ಗೋಕಾಕನಲ್ಲಿ ಭೀಕರ ಅಪಘಾತ : ಓರ್ವ ಮಹಿಳೆ ಸಾವು, ತಂದೆ ಸ್ಥಿತಿ ಚಿಂತಾಜನಕ

0
🌐 Belgaum News :

ಗೋಕಾಕ :  ಬೈಕ್  ಮೇಲೆ ಹೊರಟ ತಂದೆ-ಮಗಳಿಗೆ  ಸಿಲಿಂಡರ್ ವಾಹನವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಮಗಳು  ಮೃತಪಟ್ಟಿದ್ದು, ಬೈಕ್ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಸೋಮವಾರ ಮಧ್ಯಾಹ್ನ ಸಂಗನಕೇರಿ ವ್ಯಾಪ್ತಿಯ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿಯಲ್ಲಿ ದುರ್ಘಟನೆ ನಡೆದಿದೆ.

ಶಾಮಲಾ ಸುರೇಶ ಶಿವಾಪೂರ  ಮೃತ ದುರ್ದೈವಿ,  ತಂದೆ  ಸಿದ್ದಪ್ಪ ಪುಂಡಲೀಕ ಮನ್ನಿಕೇರಿಯವರಿಗೆ ಗಂಭೀರ ಗಾಯಗಳಾಗಿವೆ. ತಂದೆ- ಮಗಳು ಗೋಕಾಕಗೆ ತೆರಳು ವೇಳೆ ದಾರಿ ಮಧ್ಯದಲ್ಲಿ ಸಿಲಿಂಡರ್ ವಾಹನವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನ ನಿಯಂತ್ರಣ ತಪ್ಪಿದೆ. ವೇಗವಾಗಿ ಚಲಿಸುತ್ತಿದ್ದ ವಾಹನ ಮಹಿಳೆ ತಲೆ ಮೇಲೆ ಹರಿದಿದೆ.  ಬೈಕ್ ಸವಾರನ  ಸ್ಥಿತಿ ಚಿಂತಾಜನಕವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.  ಸಿದ್ದಪ್ಪನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟಪ್ರಭಾ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ./////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');