ರಾಜ್ಯದ ದೇವಸ್ಥಾನಗಳಿಗೆ ವಿವಿಧ ಜಾತಿಯವರನ್ನು ಅರ್ಚಕರನ್ನಾಗಿ ನೇಮಿಸಿದ ತಮಿಳುನಾಡು ಸರ್ಕಾರ

0
🌐 Belgaum News :

ಚೆನ್ನೈ: ತಮಿಳುನಾಡಿನ ಡಿಎಂಕೆ ಸರ್ಕಾರವು ರಾಜ್ಯದ ದೇವಸ್ಥಾನಗಳಿಗೆ ವಿವಿಧ ಜಾತಿಗಳ ತರಬೇತಿ ಪಡೆದ 24 ಅರ್ಚಕರನ್ನು ಶನಿವಾರ ನೇಮಕ ಮಾಡಿದೆ.

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಒಟ್ಟು78 ಅರ್ಚಕರಿಗೆ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ವತಿಯಿಂದ ನೇಮಕಾತಿ ಆದೇಶಗಳನ್ನು ನೀಡಿದ್ದಾರೆ.

ಶನಿವಾರ ನೇಮಕವಾದ ಒಟ್ಟು 78 ಅರ್ಚಕರ ಪೈಕಿ 24 ಮಂದಿ ಅರ್ಚಕರು ಹಿಂದೂ ದೇವಾಲಯಗಳಲ್ಲಿ ಅರ್ಚಕರಾಗಲು ಸರ್ಕಾರದ ವತಿಯಿಂದ ನೀಡಲಾದ ತರಬೇತಿ ಪೂರ್ಣಗೊಳಿಸಿದ್ದಾರೆ. 34 ಮಂದಿ ಇತರ ಪಾಠಶಾಲೆಗಳಲ್ಲಿ ಅರ್ಚಕ ತರಬೇತಿಯನ್ನು ಪಡೆದಿದ್ದಾರೆ.

ಇನ್ನೂ, ಏ.6ರಂದು ನಡೆದ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಡಿಎಂಕೆ ಪಕ್ಷವು ಎಲ್ಲಾ ಜಾತಿಗಳಿಗೆ ಸೇರಿದವರನ್ನು ದೇವಸ್ಥಾನಗಳಲ್ಲಿ ಅರ್ಚಕರನ್ನಾಗಿ ನೇಮಕ ಮಾಡಲು ತರಬೇತಿ ನೀಡುವುದಾಗಿ ಭರವಸೆ ನೀಡಿತ್ತು. ಇದೀಗ ಅಂತೆಯೇ ತಮಿಳುನಾಡಿನ ಡಿಎಂಕೆ ಸರ್ಕಾರವು ರಾಜ್ಯದ ದೇವಸ್ಥಾನಗಳಿಗೆ ವಿವಿಧ ಜಾತಿಗಳ ತರಬೇತಿ ಪಡೆದ 24 ಅರ್ಚಕರನ್ನು ಶನಿವಾರ ನೇಮಕ ಮಾಡಿದೆ./////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');