ಎಸ್ಸಿಎಸ್ಟಿ ಕಾಲೋನಿ ಅಭಿವೃದ್ಧಿಗೆ 57 ಕೋಟಿ ರೂ. ಪ್ರಸ್ತಾವನೆ

0
🌐 Belgaum News :

ಹುಕ್ಕೇರಿ:  ಹುಕ್ಕೇರಿ ಮತಕ್ಷೇತ್ರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್ಸಿಎಸ್ಟಿ) ಕಾಲೋನಿಗಳ ಸಮಗ್ರ ಅಭಿವೃದ್ಧಿಗೆ 57 ಕೋಟಿ ರೂ ಪ್ರಸ್ತಾವಣೆ ಸಲ್ಲಿಸಲಾಗಿದೆ ಎಂದು ಅರಣ್ಯ, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ಪ್ರಶ್ನಿಸಿದರು.

ಪಟ್ಟಣದಲ್ಲಿ ಸೋಮವಾರ ಅಹಿಂದ ಬಿಗ್ರೇಡ್ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಎಸ್ಸಿಎಸ್ಟಿ ಜನರ ಶ್ರೇಯೋಭಿವೃದ್ದಿಗೆ ಹಗಲಿರುಳು ಶ್ರಮಿಸಲಾಗುತ್ತಿದೆ ಎಂದರು.

ಕ್ಷೇತ್ರ ವ್ಯಾಪ್ತಿಗೆ ಬರುವ 32 ಗ್ರಾಮ ಪಂಚಾಯಿತಿಗಳ ಸುಮಾರು 65 ಕ್ಕೂ ಹೆಚ್ಚು ಹಳ್ಳಿ ಹಾಗೂ ಸಂಕೇಶ್ವರ, ಹುಕ್ಕೇರಿ ಪಟ್ಟಣಗಳ ಎಸ್ಸಿಎಸ್ಟಿ ಸಮುದಾಯ ವಾಸಿಸುವ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ. ಇದಕ್ಕಾಗಿ ಪ್ರತ್ಯೇಕ ಅನುದಾನ ನೀಡುವಂತೆ ಸುಮಾರು 57 ಕೋಟಿ ರೂ ಅಂದಾಜು ವೆಚ್ಚದ ಪ್ರಸ್ತಾವಣೆಯನ್ನು ಸಮಾಜ ಕಲ್ಯಾಣ ಸಚಿವರಿಗೆ ಸಲ್ಲಿಸಲಾಗಿದೆ. ಈ ಅನುದಾನದಲ್ಲಿ ರಸ್ತೆ, ಚರಂಡಿ, ಫೇಮರ್ಸ್, ಬೀದಿ ದೀಪ, ಹೈಮಾಸ್ಕ್ ಅಳವಡಿಕೆ, ಕುಡಿಯುವ ನೀರು ಪೂರೈಕೆ, ಶೌಚಾಲಯ ಮತ್ತು ಭವನಗಳ ನಿರ್ಮಾಣ, ಸ್ಮಶಾನಗಳ ಅಭಿವೃದ್ಧಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.

ಯಾವುದೇ ರೀತಿಯ ಜಾತಿಭೇದವಿಲ್ಲದೇ ಕ್ಷೇತ್ರದ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಹಗಲಿರುಳು ಸೇವೆ ಸಲ್ಲಿಸಲಾಗುತ್ತಿದೆ. ಕ್ಷೇತ್ರದ ಮತದಾರರ ಆಶೀರ್ವಾದದಿಂದ ತಾವು ಎದುರಿಸಿದ 9 ಚುನಾವಣೆಗಳ ಪೈಕಿ 8 ರಲ್ಲಿ ಗೆಲುವು ಸಾಧಿಸುವ ಮೂಲಕ ಸದನದಲ್ಲಿ ಅತಿ ಹೆಚ್ಚಿನ ಭಾರಿ ಗೆದ್ದ ಇತಿಹಾಸಕ್ಕೆ ಪಾತ್ರನಾಗಿದ್ದೇನೆ. ಬುದ್ಧ, ಬಸವ ಮತ್ತು ಅಂಬೇಡ್ಕರ ಆಶಯದಂತೆ ಸೇವೆ ಸಲ್ಲಿಸುತ್ತಿರುವುದಾಗಿ ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಎಸ್ಸಿಎಸ್ಟಿ ದೌರ್ಜನ್ಯ ನಿಯಂತ್ರಣ ಜಿಲ್ಲಾ ಸಮಿತಿ ಸದಸ್ಯ ಸುರೇಶ ತಳವಾರ ಮಾತನಾಡಿದರು. ಮುಖಂಡರಾದ ಜಯಗೌಡ ಪಾಟೀಲ, ರಾಜು ಮುನ್ನೋಳಿ, ಕಲ್ಲಪ್ಪ ಕಟ್ಟಿ, ಮಾರುತಿ ತಳವಾರ, ದೀಪಕ ವೀರಮುಖ, ರಮೇಶ ಹುಂಜಿ, ಅಪ್ಪಣ್ಣಾ ಖಾತೇದಾರ, ಶಂಕರ ತಿಪ್ಪನಾಯಿಕ, ಪ್ರಕಾಶ ಮೈಲಾಖೆ, ವಿನೋದ ಮಾಳಗೆ, ಮಹೇಶ ಹಟ್ಟಿಹೊಳಿ, ಬಾಬು ಭೂಸಗೋಳ, ರೋಹಿತ ತಳವಾರ, ಬಾಳಾಸಾಹೇಬ ಕೋಳಿ, ಕುಮಾರ ತಳವಾರ ಮತ್ತಿತರರು ಉಪಸ್ಥಿತರಿದ್ದರು.

ಬಸವರಾಜ ಕೊಚ್ಚರಗಿ ನಿರೂಪಿಸಿದರು. ಬಿ.ಕೆ.ಸದಾಶಿವ ಸ್ವಾಗತಿಸಿದರು. ಜಗದೀಶ ಕಾಮತ ವಂದಿಸಿದರು. ಇದೇ ವೇಳೆ ವಿವಿಧ ಗ್ರಾಮಸ್ಥರು ಸಲ್ಲಿಸಿದ ಅಹವಾಲುಗಳನ್ನು ಆಲಿಸಿ ಪರಿಹರಿಸುವಂತೆ ಸಚಿವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');