ಸಹಕಾರಿ ಕ್ಷೇತ್ರದಿಂದ ಸಮಾಜದಲ್ಲಿ ಪರಸ್ಪರ ಸಹಕಾರದ ಮೂಲಕ ಅಭಿವೃದ್ಧಿ :ಜ್ಞಾನಯೋಗಾಶ್ರಮದ ಪ.ಪೂಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು

0
🌐 Belgaum News :

ಶೇಡಬಾಳ ;- ಸಹಕಾರಿ ಕ್ಷೇತ್ರದಿಂದ ಸಮಾಜದಲ್ಲಿ ಪರಸ್ಪರ ಸಹಕಾರದ ಮೂಲಕ ಅಭಿವೃದ್ಧಿ ಹೊಂದಲು ಸಾಧ್ಯ. ಆ ಕಾರ್ಯ ಜೂಗುಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮೂಲಕ ಅಣ್ಣಾಸಾಹೇಬ ಪಾಟೀಲ ಮತ್ತು ಅವರ ಬಳಗದವರು ಕೂಡಿಕೊಂಡು ನಿಸ್ವಾರ್ಥ ಮನೋಭಾವನೆಯಿಂದ ಮಾಡುತ್ತಿರುವ ಪರಿಣಾಮವೇ ಈ ಸಂಸ್ಥೆ ಇಷ್ಟೊಂದು ಉತ್ತುಂಗಕ್ಕೇರಲು ಸಾಧ್ಯವಾಗಿದೆ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಪ.ಪೂಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ನುಡಿದರು.

ಸೋಮವಾರ ದಿ.16 ರಂದು ಕಾಗವಾಡ ತಾಲೂಕಿನ ಜುಗೂಳ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವದ ನೂತನ ಕಟ್ಟಡದ ಉದ್ಘಾಟನೆ, ಸಂಕಲ್ಪ ಸಿದ್ದಿ ಗಜಾನನ ಮಂದಿರದ ಕಳಸಾರೋಹಣ, ಅಲ್ಫತಾಹ ಮೈನಾರಿಟಿ ಮಲ್ಟಿ ಪರಪಜ್ ಕೋಆಫ್ ಸೊಸಾಯಟಿಯ ಕಟ್ಟಡದ ಅಡಿಗಲ್ಲು ಸಮಾರಂಭ ನೆರವಬೇಋಇಸಿ ಅವರು ಮಾತನಾಡುತ್ತಿದ್ದರು

ಸಹಕಾರಿ ಕ್ಷೇತ್ರ ಪರಸ್ಪರ ನಂಬಿಕೆ ಹಾಗೂ ವಿಶ್ವಾಸದಿಂದ ಮಾತ್ರ ಪ್ರಗತಿ ಹೊಂದುವ ಕ್ಷೇತ್ರವಾಗಿದೆ. ಆ ನಿಟ್ಟಿನಲ್ಲಿ ಜುಗೂಳ,ಮಂಗಾವತಿ, ಶಹಾಪುರ ಗ್ರಾಮಗಳ ರೈತ ಬಾಂಧವರು ಈ ಸಂಸ್ಥೆಯ ಮೇಲೆ ಹಾಗೂ ಅಣ್ಣಾಸಾಬ ಪಾಟೀಲರ ಮೇಲೆ ವಿಶ್ವಾಸವಿಟ್ಟು ವ್ಯವಹಾರ ನಡೆಸುತ್ತಿರುವದರಿಂದ ಈ ಸಂಸ್ಥೆ ಉತ್ತಮ ರೀತಿಯಲ್ಲಿ ನಡೆದಿದ್ದು ಈ ಸಂಸ್ಥೆ ಇನ್ನಷ್ಟು ಬೆಳೆದು ರೈತರಿಗೆ, ಕೃಷಿ ಕಾರ್ಮಿಕರಿಗೆ ಅನುಕೂಲವಾಗಲಿ ಎಂದು ಪುಜ್ಯರು ಹರಿಸಿದರು.

ಈ ವೇಳೆ ಸಂಸ್ಥೆಯ ಅಧ್ಯಕ್ಷ ಅಣ್ಣಾಸಾಬ ಪಾಟೀಲ ಮಾತನಾಡಿ ಪುಜ್ಯರ ಅಮೃತ ಹಸ್ತದಿಂದ ಶತಮಾನೋತ್ಸದ ಕಟ್ಟಡದ ಅಡಿಗಲ್ಲು ನೆರವೇರಿತ್ತು. ಈಗ ಅವರ ಹಸ್ತದಿಂದಲೇ ಉದ್ಘಾಟನೆಯಾಗಿರುವುದು ನಮ್ಮೆಲ್ಲರ ಭಾಗ್ಯ ಎಂದರು. 72.55 ಲಕ್ಷ ರೂ ವೆಚ್ಚದಲ್ಲಿ ಶತಮಾನೋತ್ಸವದ ಕಟ್ಟಡವನ್ನು ನಿರ್ಮಿಸಲಾಗಿದೆ. ಈ ಸಂಸ್ಥೆ 3072 ಸದಸ್ಯರನ್ನು ಹೊಂದಿದ್ದು, 37.71 ಕೋಟಿ ರೂ ದುಡಿಯುವ ಬಂಡವಾಳ ಹೊಂದಿದೆ, 149 ಕೋಟಿ ರೂ ವಾರ್ಷಿಕ ವಹಿವಾಟು ಹೊಂದಿದೆ.

1.12 ಕೋಟಿ ರೂ ಶೇಅರ ಬಂಡವಾಳ ಇದ್ದು, 3.12 ಕೋಟಿ ರೂ ಕಾಯ್ದಿಟ್ಟ ನಿಧಿಗಳು ಇವೆ. 20.12 ಕೋಟಿ ರೂ ಠೇವುಗಳಿದ್ದು, 22.83 ಕೋಟಿ ಸಾಲ ವಿತರಿಸಲಾಗಿದೆ. ನಿವ್ವಳ ಲಾಭ 63.66 ಲಕ್ಷ ರೂ ಆಗಿದೆ ಎಂದು ಪುಜ್ಯರಿಗೆ ವಿವರಿಸಿದರು.

ಈ ವೇಳೆ ಬಸವೇಶ್ವರ ಸ್ವಾಮಿಗಳು ಅಧ್ಯಕ್ಷ ಅಣ್ಣಾಸಾಬ ಪಾಟೀಲ, ಉಪಾಧ್ಯಕ್ಷ ಬಾಬಗೌಡ ಪಾಟೀಲ, ನಿರ್ದೆಶಕರಾದ ಶಿವಗೌಡ ಪಾಟೀಲ, ತಾತ್ಯಾಸಾಬ ವಸವಾಡೆ, ಬಾಲಚಂದ್ರ ಅಂಬಿ, ಶಿವಾನಂದ ಕಡೋಲೆ, ಈರಗೌಡ ಪಾಟೀಲ, ರಮಜಾನ ಅಲಾಸೆ, ಮಚ್ಚೇಂದ್ರ ಗಸ್ತಿ, ಸುರೇಶ ಪಾಟೀಲ, ವಿಶ್ವನಾಥ ಶಮನೇವಾಡಿ, ಕಾರ್ಯನಿರ್ವಾಹಕ ಚಿದಾನಂದ ಬೆಡಕಿಹಾಳೆ, ಅಸ್ಲಮ್ ಅಪರಾಜ, ಬಿ.ಆಯ್.ಪಾಟೀಲ, ಕಾಕಾ ಪಾಟೀಲ, ಅನೀಲ ಕಡೋಲಿ, ರಾಜು ಕಡೋಲಿ, ಉಮೇಶ ಪಾಟೀಲ ಸೇರಿದಂತೆ ಅನೇಕರು ಇದ್ದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');