ಹಾವೇರಿಯಲ್ಲಿ 10 ಕೋಟಿ ವೆಚ್ಚದಲ್ಲಿ ನೂತನ ಎಸ್ಪಿ ಕಚೇರಿ ನಿರ್ಮಾಣ : ಡಿಜಿಪಿ ಪ್ರವೀಣ್ ಸೂದ್

0
🌐 Belgaum News :

ಹಾವೇರಿ : ಜಿಲ್ಲೆಯಲ್ಲಿ 10 ಕೋಟಿ ವೆಚ್ಚದಲ್ಲಿ ನೂತನ  ಎಸ್ಪಿ ಕಚೇರಿ ನಿರ್ಮಾಣಕ್ಕೆ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಸೋಮವಾರ ರೌಂಡ್ಸ್ ಹೊಡೆಯುವ ಸ್ಥಳ ವೀಕ್ಷಣೆ ಮಾಡಿದರು.  ಸುರಿಯುವ ಮಳೆಯಲ್ಲೆ ಡಿಜಿಪಿ ಸ್ಥಳ ವಿಕ್ಷಣೆ ಮಾಡಿ, ಪೋಲಿಸ್ ಇಲಾಖೆಯ ಸಂಪೂರ್ಣ ಮಾಹಿತಿ ಕಲೆ ಹಾಕಿದರು.

ಎಸ್ಪಿ ಕಚೇರಿ ನಿರ್ಮಾಣಕ್ಕೆ ದೂರು ಬಂದ ಹಿನ್ನಲೆ ತಾವೇ ಖುದ್ದು ಭೇಟಿ ನೀಡಿ ಪರಿಶೀಲನೆ ಮಾಡಿ, ಹೊಸ ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದರು.  ಹಳೆ ಪಿಬಿ ರಸ್ತೆಯಲ್ಲಿ ಎಸ್ಪಿ ಹಾಗೂ ಟ್ರಾಪೀಕ್ ಕಚೇರಿ ನಿರ್ಮಾಣವಾಗಲಿದೆ. ಶಿಗ್ಗಾವಿಯಲ್ಲಿ ಡಿವೈಎಸ್ಪಿ ಹಾಗೂ ಪೊಲೀಸ್ ಶಾಲೆ ನಿರ್ಮಾಣವಾಗಲಿದೆ. ಹಳೆ ಎಸ್ಪಿ ಜಾಗಕ್ಕೆ ಕೆರೆಯ ನೀರು ಬರುತ್ತಿದ್ದು ಅಲ್ಲಿ ಸಮಸ್ಯೆ ಆಗಿದೆ. ಅದನ್ನು ಪೊಲೀಸ್ ಕೆಲಸಗಳಿಗೆ ಬಳಸಿಕೊಳ್ಳುವ ಯೋಚನೆ ಇದೆ‌ ಎಂದು ಮಾಹಿತಿ ನೀಡಿದರು.

ಇನ್ನೂ ನಗರದಲ್ಲಿ ಕೆಲಸ ಮಾಡದ ಸಿಸಿ ಕ್ಯಾಮರಾ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲೆ ಹಾಗೂ ನಗರದಲ್ಲಿ ಯಾರು ಸಿಸಿ ಕ್ಯಾಮರಾ ಹಾಕಿದ್ದಾರೆ. ಅವರನ್ನ ಕೇಳಬೇಕು, ಹಾಗೇ ಸರಿಯಾಗಿ ಕೆಲಸ ಮಾಡ್ತಾ ಇದಾರಾ ಅಂತ ಕೇಳಬೇಕು ವಿಚಾರಿಸಬೇಕಾಗಿದೆ. ಎಎಂಸಿ ಆಗಬೇಕು ಅದಕ್ಕೆ ನಾವು ಕ್ರಮ ತೆಗೆದುಕೊಳ್ತೇವಿ ಅದನ್ನು ಮಾಡ್ತೇವಿ ಎಂದರು. ಈ ಸಂದರ್ಭದಲ್ಲಿ ದಾವಣಗೆರೆ ಐಜಿ , ಹಾವೇರಿ ಎಸ್ಪಿ ಇದ್ದರು./////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');