ಪ್ರವಾಹ ಪೀಡಿತ ಪಟ್ಟಿಗೆ ಹೊಸದಾಗಿ ಬೆಳಗಾವಿ ಸೇರಿ ರಾಜ್ಯದ 22 ತಾಲ್ಲೂಕು : ಸರ್ಕಾರ ಘೋಷಣೆ

0
🌐 Belgaum News :

ಬೆಂಗಳೂರು : ಬೆಳಗಾವಿ ಸೇರಿ ರಾಜ್ಯದ 22 ತಾಲ್ಲೂಕುಗಳನ್ನು ಹೆಚ್ಚುವಾರಿಯಾಗಿ ಪ್ರವಾಹ ಪೀಡಿತ ತಾಲ್ಲೂಕುಗಳೆಂದು ರಾಜ್ಯ ಸರ್ಕಾರದ ಇಂದು ಘೋಷಣೆ ಮಾಡಿದೆ.

ವಿಧಾನಸೌಧದಲ್ಲಿ ಮಾಧ್ಯಮದೊಂದಿಗೆ ಕಂದಾಯ ಸಚಿವ ಆರ್​.ಅಶೋಕ್ ಮಾತನಾಡಿ,   ಈ ಹಿಂದೆ ರಾಜ್ಯದ 13 ಜಿಲ್ಲೆಗಳಿಂದ 61 ತಾಲೂಕುಗಳನ್ನು ಪ್ರವಾಹ ಪೀಡಿತ ತಾಲೂಕುಗಳೆಂದು ಘೋಷಿಸಲಾಗಿತ್ತು. ಆದರೆ ರಾಜ್ಯದ ಇನ್ನೂ ಹಲವಾರು ತಾಲೂಕುಗಳು ಇತ್ತೀಚೆಗೆ ಸುರಿದ ಮಳೆಗೆ ಪ್ರವಾಹ ಪೀಡಿತವಾಗಿದೆ. ಇದೀಗ ಹೆಚ್ಚುವರಿಯಾಗಿ 22 ತಾಲೂಕುಗಳನ್ನು ಅತಿವೃಷ್ಠಿ/ಪ್ರವಾಹ ಪೀಡಿತ ಎಂದು ಘೋಷಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಬೆಳಗಾವಿ, ಚಿಕ್ಕಮಗಳೂರು, ಹುಬ್ಬಳ್ಳಿ ನಗರ, ಕಡೂರು, ದಾವಣಗೆರೆ, ದಾಂಡೇಲಿ, ಆಲೂರು, ಲಕ್ಷ್ಮೇಶ್ವರ, ತರೀಕೆರೆ, ಮುಂಡಗೋಡು, ಸೂಪ, ಹುಬ್ಬಳ್ಳಿ, ಭದ್ರಾವತಿ, ಚನ್ನಗಿರಿ, ಅಣ್ಣಿಗೇರಿಮ ಬಬಲೇಶ್ವರ, ನಿಡಗುಂದಿ, ಕೋಲಾರ, ಮುದ್ದೆಬಿಹಾಳ, ಹರಪ್ಪನಹಳ್ಳಿ, ಹೊಸ ನಗರ, ಮೂಡಿಗೆರೆ, ತಾಲೂಕುಗಳನ್ನು ಪ್ರವಾಹ ಪೀಡಿತ ಎಂದು ಘೋಷಿಸಲಾಗಿದೆ./////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');