ಮುಕ್ತಿ ಮಠದ ಶ್ರೀಗಳ ಜನ್ಮದಿನೋತ್ಸವ:ಧಾರ್ಮಿಕ ಕಾಯ೯ಕ್ರಮ

0
🌐 Belgaum News :

ಬೆಳಗಾವಿ ದ 16:- ತಾಲೂಕಿನ ಸುಕ್ಷೇತ್ರ ಮುಕ್ತಿ ಮಠದ ಆವರಣದಲ್ಲಿ ಭಾರತದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಅಂಗವಾಗಿ ರಾಷ್ಟ್ರ ಧ್ವಜಾರೋಹಣವನ್ನು ಪರಮಪೂಜ್ಯ ತಪೋರತ್ನ ಶ್ರೀ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರು ನೇರವೇರಿಸಿದರು, ಶಿವಸಿದ್ದ ಸೋಮೇಶ್ವರ ಪ್ರೌಢಶಾಲೆಯ ಸಿಬ್ಬಂದಿ ವಗ೯, ವಿದ್ಯಾರ್ಥಿಗಳು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಸಿಕೊಟ್ಟರು

ಶ್ರೀ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರ ೫೨ ನೇಯ ಜನ್ಮದಿನೋತ್ಸವ ನಿಮಿತ್ತ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಶ್ರೀ ಗಳಿಗೆ ಭಕ್ತಿ ಪೂವ೯ಕ ಅಭಿನಂದನೆ ಸಲ್ಲಿಸಿದರು, ಕೇಕ್ ವಿತರಿಸಲಾಯಿತು
ಶ್ರೀಗಳ ತಪಸ್ಸಿನ ಶಕ್ತಿಯಿಂದ ಮುಕ್ತಿ ಮಠವು ಅಭೂತಪೂರ್ವ ಅಭಿವೃದ್ಧಿ ಕಾಯ೯ ಗಳಾಗಿದ್ದು ಧಾರ್ಮಿಕ ಸಾಮಾಜಿಕ ವಾಗಿ ಯಶಸ್ಸು ಗಳಿಸಿ ಭೂಕೈಲಾಸ ವಾಗಿ ರೂಪಗೊಂಡಿದ್ದು, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚಿನ ಧಾರ್ಮಿಕ ಕಾಯ೯ ಗಳಾಗಲೇಂದು ಭಕ್ತರು ಆಶಿಸಿದರು
ಹಲವು ಧಾರ್ಮಿಕ ಪೂಜೆ ಗಳು ಜರುಗಿದವು,ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಲಾಯಿತು

ಬೀದರ್, ಗುಲ್ಬರ್ಗಾ, ಹುಬ್ಬಳ್ಳಿ ಹಾವೇರಿ, ಬೆಳಗಾವಿ ಧಾರವಾಡ ಸೇರಿದಂತೆ ಹಲವು ಜಿಲ್ಲೆ ಗಳ ಭಕ್ತರ ಸಮೂಹ ಆಗಮಿಸಿ ಶ್ರೀಗಳವರಿಗೆ ಹುಟ್ಟು ಹಬ್ಬದ ನಿಮಿತ್ತ ಪೂಜಿಸಿ ಗೌರವಿಸಿ ಶುಭ ಕೋರಿದರು,
ಬೀದರ್ ಜಿಲ್ಲೆಯ ಇಟಗಾ ಮಠದ ಹಿರಿಯ ಪೀಠಾಧಿಪತಿ ಗಳಾದ ಪೂಜ್ಯ ಶ್ರೀ ಚನ್ನಮಲ್ಲೇಶ್ವರ ತ್ಯಾಗಿ ಗಳು ಸೇರಿದಂತೆ ಧಾರ್ಮಿಕ ,ಸಾಮಾಜಿಕ, ಶೈಕ್ಷಣಿಕ ರಂಗದ ಪ್ರಮುಖರು ಭಕ್ತರು, ಶಿವಸಿದ್ದ ಸೋಮೇಶ್ವರ ಪ್ರೌಢಶಾಲೆಯ ಸಿಬ್ಬಂದಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');