ಆ.23ರಿಂದ ಶಾಲೆ ಆರಂಭ : ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಓದಲೇ ಬೇಕಾದ ಮಾರ್ಗಸೂಚಿ

0
🌐 Belgaum News :

ಬೆಂಗಳೂರು : ರಾಜ್ಯದಲ್ಲಿ ಆ.23ರಿಂದ ಶಾಲೆ ಆರಂಭ ಹಿನ್ನೆಲೆ  ರಾಜ್ಯ ಸರ್ಕಾರ ಶಾಲಾ ಆರಂಭದ ಮಾರ್ಗಸೂಚಿ ಪ್ರಕಟಿಸಿದ್ದು, ಸಕಲ ಸಿದ್ದತೆಯಲ್ಲಿ ಶಿಕ್ಷಣ ಇಲಾಖೆ ಸಚಿವರ ಜೊತೆ ಸಭೆ ನಡೆಸಿ ಇದೀಗ 9 ರಿಂದ 12ನೇ ತರಗತಿಗೆ ಮಾರ್ಗಸೂಚಿ ಬಿಡುಗಡೆಗೊಳಿಸಿದೆ.

ರಾಜ್ಯ ಸರ್ಕಾರ ಈ ಬಾರಿ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ಶಾಲೆಗಳಿಗೆ ಪ್ರತ್ಯೇಕವಾದ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಲಾಗಿದೆ. ಮಾರ್ಗಸೂಚಿ ಈ ಕೇಳಗಿನಂತಿವೆ.

1) ಮಾರ್ಗಸೂಚಿಯಲ್ಲೇನಿದೆ?

 • ಆಗಸ್ಟ್ 23 ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಮಾತ್ರ ತರಗತಿ ನಡೆಸುವಂತೆ ಸೂಚನೆ.
 • ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30 ರ ವರೆಗೆ.
 • ಶನಿವಾರದಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12.50 ರ ವರೆಗೆ ತರಗತಿ ನಡೆಯಲಿದೆ.
 • ಕೋವಿಡ್ 19 ಸೋಂಕಿನ ಪ್ರಮಾಣ 2%ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಮಾತ್ರ ಶಾಲೆ ಆರಂಭ.
 • ಅನುದಾನಿತ ಹಾಗೂ ಅನುದಾನ ರಹಿತ ಪ್ರೌಢ ಶಾಲೆಗಳಲ್ಲಿ ತರಗತಿ ನಡೆಸಲು ತಿಳಿಸಲಾಗಿದೆ.
 • ಅವಶ್ಯಕತೆ ಅನುಸಾರ ಶಾಲೆಯಲ್ಲಿ ಮಕ್ಕಳಿಗೆ ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಮಾಡಬೇಕು.
 • ತರಗತಿ ನಡೆಸಲು ಅಗತ್ಯ ದೈಹಿಕ ಅಂತರ ಕಾಪಾಡಿಕೊಳ್ಳಬೇಕು ಹಾಗೂ ಪ್ರತಿ ಕೊಠಡಿಯಲ್ಲಿ 15 ರಿಂದ 20 ಮಕ್ಕಳಿಗೆ ಮಾತ್ರ ಅವಕಾಶ ನೀಡಬೇಕು
 • ಶಾಲೆಗೆ ಹಾಜರಾಗಲು ಬಯಸದ ವಿದ್ಯಾರ್ಥಿಗಳು ಈಗಿರುವ ಆನ್ಲೈನ್ ಶಿಕ್ಷಣ ಮುಂದುವರಿಸಬಹುದು ಇದಕ್ಕೆ ಪೂರಕವಾದ ವ್ಯವಸ್ಥೆ ಶಾಲೆ ವತಿಯಿಂದ ಆಗಬೇಕು.

2) ಶಾಲೆಗಳಿಗೆ.

 • ಇಡೀ ಶಾಲೆಗೆ ಸ್ಯಾನಿಟೈಸ್ ಮಾಡುವುದು ಕಡ್ಡಾಯ
 • ಶಾಲೆ ಪೀಠೋಪಕರಣಗಳಿಗೂ ಸ್ಯಾನಿಟೈಸ್ ಕಡ್ಡಾಯ
 • ಶಾಲೆ ಆವರಣದಲ್ಲಿ ಅಂತರಕ್ಕೆ ಗುರುತು ಹಾಕಬೇಕು
 • ವಿದ್ಯಾರ್ಥಿಗಳು ಪ್ರವೇಶಿಸುವ ಜಾಗದಲ್ಲಿ ವೃತ್ತ ಗುರುತು
 • 3 ರಿಂದ 6 ಅಡಿ ಅಂತರದಲ್ಲಿ ವೃತ್ತ ಗುರುತು ಮಾಡಬೇಕು
 • ದಟ್ಟಣೆ ತಪ್ಪಿಸಲು ಆಗಮನ, ನಿರ್ಗಮನಕ್ಕೆ ಪ್ರತ್ಯೇಕ ಮಾರ್ಗ
 • ನಿಯಮಗಳ ಬಗ್ಗೆ ಸೂಚನಾ ಫಲಕಗಳು ಹಾಕಬೇಕು
 • ಪ್ರವೇಶ ದ್ವಾರದಲ್ಲಿ ಕೈಗಳಿಗೆ ಸ್ಯಾನಿಟೈಸ್ ಕಡ್ಡಾಯ
 • ಶಾಲೆ ಎಂಟ್ರಿಯಲ್ಲೇ ಥರ್ಮಲ್ ಸ್ಕ್ರೀನಿಂಗ್ ಇರಬೇಕು
 • ಶಾಲೆಗಳಲ್ಲಿ ಸಭೆ, ಸಮಾರಂಭ ಹಮ್ಮಿಕೊಳ್ಳಬಾರದು
 • ಮಕ್ಕಳು ರಸ್ತೆ ಬದಿ ಆಹಾರ ಸೇವಿಸದಂತೆ ಸೂಚಿಸಬೇಕು
 • ಶಾಲೆಗಳಲ್ಲಿ ಶೌಚಾಲಯಗಳ ಸ್ವಚ್ಛತೆ ಅತ್ಯಗತ್ಯ
 • ಮಾರ್ಗಸೂಚಿ ಪಾಲನೆ ವೀಕ್ಷಿಸಲು ಶಿಕ್ಷಕರ ನೇಮಿಸಬೇಕು
 • ಶಿಕ್ಷಕರನ್ನೇ ನೋಡಲ್ ಅಧಿಕಾರಿಯಾಗಿ ನೇಮಿಸಬೇಕು

3) ವಿದ್ಯಾರ್ಥಿಗಳಿಗೆ:

 • ವಿದ್ಯಾರ್ಥಿಗಳಿಗೆ ಭೌತಿಕ ಹಾಜರಾತಿ ಕಡ್ಡಾಯವಲ್ಲ
 • ಶಾಲೆಗೆ ಕಳುಹಿಸುವುದು ಪೋಷಕರ ತೀರ್ಮಾನ
 • ಪೋಷಕರಿಂದ ಒಪ್ಪಿಗೆಯ ಲಿಖಿತ ಪತ್ರ ಕಡ್ಡಾಯ
 •   ಸೋಂಕು ಲಕ್ಷಣ ಇದ್ದರೆ ಐಸೊಲೇಟ್ ಮಾಡ್ಬೇಕು
 • ಲಕ್ಷಣ ಇದ್ದರೆ ಪೋಷಕರಿಗೆ ತಿಳಿಸಿ ಮನೆಗೆ ಕಳುಹಿಸಬೇಕು
 • ವಿದ್ಯಾರ್ಥಿಗಳ ಆರೋಗ್ಯದ ಮೇಲೆ ನಿಗಾ ಇರಿಸಬೇಕು
 • ಕುಡಿಯುವ ನೀರು, ತಿಂಡಿ ಮನೆಯಿಂದ ತರಬೇಕು
 • ಪರಸ್ಪರ ವಸ್ತುಗಳನ್ನು ವಿನಿಮಯ ಮಾಡಬಾರದು
 • ಶಿಕ್ಷಕರು, ಶಾಲಾ ಸಿಬ್ಬಂದಿಗೂ ನಿಯಮ ಅನ್ವಯ

4) ಶಿಕ್ಷಕರಿಗೆ:

 • ಶಿಕ್ಷಕರು ಕಡ್ಡಾಯ ಮಾಸ್ಕ್ ಧರಿಸಿ ಹಾಜರಾಗಬೇಕು
 • 50 ವರ್ಷ ಮೀರಿದ ಶಿಕ್ಷಕರು ಫೇಸ್ ಶೀಲ್ಡ್ ಧರಿಸಬೇಕು
 • ಶಿಕ್ಷಕರು ಲಸಿಕೆ ಪಡೆದಿದ್ದಾರೆಯೇ ಖಚಿತಪಡಿಸಿಕೊಳ್ಳಲಿ
 • ಶಿಕ್ಷಕರು ಲಸಿಕೆ ಪಡೆಯದಿದ್ದರೆ ಕೂಡಲೇ ಕೊಡಿಸಲು ಕ್ರಮ
 • ಶಿಕ್ಷಕರಿಗೆ ಸೋಂಕು ಲಕ್ಷಣವಿದ್ದರೆ ಹಾಜರಾಗಬಾರದು
 • ಸೋಂಕು ಲಕ್ಷಣ ಇದ್ದರೆ ಶಿಕ್ಷಕರು ರಜೆ ಪಡೆಯಬೇಕು
 • ಮತ್ತೆ ಶಾಲೆಗೆ ಹಾಜರಾಗಲು ಕೋವಿಡ್ ವರದಿ ತರಬೇಕು////
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');