ಪುನರ್ವಸತಿಗೆ ಆಗ್ರಹಿಸಿದ ಪ್ರವಾಹ ಸಂತ್ರಸ್ತರು

0
🌐 Belgaum News :
ಅಥಣಿ ತಾಲೂಕಿನ ಪ್ರವಾಹ ಪೀಡಿತ ಗ್ರಾಮಗಳಿಗೆ ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ ತಹಶಿಲ್ದಾರ ದುಂಡಪ್ಪ ಕೋಮಾರ ಅವರಿಗೆ  ಡಾಕ್ಟರ್ ಬಿ ಆರ್ ಅಂಬೇಡ್ಕರ್ ನೆರೆ ಸಂತ್ರಸ್ತರ ಪರಿಹಾರ ಹಾಗೂ ಪುನರ್ವಸತಿ ಸಮಿತಿ ಇಂದ ಮನವಿ ಸಲ್ಲಿಸಲಾಯಿತು. ಆಗಷ್ಟ 2019 ರಲ್ಲಿ ಕೃಷ್ಣಾ ನದಿಯಲ್ಲಿ ಪ್ರವಾಹ ಬಂದ ಸಂಧರ್ಭದಲ್ಲಿ ನೂರಾರು ಜನರು ತಮ್ಮ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದು ಸರ್ಕಾರ ನಿಗದಿ ಪಡಿಸಿದಂತೆ ಭಾಗಶ ಮತ್ತು ಸಂಪೂರ್ಣ ಹಾನಿಯ ಎ,ಬಿ,ಮತ್ತು ಸಿ ಶ್ರೇಣಿಯ ಮನೆಗಳಿಗೆ ಪರಿಹಾರ ಒದಗಿಸುವಂತೆ ಸಪ್ತಸಾಗರ, ತಿರ್ಥ,ನದಿ ಇಂಗಳಗಾಂವ ಮತ್ತು ಹುಲಗಬಾಳ ಗ್ರಾಮದ ಜನರ ಪರವಾಗಿ ಮನವಿ ಸಲ್ಲಿಸಲಾಯಿತು.
ತಾಲೂಕಿನ ಇಪ್ಪತ್ತೆರಡು ಗ್ರಾಮಗಳು ಕೃಷ್ಣಾ ನದಿ ಪ್ರವಾಹದಿಂದ ಭಾಧಿತವಾಗಿದ್ದು ಸಾಕಷ್ಟು ಜನ ದಲಿತರು ಮತ್ತು ಬಡವರ ಮನೆಗಳು ಹಾನಿಯಾದರೂ ಕೂಡ ಪರಿಹಾರ ಸಮರ್ಪಕವಾಗಿ ಬರದೆ ಹಲವು ನೈಜ ಫಲಾನುಭವಿಗಳು ವಂಚಿತರಾಗುವ ಸ್ಥಿತಿ ಎದುರಾಗಿದ್ದು ಲಿಖಿತ ರೂಪದಲ್ಲಿ ಹತ್ತು ದಿನಗಳ ಒಳಗೆ ಮಾಹಿತಿ ಕೊಡುವಂತೆ ಸಂತ್ರಸ್ತರ ಪರವಾಗಿ ಆಗ್ರಹಿಸಿ ಮನವಿ ಕೊಡಲಾಯಿತು. ಈ ವೇಳೆ ರಾಮಪ್ಪ ಪೂಜಾರಿ,ಚಿದಾನಂದ ಕಾಂಬಳೆ,ವಿಲಾಸ ಕಾಂಬಳೆ,ನಾಗಪ್ಪ ಕಾಂಬಳೆ,ಸತೀಶ ಚಲವಾದಿ,ಪವನ ಕಾಂಬಳೆ,ಸಾಗರ ಕಾಂಬಳೆ,ಶ್ರೀಧರ ಕಾಂಬಳೆ,ಪರಸುರಾಮ ಕಾಂಬಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');