ನಗರ ಸ್ಥಳೀಯ ಸಂಸ್ಥೆಗಳ ವಿವಿಧ ವಾರ್ಡ್‍ಗಳ ಖಾಲಿ ಸ್ಥಾನಕ್ಕೆ ಉಪ ಚುನಾವಣೆ: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ

0
🌐 Belgaum News :

 

ಬೆಳಗಾವಿ,ಆ.16: ಖಾಲಿ ಇರುವ ರಾಯಬಾಗ ಪಟ್ಟಣ ಪಂಚಾಯಿತಿ ವಾರ್ಡ್ ನಂ. 09 ಹಾಗೂ ಸವದತ್ತಿ ಯಲ್ಲಮ್ಮ ಪುರಸಭೆಯ ವಾರ್ಡ್ ನಂ. 23ರ ಸ್ಥಾನಗಳನ್ನು ಭರ್ತಿ ಮಾಡಲು ಉಪ ಚುನಾವಣೆಯನ್ನು ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ರಾಯಬಾಗ ಪಟ್ಟಣ ಪಂಚಾಯತ ವಾರ್ಡ್ ಸಂಖ್ಯೆ 09 ಹಿಂದುಳಿದ ವರ್ಗ “ಅ” ಹಾಗೂ ಸವದತ್ತಿ ಯಲ್ಲಮ್ಮ ಪುರಸಭೆಯ ವಾರ್ಡ್ ಸಂಖ್ಯೆ 23 ಹಿಂದುಳಿದ ವರ್ಗ “ಅ”(ಮಹಿಳೆ) ಕ್ಕೆ ಮೀಸಲಿರಿಸಲಾಗಿದೆ.

ನಾಮಪತ್ರಗಳನ್ನು ಸಲ್ಲಿಸಲು ಆಗಸ್ಟ್ 23 ಕೊನೆಯ ದಿನವಾಗಿದ್ದು, ನಾಮಪತ್ರಗಳನ್ನು ಆಗಸ್ಟ್ 24 ರಂದು ಪರಿಶೀಲಿಸಲಾಗುವುದು ಹಾಗೂ ಸೆಪ್ಟೆಂಬರ್ 3 ರಂದು ಮತದಾನ ನಡೆಯಲಿದೆ.
ಮತಗಳ ಎಣಿಕೆ ಸೆಪ್ಟೆಂಬರ್ 6 ರಂದು ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳಾದ ಎಂ.ಜಿ.ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');