ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

0
🌐 Belgaum News :
ಅಥಣಿ: ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿನಿಲಯಗಳಲ್ಲಿ ವ್ಯಾಸಂಗ ಮಾಡಿ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಗರಿಷ್ಟ ಅಂಕ ಗಳಿಸಿದ ತಲಾ ಒಬ್ಬರು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ೭೫ ನೇ ಸ್ವಾತಂತ್ರೋತ್ಸವದ ಅಂಗವಾಗಿ ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು.
ವಿಕ್ರಮಪುರ ಬಡಾವಣೆಯಲ್ಲಿರುವ ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ನಡೆದ ಸ್ವಾತಂತ್ರೋತ್ಸವದ ಅಮೃತಮಹೋತ್ಸವದ ಅಂಗವಾಗಿ ಈ ಅಭಿನಂದನಾ ಕಾರ್ಯಕ್ರಮ ಜರುಗಿತು. ಸರ್ಕಾರಿ ಆದೇಶದಂತೆ ಹಾರ,ತುರಾಯಿ ನೀಡದೇ ಅಭಿನಂದನಾ ಪತ್ರ ಜೊತೆಗೆ ಡಾ.ಬಿ,.ಆರ. ಅಂಬೇಡ್ಕರ ಅವರ ಜೀವನಚರಿತ್ರೆ ಯ ಪುಸ್ತಕ ನೀಡಿ ಗೌರವಿಸಲಾಯಿತು.
ಎಸ್.ಎಸ್.ಎಲ್.ಸಿ ಯಲ್ಲಿ ಚೇತನ ಮಗದುಮ್ಮ, ರೋಹಿಣಿ ತೇಲಿ ಮತ್ತು ಪಿಯುಸಿಯಲ್ಲಿ ಆಕಾಶ ಕುಮಠಳ್ಳಿ, ಪಲ್ಲವಿ ಮಾದರ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಾಗಿದ್ದು.
ಈ ಸಂದರ್ಭದಲ್ಲಿ ಕಲ್ಯಾಣಾಧಿಕಾರಿಗಳಾದ ಶೀತಲ್ ಹೊಂಗಲ್,ಮಾತನಾಡಿ ಸರ್ಕಾರಿ ಹಾಸ್ಟೆಲ್ ಗಳಲ್ಲಿ ಉಳಿದು ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಬಡ ಕುಟುಂಬದಿಂದ ಬಂದವರಾಗಿರುತ್ತಾರೆ.ಸರ್ಕಾರದ ಸೌಲಭ್ಯಗಳನ್ನು ಸರಿಯಾಗಿ ತಲುಪಿಸಿ ಅವರ ವಿದ್ಯಾಭ್ಯಾಸಕ್ಕೆ ಮನೆಯ ವಾತಾವರಣ ಕಲ್ಪಿಸುವದು ಸಿಬ್ಬಂದಿ ವರ್ಗದ ಸವಾಲಿನ ಕೆಲಸವಾಗಿರುತ್ತದೆ.ಅಂತಹ ಪೂರಕ ವಾತಾವರಣ ಕಲ್ಪಿಸಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕೆಲಸವನ್ನು ಹಾಸ್ಟೆಲ್ ಸಿಬ್ಬಂದಿ ಮಾಡುತ್ತ ಬಂದಿದ್ದಾರೆ.
ಮನೆಯ ಪರಿಸ್ಥಿತಿ ಅರಿತ ಮಕ್ಕಳು ಅಷ್ಟೇ ಕಷ್ಟ ಪಟ್ಟು ಓದುವ ಮೂಲಕ ತಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಹೆಚ್ಚಿನ ವಿದ್ಯಾಭ್ಯಾಸವನ್ನು ತಮ್ಮ ಪರಿಶ್ರಮದಿಂದ ಮಾಡುವ ಮೂಲಕ ಕೀರ್ತಿ ತಂದಿದ್ದು ಅವರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುತ್ತೇನೆ ಎಂದರು.ಈ ವೇಳೆ ವಿಸ್ತರಣಾಧಿಕಾರಿಗಳಾದ ವೆಂಕಟೇಶ ಕುಲಕರ್ಣಿ,  ಎಲ್.ಐ.ಸಿ ಅಧಿಕಾರಿ ಮಹೇಶ ಸನ್ನಕ್ಕಿ,  ಮೇಲ್ವಿಚಾರಕರುಗಳಾದ ಎ.ಎಸ್. ಸತಿಗೌಡರ, ಎಸ್.ಕೆ.ಬಸಣ್ಣವರ, ಬಿ.ಆರ್. ಯಲ್ಲಟ್ಟಿ, ಎಂ.ಎ ಗಾಡಿವಡ್ಡರ, ಪಿ.ಎಲ್.ಮಾಳಗೊಂಡ, ಕೇದಾರಿ ಬಾಗಿ, ಪಿ.ಎಸ್.ಮಲಗೌಡರ, ಮನೋಹರ. ಬ್ಯಾಕೋಡ, ಆರ್,ಎ,ಮೋಮಿನ, ರುದ್ರಗೌಡ ಭಾವಿಮನಿ, ಪಿಕೆ.ಬಡಿಗೇರ, ಸಂಜು ಕೋರಿ ಸೇರದಂತೆ ಅನೇಕರು ಉಪಸ್ಥಿತರಿದ್ದರು.
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');