ಭಾರತ ನಮ್ಮ ನೆರವಿಗೆ ಬರಲಿದೆಯಂಬ ವಿಶ್ವಾಸವಿದೆ : ಅಫ್ಘಾನ್ ವಿದ್ಯಾರ್ಥಿನಿ

0
🌐 Belgaum News :

ಮೈಸೂರು : ಅಫ್ಘಾನಿಸ್ಥಾನ ದೇಶ ತಾಲಿಬಾನ್ ವಶವಾಗಿದ್ದು, ಜನಜೀವನ ಕಷ್ಟಕರವಾಗಿದೆ.  ಈ ಮಧ್ಯೆ ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಅಫ್ಘಾನಿಸ್ಥಾನದ ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ.

ಅಫ್ಘಾನ್ ವಿದ್ಯಾರ್ಥಿಗಳು ಮೈಸೂರು ವಿಶ್ವವಿದ್ಯಾಲಯದ ಕುಲಪತಿಯವರನ್ನು ಭೇಟಿಯಾದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

“ಕುಟುಂಬಸ್ಥರೊಂದಿಗೆ ಮಾತನಾಡಿದ್ದೇವೆ. ಓದನ್ನು ಬಿಡಬೇಡಿ ನಮ್ಮ ಬಗ್ಗೆ ಹೆಚ್ಚು ಚಿಂತಿಸಬೇಡಿ, ಸದ್ಯಕ್ಕೆ ನಾವು ಕ್ಷೇಮವಾಗಿದ್ದೇವೆ ಎನ್ನುತ್ತಾರೆ” ಎಂದರು.

ಅಲ್ಲಿ ನಮ್ಮ ಕುಟುಂಬಸ್ಥರು ಮನೆಯಿಂದ ಹೊರ ಬಾರದ ಸ್ಥಿತಿ ಉಂಟಾಗಿದೆ. ಮಹಿಳೆಯರ ಸ್ವಾತಂತ್ರ್ಯಕ್ಕೆ ದಕ್ಕೆಯಾಗಿದೆ. ಶೀಘ್ರದಲ್ಲೇ ಅಶಾಂತಿಯ ವಾತಾವರಣ ಸರಿಯಾಗುವ ಭರವಸೆಯಿದೆ. ಜಾಗತಿಕ ಸಮುದಾಯ ಅಫ್ಘಾನ್ ಪರವಾಗಿ ಮಾತನಾಡಬೇಕು ಎಂದು ಆಗ್ರಹಿಸಿದರು.

ಭಾರತದಲ್ಲಿ ವಿದ್ಯಾರ್ಥಿಗಳಿಗೆ ಕೆಲವೇ ತಿಂಗಳಲ್ಲಿ ವೀಸಾ ಅವಧಿ ಮುಗಿಯಲಿದ್ದು, ಭಾರತ ನಮ್ಮ ನೆರವಿಗೆ ಬರಲಿದೆ ಎಂಬ ವಿಶ್ವಾಸವಿದೆ. ಮೈಸೂರು ವಿವಿ ನಮ್ಮ ಕುಟುಂಬದಂತೆ ಇರಲಿದೆ ಎಂಬ ಭರವಸೆ ನೀಡಿದೆ. ಮೈಸೂರು ವಿವಿ ಯಿಂದ ನಮಗೆ ನೈತಿಕ ಬೆಂಬಲ ದೊರೆತಿದೆ. ಭಾರತ ಹಾಗೂ ಮೈಸೂರು ವಿವಿಗೆ ಧನ್ಯವಾದಗಳು ಎಂದು ವಿದ್ಯಾರ್ಥಿಗಳು ಹೇಳಿದರು./////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');