ಕಾರ್ಮಿಕರಿಗೆ ಕಿಟ್ ವಿತರಿಸಿದ ಮಹೇಶ ಕುಮಠಳ್ಳಿ.

0
🌐 Belgaum News :
ಅಥಣಿ: ಪಟ್ಟಣದ ಪೋಲಿಸ್ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಕಾರ್ಮಿಕ ಇಲಾಖೆ ವತಿಯಿಂದ ಕಾರ್ಮಿಕರಿಗೆ ಪಡಿತರ ಕಿಟ್ ವಿತರಣೆ ಮಾಡಲಾಯಿತು. ಈ ವೇಳೆ ಮಾತನಾಡಿದ ಕೊಳಗೇರಿ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಹಾಗೂ ಅಥಣಿ ಶಾಸಕ ಮಹೇಶ ಕುಮಠಳ್ಳಿ ರಾಜ್ಯ ಸರ್ಕಾರದಿಂದ ದುಡಿಯುವ ವರ್ಗದ ಜನರಿಗೆ ಕೊರೊನಾ ಸಂಕಷ್ಟದ ಸಮಯದಲ್ಲಿ ಲಾಕ್ ಡೌನ ಆದಾಗ ಆಗುವ ಸಂಕಷ್ಟವನ್ನು ಅರಿತು ಅಕ್ಕಿ ಬೇಳೆ, ಅರಿಸಿನ, ಖಾರದ ಪುಡಿ ಸೇರಿದಂತೆ  ಹಲವು ದಿನಸಿ ವಸ್ತುಗಳನ್ನು ಹೊಂದಿರುವ ಕಿಟ್ ಗಳನ್ನು ಉಚಿತವಾಗಿ ವಿತರಿಸಲಾಯಿತು.
ಅಥಣಿ ತಾಲ್ಲೂಕಿನ ಹನ್ನೆರಡು ಸಾವಿರಕ್ಕೂ ಅಧಿಕ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ನೊಂದಾಯಿತರಾಗಿದ್ದು ಸದ್ಯ ಐದು ಸಾವಿರದಷ್ಟು ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಪಡಿತರ ಕಿಟ್ ವಿತರಣೆಯನ್ನು ಹಂತಹಂತವಾಗಿ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಬಡವರು, ನಿರ್ಗತಿಕರು, ಆರ್ಥಿಕ ದುರ್ಬಲರಿಗಾಗಿ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಕೋವಿಡ್ ಮಹಾಮಾರಿಯ
ಮೊದಲ ಮತ್ತು ಎರಡನೆಯ ಅಲೆಯ ವೇಳೆ ಲಾಕ್ ಡೌನ ಪರಿಣಾಮವಾಗಿ ದುಡಿಯುವ ವರ್ಗದ ಜನರು ನಿತ್ಯದ ಕೆಲಸ ಇಲ್ಲದೆ ಕುಟುಂಬ ನೀರ್ವಹಣೆ ಕಷ್ಟದಾಯಕವಾಗಿರುವದನ್ನು ಗಮನಿಸಿ ಆಟೋ ಚಾಲಕರು, ಕಟ್ಟಡ, ಕಂಬಾರ, ಕುಂಬಾರ, ಹೂವಾಡಿಗರು, ಟೇಲರಿಂಗ್ ಮತ್ತು ಮನೆಗೆಲಸ ಸೇರಿದಂತೆ ವಿವಿಧ ಸ್ಥರಗಳ ಜನರಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಜನರ ಕೈ ಹಿಡಿಯಲಾಗಿದೆ ಎಂದರು.
ಈ ವೇಳೆ ಡಾ. ಅನಿಲ ಸೌದಾಗರ, ಮಲಿಕಾರ್ಜುನ ಅದ್ದಾನಿ, ಶಶಿಕಾಂತ ಸಾಲವೆ, ವೀರೇಂದ್ರ ಕಾಗವಾಡೆ, ಅಣ್ಣಪ್ಪ ಭಜಂತ್ರಿ, ವಿನಾಯಕ ಪಾಟೀಲ, ಮಹಾಂತೇಶ ಬಾಡಗಿ, ಇನ್ನೂ ಹಲವಾರು ಉಪಸ್ಥಿತರಿದ್ದರು
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');