ಲಕ್ಷಾಂತರ ನಕಲಿ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ಕಿಡಿಗೇಡಿ ಅಂದರ್

0
🌐 Belgaum News :

ಹುಬ್ಬಳ್ಳಿ: ಹಳ್ಳಿಯಲ್ಲಿ ನಕಲಿ ನೋಟುಗಳನ್ನುಮುದ್ರಿಸಿಕೊಂಡು ಬಂದು,  ಹುಬ್ಬಳ್ಳಿ ನಗರದಲ್ಲಿ ಚಲಾವಣೆ ಮಾಡುತ್ತಿದ್ದ ಕಿಡಿಗೇಡಿಯನ್ನು ರೈಲ್ವೆ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕುಂದಗೋಳ ತಾಲೂಕು ಮಳಲಿ ಗ್ರಾಮದ ಹರೀಶ ಎಂ. ಭೋವಿ  ಆರೋಪಿ ವಾಹನ ಚಾಲಕ,  ತನ್ನ ಮನೆಯಲ್ಲಿಯೆ ಕಂಪ್ಯೂಟರ್‌ ಮತ್ತು ಮುದ್ರಣ ಯಂತ್ರ ಇಟ್ಟುಕೊಂಡು ನೋಟುಗಳನ್ನು ಮುದ್ರಿಸುತ್ತಿದ್ದ. ಇವನಿಗೆ ಹರಿಹರ ತಾಲೂಕು ಮಲೆಬೆನ್ನೂರಿನ ಇನ್ನೊಬ್ಬ ಸಾಥ್‌ ಕೊಡುತ್ತಿದ್ದ ಎನ್ನಲಾಗಿದೆ.

ಖೋಟಾ ನೋಟುಗಳನ್ನು ರೈಲ್ವೆ ನಿಲ್ದಾಣ ಬಳಿ ಚಲಾವಣೆ ಮಾಡುತ್ತಿದ್ದಾಗ ಅನುಮಾನ ಬಂದು ವ್ಯಕ್ತಿಯನ್ನು ವಿಚಾರಿಸಿದ್ದಾರೆ.  ಆತನಿಂದ 500ರೂ. ಮುಖಬೆಲೆಯ ಒಟ್ಟು 210 ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದರು.

ಸೋಮವಾರ ಸಂಜೆ ಆತನ ಮನೆ ಮೇಲೆ ದಾಳಿ ಮಾಡಿ, ನೋಟುಗಳನ್ನು ಮುದ್ರಿಸುತ್ತಿದ್ದ ಯಂತ್ರ ಹಾಗೂ 1.20 ಲಕ್ಷ ರೂ. ಮೌಲ್ಯದ ಒಟ್ಟು 213 ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಪೊಲೀಸರು ಬಂಧಿತನಿಂದ ಇದುವರೆಗೆ ಒಟ್ಟು 2.25 ಲಕ್ಷ ರೂ. ಮೌಲ್ಯದ 423 ನಕಲಿ ನೋಟುಗಳು ಹಾಗೂ ಯಂತ್ರ ವಶಪಡಿಸಿಕೊಂಡಿದ್ದಾರೆ. ಬಂಧಿತನು ಎಷ್ಟು ನೋಟುಗಳನ್ನು ಮುದ್ರಿಸಿದ್ದ, ಅವುಗಳನ್ನು ಎಲ್ಲೆಲ್ಲಿ ಚಲಾವಣೆ ಮಾಡಿದ್ದ, ಯಾವ್ಯಾವ ಪ್ರದೇಶದ ಜನರಿಗೆ ಅವುಗಳನ್ನು ಹಂಚಿಕೆ ಮಾಡಿದ್ದ. ನಕಲಿ ನೋಟು ದಂಧೆಯಲ್ಲಿ ಇನ್ನೂ ಎಷ್ಟು ಜನ ಭಾಗಿಯಾಗಿದ್ದಾರೆ ಎಂಬ ಮಾಹಿತಿಯನ್ನು ರೈಲ್ವೆ ಠಾಣೆ ಪೊಲೀಸರು ಕಲೆ ಹಾಕುತ್ತಿದ್ದಾರೆ. ತಲೆಮರೆಸಿಕೊಂಡಿರುವವರ ಪತ್ತೆ ನಡೆಸಿದ್ದಾರೆ.//////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');