ನೀತಿ ಆಯೋಗ ಮತ್ತು ಆರು ಕೇಂದ್ರ ಸಚಿವಾಲಯಗಳ ನೆರವಿನೊಂದಿಗೆ ಫಿನ್‍ಟೆಕ್ ಫೆಸ್ಟಿವಲ್ ಇಂಡಿಯಾದ 2ನೇ ಮೈಕ್ರೋಅನುಭವ ಸಮ್ಮೇಳನ

0
🌐 Belgaum News :

 

ಹುಬ್ಬಳ್ಳಿ : ಬೆಂಗಳೂರಿನಲ್ಲಿ ಹೂಡಿಕೆ, ಸೈಬರ್ ಭದ್ರತೆ, ಡಿಜಿಟಲ್ ಪಾವತಿಗಳು ಮತ್ತು ನಿಯೋ ಬ್ಯಾಂಕಿಂಗ್ ಕುರಿತು ಒಂದು ದಿನದ ಅವಧಿಯ ಫಿನ್‍ಟೆಕ್ ಫೆಸ್ಟಿವಲ್ ಇಂಡಿಯಾ 2021-2022 ರ ಎರಡನೇ ಮೈಕ್ರೋ ಅನುಭವ ಸಮ್ಮೇಳನ ಆಯೋಜಿಸಿತ್ತು.
ಫಿನ್‍ಟೆಕ್ ಫೆಸ್ಟಿವಲ್ ಇಂಡಿಯಾವನ್ನು ಕಾನ್ಸ್‍ಟೆಲ್ಲರ್ ಎಕ್ಸಿಬಿನ್ಸ್ ಆಯೋಜಿಸಿದೆ (ಟೆಮಾಸೆಕ್ ಮತ್ತು ಸಿಂಗಾಪುರ್ ಪ್ರೆಸ್ ಹೋಲ್ಡಿಂಗ್ಸ್‍ನ ಅಂಗ ಸಂಸ್ಥೆಯಾಗಿರುವ ಇದು ಸಿಂಗಾಪುರ್ ಫಿನ್‍ಟೆಕ್ ಉತ್ಸವವನ್ನು ಕೂಡಾ ಆಯೋಜಿಸುತ್ತದೆ) ಮತ್ತು ನೀತಿ ಆಯೋಗ ಮತ್ತು ಆರು ಕೇಂದ್ರ ಸರ್ಕಾರದ ಸಚಿವಾಲಯಗಳಿಂದ ಇದು ಬೆಂಬಲಿತವಾಗಿದೆ.

ಸಮ್ಮೇಳನವನ್ನು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ನಿರ್ದೇಶನಾಲಯ ಶ್ರೀಮತಿ ಮೀನಾ ನಾಗರಾಜ್.ಸಿ.ಎನ್, ಪ್ರಧಾನ ದಿಕ್ಸೂಚಿ ಭಾಷಣದೊಂದಿಗೆ ಆರಂಭಿಸಲಾಯಿತು.
ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ ಮಾತನಾಡಿ, ಕಳೆದ ದಶಕದಲ್ಲಿ ಭಾರತೀಯ ಆರ್ಥಿಕತೆಯು ಆಮೂಲಾಗ್ರ ಪರಿವರ್ತನೆಗೆ ಒಳಗಾಗಿದೆ. ತಂತ್ರಜ್ಞಾನ ಮತ್ತು ಹಣಕಾಸು ಅಥವಾ ಫಿನ್‍ಟೆಕ್‍ಗಳ ಸಂಗಮ ಈ ಬದಲಾವಣೆಯ ಕೇಂದ್ರ ಬಿಂದುವಾಗಿದೆ. ಭಾರತೀಯ ಫಿನ್‍ಟೆಕ್ ಮಾರುಕಟ್ಟೆಯು ಪ್ರಸ್ತುತ 31 ಶತಕೋಟಿಡಾಲರ್ ಮೌಲ್ಯ ಹೊಂದಿದೆ ಮತ್ತು 2025 ರ ವೇಳೆಗೆ 22% ಸಂಯುಕ್ತ ಬೆಳವಣಿಗೆಯಲ್ಲಿ 84 ಶತಕೋಟಿಡಾಲರ್‍ಗೆ ಬೆಳೆಯುವ ನಿರೀಕ್ಷೆಯಿದೆ ಎಂದು ವಿವರಿಸಿದರು.

ಭಾರತದ ಡೇಟಾ ಸೆಕ್ಯುರಿಟಿ ಕೌನ್ಸಿಲ್‍ನ ಸೈಬರ್ ಸೆಕ್ಯುರಿಟಿ ಸೆಂಟರ್ ಆಫ್ ಎಕ್ಸಲೆನ್ಸ್ ಸಿಇಒ ಡಾ. ಶ್ರೀರಾಮ್ ಬಿರುದಾವೊಲು, ಜೆಸ್ಟ್‍ಮನಿ ಮುಖ್ಯ ಸಿಇಒ ಲಿಜ್ಜಿಚಾಪ್‍ಮನ್, ಕೋನಾ ಕ್ಯಾಪಿಟಲ್‍ನ ವ್ಯವಸ್ಥಾಪಕ ಪಾಲುದಾರ ಗಣೇಶ್‍ರೆಂಗಸ್ವಾಮಿ, ಇಂಡಿಯಾ ಕೋಶಿಯೆಂಟ್‍ನ ಸಾಮಾನ್ಯ ಪಾಲುದಾರ ಆನಂದ್ ಲೂನಿಯಾ, ರೂಫಿ ಸಹಸಂಸ್ಥಾಪಕ ಅನುಭವಜೈನ್, ಓಪನ್ ಫೈನಾನ್ಶಿಯಲ್ ಟೆಕ್ನಾಲಜೀಸ್ ಸಹ-ಸಂಸ್ಥಾಪಕ ಮತ್ತು ಸಿಇಒ ಅನೀಶ್ ಅಚ್ಯುತನ್, ಕ್ರೆಡಿಟ್‍ಬಿ ಸಹ-ಸಂಸ್ಥಾಪಕ ಮತ್ತು ಸಿಇಒ ಮತ್ತು ಹಿರಿಯ ಉಪಾಧ್ಯಕ್ಷ ಮಧುಸೂದನ್ ಇ, ವೆಲ್ಸ್ ಫಾರ್ಗೋ ಮಾಹಿತಿ ಮತ್ತು ಸೈಬರ್ ಭದ್ರತೆ ಗುಂಪಿನ ಮುಖ್ಯಸ್ಥ ಶ್ರೀಧರ್ ಸಿಧು, ಸಿಂಪ್ಲಾಮೊಂಗ್ ಮುಖ್ಯ ವ್ಯಾಪಾರ ಅಧಿಕಾರಿ ಬಾಲು ರಾಮಚಂದ್ರನ್ ಮಾತನಾಡಿದರು.

‘ಕರ್ನಾಟಕ – ಸೈಬರ್ ಪವರ್ ಇಂಡಿಯಾ’ ಕುರಿತ ಶ್ವೇತಪತ್ರ ಸಹ ಈ ಸಮ್ಮೇಳನದಲ್ಲಿ ಅನಾವರಣಗೊಳಿಸಲಾಯಿತು.
ಮುಂದಿನ ಮೈಕ್ರೋ ಅನುಭವವನ್ನು ನವದೆಹಲಿಯಲ್ಲಿ ಆಗಸ್ಟ್ 27, 2021 ರಂದು ನಡೆಯಲಿದೆ.
ಪಿನಕ್ ಗುಪ್ತಾ | pinak.guptaconstellar.co

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');