ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತವನ್ನು ಉದ್ಘಾಟಿಸಿದ: ಕಾಂಗ್ರೆಸ್ ಮುಖಂಡ ಧರೆಪ್ಪ ಠಕ್ಕಣ್ಣವರ

0
🌐 Belgaum News :
ಅಥಣಿ: ಸಮೀಪದ ಭರಮಖೋಡಿಯ ಲಕ್ಷ್ಮೀ ನಗರದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತವನ್ನು  ಸಮಾಜ ಸೇವಕ, ಕಾಂಗ್ರೆಸ್ ಮುಖಂಡ ಧರೆಪ್ಪ ಠಕ್ಕಣ್ಣವರ ಉದ್ಘಾಟಿಸಿದರು.
ವೃತ್ತ ಉದ್ಘಾಟಿಸಿ ಮಾತನಾಡಿದ ಅವರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಟದ ಕಹಳೆ ಊದಿ ಸ್ವಾತಂತ್ರ್ಯದ ಕಿಡಿ ಹೊತ್ತಿಸಿ ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಅಪ್ರತಿಮ ದೇಶಪ್ರೇಮಿಯಾಗಿದ್ದಾರೆ. ರಾಯಣ್ಣನ ಜನ್ಮ ದಿನದಂದೇ ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು ಹೆಮ್ಮೆಯ ವಿಷಯವಾಗಿದೆ.
ನಾವೆಲ್ಲ ಇಂದು ಸ್ವಾತಂತ್ರ್ಯತ್ಸವದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ಮಹಾತ್ಮಾ ಗಾಂಧೀಜಿ, ಸುಭಾಶ ಚಂದ್ರ ಬೋಸ್ ಸೇರಿದಂತೆ ಹಲವಾರು ಮಹನೀಯರ ತ್ಯಾಗ ಬಲಿದಾನವನ್ನು ಇಂದು ಸ್ಮರಿಸಬೇಕಿದೆ ಎಂದರು.
ಕಾಂಗ್ರೆಸ್ ಯುವ ಮುಖಂಡ ನಿಶಾಂತ ದಳವಾಯಿ ಮಾತನಾಡಿ ಕಿತ್ತೂರ ರಾಣಿ ಚನ್ನಮ್ಮನ ಬಲಗೈ ಭಂಟನಾಗಿದ್ದ ರಾಯಣ್ಣನ ಧೈರ್ಯ, ತತ್ವ-ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದರು.
ಈ ವೇಳೆ ಭರಮಖೋಡಿಯ ರಾಯಣ್ಣನ ಅಭಿಮಾನಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಚಿದಾನಂದ ಮುಖನಿ, ಅಜೀತ ಶಿಂಧೆ, ಅಶೋಕ ಸತ್ತಿ, ನಾಗಪ್ಪ ಹಣಮಾಪುರೆ, ಮುದಕಪ್ಪ ಬೆವನೂರ, ಬಸವರಾಜ ಠಕ್ಕಣ್ಣವರ, ಶ್ರೀಶೈಲ ಬೇಳೂರ, ಸುಭಾಷ ಮಡಿವಾಳ, ಗ್ರಾಮ ಪಂಚಾಯಿತ ಸದಸ್ಯ ಶಂಕರ ಗಡದಿ, ಮುರುಗೇಶ ನರೋಟಿ, ಭೀರಪ್ಪ ಬೆವನೂರ, ಅಪ್ಪಾಸಾಬ ಹಣಮಾಪುರೆ, ವಿಠ್ಠಲ ಬೆವನೂರ, ಮುರುಗೇಶ ಬೆವನೂರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');