ ತಿಲ, ಸೇರಿದಂತೆ ಹಲವು ಜನರ ಜೀವನ ಸ್ಮರಣೆಯನ್ನು ಇಂತಹ ಅಮೃತ ಮಹೋತ್ಸವದ ವೇಳೆ ಮಾಡುವ ಮೂಲಕ ವಿದ್ಯಾರ್ಥಿಗಳು ಮತ್ತು ಯುವಕರಿಗೆ ಪ್ರೇರಣೆ ಆಗುವ ಮೂಲಕ ರಾಷ್ಟ್ರ ಪ್ರೀತಿಯನ್ನು ಜಾಗೃತಗೊಳಿಸಬೇಕು ಎಂದರು.
ಜಗತ್ತಿಗೆ ಶೂಣ್ಯವನ್ನು ಕೊಟ್ಟದ್ದು ನಾವು ಜಗತ್ತಿಗೆ ಅನೇಕ ಕೊಡುಗೆ ಕೊಟ್ಟ ದೇಶ ನಮ್ಮದು ಅಲೋಪತಿ ಬಿಟ್ಟು ಆಯುರ್ವೇದಕ್ಕೆ ಬೇರೆ ದೇಶಗಳು ವಾಲುತ್ತಿವೆ ಜಗತ್ತಿಗೆ ಯೋಗವನ್ನು ಕೊಟ್ಟ ದೇಶ ನಮ್ಮದು.ಭಾರತ ಜಗತ್ತಿನ ಸರ್ವ ಶ್ರೇಷ್ಠ ರಾಷ್ಟ್ರಗಳಲ್ಲಿ  ನಮ್ಮ ದೇಶ ಇದೆ.ಅತಿಹೆಚ್ಚು ಯುವಕರನ್ನು ಹೊಂದಿದ ದೇಶ ನಮ್ಮದು.ಭಾರತ ಸರ್ವಶ್ರೇಷ್ಠ ಆಗುವ ಸಂಕಲ್ಪಕ್ಕೆ ನಮ್ಮೆಲ್ಲರ ಕೊಡುಗೆಯ ಅಗತ್ಯ ಇದೆ ಎಂದರು.
ಈ ವೇಳೆ ಮಾತನಾಡಿದ ಕೊಳಗೇರಿ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಹಾಗೂ ಅಥಣಿ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ ಇಂದು ಒಂದು ಕಡೆ ಸಂತೋಷ ಮತ್ತು ವಿವಿಧ ಭಾಷೆ,ವಿವಿಧ ಧರ್ಮ ಹಾಗೂ ಜಾತಿಗಳನ್ನು ಹೊಂದಿದ ದೇಶ ನಮ್ಮದು ಈ ವೇಳೆ ಬಾಬಾ ಸಾಹೇಬ ಅಂಬೇಡ್ಕರ್ ಅವರ ಸಂವಿಧಾನದ ಕಾರಣದಿಂದ ಭಾರತ ಎಪ್ಪತ್ತೈದು ವರ್ಷಗಳನ್ನು ಪೂರೈಸಿದೆ. ಕೊರೊನಾ ಕಾರಣದಿಂದ ಸಂಭ್ರಮ ಇಲ್ಲದಂತಾಗಿದೆ‌. ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ ಮೊದಲು ಜೀವ ಆಮೇಲೆ ಜೀವನ.ದೇಶದ ಜನರ ಜೀವ ಅಮೂಲ್ಯ ಆದ್ದರಿಂದ ಕೊರೊನಾ ಮೊದಲ ಮತ್ತು ಎರಡನೆಯ ಅಲೆ ಎದುರಿಸಿದ್ದೇವೆ. ಮೂರನೆಯ ಅಲೆ ಈಗಾಗಲೇ ಕೇರಳ,ಆಂದ್ರ, ಮಹಾರಾಷ್ಟ್ರದಲ್ಲಿ ಕಂಡು ಬಂದಿದೆ.ಮಾನ್ಯ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಲ್ಲ ಜಿಲ್ಲಾಧಿಕಾರಿ ಅವರಿಗೆ ಕಟ್ಟು ನಿಟ್ಟಿನ ಕ್ರಮಗಳನ್ನು ಸೂಚಿಸಿದ್ದಾರೆ ಇಂತಹ ಸಮಯದಲ್ಲಿ ಅಧಿಕಾರಿ ವರ್ಗ ಮಾತ್ರ ಕರ್ತವ್ಯ ನಿಭಾಯಿಸದರೆ
 ಸಾಲದು ಅದರ ಜೊತೆಗೆ ಎರಡನೆ ಅಲೆಯಲ್ಲಿ ಆದ ಅನಾಹುತ ವನ್ನು ಮರೆಯುವಂತಿಲ್ಲ.ಅಥಣಿ ಮತಕ್ಷೇತ್ರದಲ್ಲಿ ಮೂರು ಸಾವಿರದ ಐದುನೂರ ಅಷ್ಟು ಜನರು ಬಲಿಯಾಗಿದ್ದಾರೆ. ಅಂತಹ ಸಮಯದಲ್ಲಿ ಸಾವಿಗೀಡಾದ ಜನರಿಗೆ ಶ್ರದ್ದಾಂಜಲಿ ಕೋರುತ್ತೆನೆ.ನನಗೆ ಮತಕ್ಷೇತ್ರದಲ್ಲಿ, ಜಿಲ್ಲೆಯಲ್ಲಿ ನಾಡಿನಲ್ಲಿ ಉಂಟಾದ ಸಾವು ನೋವಿನ ಬಗ್ಗೆ ಬಹಳ ದುಃಖ ವಿದೆ. ಆದ್ದರಿಂದ ಮೂರನೆಯ ಅಲೆಯನ್ನು ಎದುರಿಸಲು ಸಾರ್ವಜನಿಕರು ಸಹಕರಿಸಬೇಕಾಗಿದೆ ಎಂದರು.
ಈ ವೇಳೆ ಅಥಣಿ ಡಿ ವೈ ಎಸ್ ಪಿ.  ಎಸ್. ವಿ ಗಿರೀಶ್, ಸಿಪಿಐ ಶಂಕರಗೌಡ ಬಸನಗೌಡರ,ಪಿ ಎಸ್ ಐ ಕುಮಾರ ಹಾಡಕಾರ, ಮಾಜಿ ಸೈನಿಕ ಸಂಘದ ಅಧ್ಯಕ್ಷ ಎಸ್ ಎಸ್ ಸೋನಕರ್,ನೌಕರ ಸಂಘದ ಅಧ್ಯಕ್ಷ ರಾಮಣ್ಣ ಧರಿಗೌಡರ, ತಾಪಂ ಅಧಿಕಾರಿ ಶೇಖರ ಕರಬಸಪ್ಪಗೋಳ, ಪ್ರವೀಣ ಪಾಟೀಲ, ಅಶೋಕ ಕಾಂಬಳೆ,ಈರಣ್ಣಾ ವಾಲಿ,ಈರಣ್ಣಾ ದಡ್ಡಿ, ಶಿಕ್ಷಣ ಇಲಾಖೆಯ ಜೆ. ಎ ಖೋತ, ಉಪತಹಶಿಲ್ದಾರ ಮಹಾದೇವ ಬಿರಾದಾರ, ಅರುಣ ಯಲಗುದ್ರಿ, ಡಾ. ಅನಿಲ ಸೌದಾಗರ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಾಮಾಜಿಕ ಹೋರಾಟಗಾರರು ವಿವಿಧ ಸಂಘಟನೆಗಳ ಮುಖಂಡರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');