ವಿದ್ಯಾರ್ಥಿಗಳು ಗುರುಗಳ ಮಾರ್ಗದರ್ಶನದಲ್ಲಿ ನಡೆದರೆ ಯಶಸ್ಸು ಸಾಧ್ಯ: ತಹಶೀಲ್ದಾರ ಮಹಾಂತ

0
🌐 Belgaum News :

ಗೋಕಾಕ:  ವಿದ್ಯಾರ್ಥಿಗಳು ನಿರ್ಧಿಷ್ಠ ಗುರಿಯೊಂದಿಗೆ ಗುರುಗಳ ಮಾರ್ಗದರ್ಶನದಲ್ಲಿ ಕಠಿಣ ಪರಿಶ್ರಮದಿಂದ ಪ್ರಯತ್ನಶೀಲರಾದರೆ ಯಶಸ್ಸು ನಿಶ್ಚಿತ ಎಂದು ಮೂಡಲಗಿ ತಾಲೂಕಿನ ತಹಶೀಲ್ದಾರ ಡಿ.ಜಿ. ಮಹಾಂತ ಅವರು ಹೇಳಿದರು.

ನಗರದ ಎನ್.ಎಸ್.ಎಫ್ ಅತಿಥಿ ಗೃಹದಲ್ಲಿ ಭೀಮವ್ವಾ ಲಕ್ಷ್ಮಣರಾವ್ ಜಾರಕಿಹೊಳಿ ಟ್ರಸ್ಟಿನಿಂದ ಶಾಸಕ ಹಾಗೂ ಟ್ರಸ್ಟಿನ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಆಯೋಜಿಸಿದ್ದ , ಮೂಡಲಗಿ ವಲಯದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಹಾಗೂ ಸತ್ಕಾರ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.

ಬಾಬಾಸಾಹೇಬ ಅಂಬೇಡ್ಕರಂತಹ ಮಹಾನ್ ನಾಯಕರ ಸಾಧನೆ ನಿಮಗೆ ಪ್ರೇರಣೆಯಾಗಿ ಅವರಂತೆಯೇ ನೀವು ಪ್ರತಿಭಾನ್ವಿತರಾಗಿರಿ. ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರು ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿ ವಿದ್ಯಾರ್ಥಿಗಳ ಸಾಧನೆಗೆ ಪೂರಕವಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಇವರ ಈ ಪ್ರಯತ್ನದಿಂದಲೇ ಇಂದು ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ ಹಾಗೂ ಇಂಜನೀಯರಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾರೆ. ಐ.ಎ.ಎಸ್. ಹಾಗೂ ಐ.ಪಿ.ಎಸ್ ನಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಲು

ವಿದ್ಯಾರ್ಥಿಗಳು ಪ್ರಯತ್ನಶೀಲರಾಗಬೇಕು. ಇದಕ್ಕೆ ಶಾಸಕರ ಸಹಾಯ, ಸಹಕಾರ ಸದಾ ಇದ್ದು, ತಾವುಗಳು ಪ್ರತಿಭಾನ್ವಿತರಾಗಿ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳುವುದರೊಂದಿಗೆ ತಾಲೂಕಿನ ಕೀರ್ತಿಯನ್ನು ಹೆಚ್ಚಿಸುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕರಾದ ನಾಗಪ್ಪಾ ಶೇಖರಗೋಳ, ನಿಂಗಪ್ಪ ಕುರಬೇಟ, ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಡಾ. ಆರ್.ಎಸ್.ಬೆಣಚಿನಮರಡಿ, ಸಿಪಿಐಗಳಾದ ವೆಂಕಟೇಶ ಮುರನಾಳ, ಶ್ರೀಶೈಲ ಬ್ಯಾಕೂಡ, ಬಿಇಓ ಅಜೀತ ಮನ್ನಿಕೇರಿ, ಜಿಲ್ಲಾ ಸಮನ್ವಯ ಅಧಿಕಾರಿ ಆರ್.ವಾಯ್.ಗಂಗರೆಡ್ಡಿ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಎಮ್.ಎಲ್.ಜನ್ಮಟ್ಟಿ ಇದ್ದರು./////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');