ಶ್ವಾನಗಳಿಗೆ ಉಚಿತ ರೇಬಿಸ್ ಲಸಿಕಾ ಕಾರ್ಯಕ್ರಮ

0
🌐 Belgaum News :

ಬೆಳಗಾವಿ,ಆ.: ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ “ಆಜಾದಿ ಕಾ ಅಮೃತ ಮಹೋತ್ಸವ”ದ ಅಂಗವಾಗಿ ಮಹಾಂತೇಶ ನಗರದಲ್ಲಿನ ಪಶು ಚಿಕಿತ್ಸಾಲಯದಲ್ಲಿ (ಆ.14) ಶನಿವಾರ ಶ್ವಾನಗಳಿಗೆ ಉಚಿತ ರೇಬಿಸ್ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಸ್ಥಳೀಯ ಶಾಸಕರಾದ ಅನಿಲ ಬೆನಕೆಯವರು ಪಶು ಚಿಕಿತ್ಸಾಲಯದ ಆವರಣದಲ್ಲಿ ಸಸಿ ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಡಾ.ಶ್ರೀಕಾಂತ ಎಮ್.ಗಾಂವಿ ಅವರು “ರೇಬಿಸ್ ರೋಗ”ವು ಹುಚ್ಚು ನಾಯಿ ಕಡಿತದಿಂದ ಬರುವಂತಹ ಮಾರಣಾಂತಿಕ ಕಾಯಿಲೆಯಾಗಿರುವುದರಿಂದ ಪ್ರತಿ ವರ್ಷ ದೇಶದಲ್ಲಿ ಸುಮಾರು 30,000 ಜನರು ಈ ರೋಗಕ್ಕೆ ತುತ್ತಾಗಿ ಮರಣ ಹೊಂದುತ್ತಿದ್ದಾರೆ ಎಂದು ತಿಳಿಸಿದರು.

ಪ್ರತಿ ವರ್ಷ ದೇಶದಲ್ಲಿ ಸುಮಾರು 11 ರಿಂದ 13 ಲಕ್ಷ ಜನರು ಹುಚ್ಚು ನಾಯಿ ಕಡಿತದಿಂದ ಚಿಕಿತ್ಸೆ ಪಡೆಯುತ್ತಾರೆ. ಈ ರೋಗದ ಲಕ್ಷಣಗಳು ಕಂಡನಂತರ ಸಾವು ನಿಶ್ಚಿತವಾಗಿರತ್ತದೆ. ಈ ರೋಗಕ್ಕೆ ಯಾವುದೇ ಚಿಕಿತ್ಸೆಯಿಲ್ಲದ ಕಾರಣ ಲಸಿಕೆಯೊಂದೇ ಉಪಾಯ ಎಂದು ಅವರು ತಿಳಿಸಿದರು.

ಶಾಸಕರಾದ ಅನಿಲ ಬೆನಕೆಯವರು ತಾಲ್ಲೂಕಿನ ಎಲ್ಲ ಶ್ವಾನ ಪ್ರಿಯರಿಗೆ ಈ ಕಾರ್ಯಕ್ರಮದ ಲಾಭವನ್ನು ಪಡೆದುಕೊಳ್ಳುವಂತೆ ಪೆÇ್ರೀತ್ಸಾಹಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರಾದ ಡಾ.ಅಶೋಕ ಕೊಳ್ಳ, ಮಹಾಂತೇಶ ನಗರದ ಪಶು ಚಿಕಿತ್ಸಾಲಯದ ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾ.ಹೆಚ್.ವಾಯ್.ಯರಗಟ್ಟಿ ಉಪಸ್ಥಿತರಿದ್ದರು.

ಲಸಿಕಾ ಕಾರ್ಯಕ್ರಮದಲ್ಲಿ ಸುಮಾರು 120ಕ್ಕೂ ಹೆಚ್ಚು ವಿವಿಧ ತಳಿಯ ಶ್ವಾನಗಳಿಗೆ “ರೇಬಿಸ್ ಲಸಿಕೆ” ನೀಡಲಾಯಿತು. ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಸಂಸ್ಥೆಯ ಪಶುವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');