ಸಾಂತ್ವನ ಕೇಂದ್ರದಲ್ಲಿದ್ದ ವಿದೇಶಿ ಮಹಿಳೆಯವರು ಕಾಂಪೌಂಡ್ ಹಾರಿ ಎಸ್ಕೇಪ್

0
🌐 Belgaum News :

ಬೆಂಗಳೂರು: ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದ ಐವರು ವಿದೇಶಿ ಮಹಿಳೆಯವರು ಕಾಂಪೌಂಡ್​ ಹಾರಿ ಎಸ್ಕೇಪ್ ಆಗಿದ್ದಾರೆ.

ವೀಸಾ ಹಾಗೂ ಪಾಸ್ ಪೋರ್ಟ್ ಅವಧಿ ಮುಗಿದ ಹಿನ್ನೆಲೆಯಲ್ಲಿ ನಗರದ ಪೂರ್ವ ವಿಭಾಗದ ಪೊಲೀಸರು 15 ಜನ ವಿದೇಶಿಯರನ್ನ ವಶಕ್ಕೆ ಪಡೆದಿದ್ದರು. ಈ ಪೈಕಿ ಮೂವರು ಕಾಂಗೋ ,ಇಬ್ಬರು ನೈಜಿರೀಯನ್ ಮಳೆಯರನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿರಿಸಲಾಗಿತ್ತು.

ನಿನ್ನೆ ತಡರಾತ್ರಿ ಪೊಲೀಸರ ಕಣ್ತಪ್ಪಿಸಿ ಐವರು ಮಹಿಳೆಯರು ಕಾಂಪೌಂಡ್​ ಜಿಗಿದು ಎಸ್ಕೇಪ್​ ಆಗಿದ್ದಾರೆ. ತಪ್ಪಿಸಿಕೊಳ್ಳುವ ವೇಳೆ ಓರ್ವ ಮಹಿಳೆಯ ಕಾಲು ಮುರಿದಿದ್ದು, ಸದ್ಯ ಪೊಲೀಸರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ಮಹಿಳೆಯರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ./////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');