ಚಿಕ್ಕೋಡಿ ಜಿಲ್ಲೆಗೆ ಪ್ರಥಮ ಸ್ಥಾನ: ವಿದ್ಯಾರ್ಥಿನಿ ಮುಸ್ಕಾನರಗೆ ಸನ್ಮಾನ

0
🌐 Belgaum News :

ರಾಯಬಾಗ : ತಾಲೂಕಿನ ಕುಡಚಿ ಪಟ್ಟಣದ ಮೌಲಾನಾ ಅಬ್ದುಲ್ ಕಲಾಂ ಅಜಾದ ಸೋಶಿಯಲ ವೆಲ್ಫೇರ್ ಕಮೀಟಿಯ ಮೊಹಮ್ಮದೀಯಾ ಉರ್ದು ಪ್ರೌಢಶಾಲೆ , ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 613 ಅಂಕಗಳನ್ನು ಪಡೆಯುವ ಮೂಲಕ ಉರ್ದು ಮಾಧ್ಯಮದಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ಮೊಹಮ್ಮದೀಯಾ ಪ್ರೌಢ ಶಾಲೆಯ ಸತತ ಆರನೇ ವರ್ಷ ಪ್ರಥಮ ಸ್ಥಾನ ಪಡೆದಂತಾಗಿದೆ.  ಮುಸ್ಕಾನರು ಕುಂದಿ 97.12% ಪ್ರತಿಶತ ಅಂಕ ಪಡೆದು ಕುಡಚಿ ಪಟ್ಟಣಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ,ಝೋಹಾ ಹುಂಡೇಕಾರಿ 96.80% ಪ್ರತಿಶತದೊಂದಿಗೆ ಶಾಲೆಗೆ ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.

ಶಾಲೆಯ 50 ವಿದ್ಯಾರ್ಥಿಗಳಲ್ಲಿ  31ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದರೆ, 19ಪ್ರಥಮ ಸ್ಥಾನ ಪಡೆಯುವ ಮೂಲಕ 100 ಪ್ರತಿಶತ ಫಲಿತಾಂಶ ಹೊರಬಿದ್ದಿದೆ. ಉರ್ದು ಭಾಷಾ ವಿಷಯದಲ್ಲಿ 15 ವಿದ್ಯಾರ್ಥಿಗಳು 125ಕ್ಕೆ 125 ಅಂಕ ಗಳಿಸಿದರೆ, ಇಂಗ್ಲಿಷನಲ್ಲಿ 9, ಗಣಿತದಲ್ಲಿ 4, ವಿಜ್ಞಾನದಲ್ಲಿ 2 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ  ಪಡೆದಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಸತ್ಕಾರ ಸಮಾರಂಭ ಹಮ್ಮಿಕೊಂಡು ಸತ್ಕಾರ ಮಾಡುವ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದರು.

ಆಡಳಿತ ಮಂಡಳಿ ಅಧ್ಯಕ್ಷರು,  ಸದಸ್ಯರು, ಮುಖ್ಯೋಪಾಧ್ಯಾಯರಾದ ಯುನುಸ ಸೈಯದ್, ಶಿಕ್ಷಕರಾದ ಇಲಿಯಾಸ್ ಅಥಣಿಕರ, ತಫಸಿರ ಟೋಪಿವಾಲೆ, ಶಮ್ಸ ಕರಿಮಖಾನ, ಮಂಜೂರ ನಸರದಿ, ಸನಾ ಹುಂಡೇಕರಿ, ಅಸಫರೀನ ಸೈಯದ ಇತರರು ಉಪಸ್ಥಿತರಿದ್ದರು.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');