ನೂತನ ಕಟ್ಟಡದ ಬಗ್ಗೆ ನನ್ನ ಬಳಿ ಪ್ರಸ್ತಾಪಿಸಿದಾಗ 40 ಲಕ್ಷ ರೂ ಮೌಲ್ಯದ ಪಶು ಚಿಕಿತ್ಸಾಲಯವನ್ನು ನಿರ್ಮಿಸಲಾಗಿದೆ : ಶಾಸಕ ಶ್ರೀಮಂತ ಪಾಟೀಲ

0
🌐 Belgaum News :

ಶೇಡಬಾಳ :: ಶಿರಗುಪ್ಪಿ, ಜುಗೂಳ, ಮಂಗಾವತಿ, ಶಹಾಪುರ ಈ ಗ್ರಾಮಗಳು ನದಿ ತೀರದಲ್ಲಿರುವದರಿಂದ ಈ ಭಾಗದ ರೈತರು ಹೈನುಗಾರಿಕೆನ್ನು ಮಾಡುತ್ತಿದ್ದಾರೆ. ಆದರೆ ಈ ಬಾಗದಲ್ಲಿ ಪಶು ಚಿಕಿತ್ಸಾಯದ ಕಟ್ಟಡ ಇರಲಿಲ್ಲ. ಈ ಗ್ರಾಮದ ಮುಖಂಡರು ನೂತನ ಕಟ್ಟಡದ ಬಗ್ಗೆ ನನ್ನ ಬಳಿ ಪ್ರಸ್ತಾಪಿಸಿದಾಗ 40 ಲಕ್ಷ ರೂ ಮೌಲ್ಯದ ಪಶು ಚಿಕಿತ್ಸಾಲಯವನ್ನು ನಿರ್ಮಿಸಲಾಗಿದೆ ಎಂದು ಮಾಜಿ ಸಚಿವ ಹಾಗೂ ಕಾಗವಾಡ ಮತಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ ಹೇಳಿದರು.
ಅವರು ಸೋಮವಾರ ದಿ.16 ರಂದು ಶಿರಗುಪ್ಪಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಪಶು ಚಿಕಿತ್ಸಾಲಯದ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಶಿರಗುಪ್ಪಿ ಗ್ರಾಮದಲ್ಲಿ ಪಾರದರ್ಶಕ ಆಡಳಿತ ನಡೆಸುವ ಮೂಲಕ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇಲ್ಲಿಯ ಗ್ರಾಮ ಪಂವಾಯತಿಯಲ್ಲಿ ನಡೆಯುವ ಸದಸ್ಯರ ಸಭೆ ವಿಧಾನ ಸಭೆಯಲ್ಲಿ ಅಧಿವೇಶನ ನಡೆಯುವ ತರಹ ವ್ಯವಸ್ಥೆ ಮಾಡಿದ್ದಾರೆ. ಅಷ್ಟೇ ಅಲ್ಲ ಇಲ್ಲಿ ಶುದ್ದ ಕುಡಿಯುವ ನೀರು ಬೀದಿ ದೀಪ, ಚರಂಡಿ ಶೌಚಾಲಯ, ಶಾಲಾ ಕಟ್ಟಡ ಎಲ್ಲವೂ ಮಾದರಿಯಾಗಿವೆ. ಇವರ ಹಾಗೆ ಎಲ್ಲ ಗ್ರಾಮಗಳಲ್ಲಿಯ ಗ್ರಾಮ ಪಂಚಾಯತ್ ಸದಸ್ಯರು ಭೇಟ್ಟಿ ನೀಡಿ ಮಾದರಿ ಗ್ರಾಮಗಳನ್ನು ಮಾಡುವಂತೆ ಕರೆ ನೀಡಿದರು.
ಪಶು ಆಸ್ಪತ್ರೆಗೆ ವೈದ್ದಾಧಿಕಾರಿಯ ಕೊರತೆ ಇದೆ ಎಂಬುದು ನಮ್ಮ ಪಕ್ಷದ ಮುಖಂಡರಾದ ಅಭಯಕುಮಾರ ಅಕಿವಾಡೆಯವರು ಹೇಳಿದರು. ಶೀಘ್ರವೇ ವೈಧ್ಯಾಧಿಕಾರಿಯನ್ನು ನೇಮಕ ಮಾಡಲು ಕ್ರಮ ಜರುಗಿಸುತ್ತೇನೆ ಎಂದು ಹೇಳಿದರು.
ಗ್ರಾಮದ ಮುಖಂಡರು ಹಾಗೂ ಪಿಕೆಪಿಎಸ್ ಅಧ್ಯಕ್ಷರಾದ ಅಭಯಕುಮಾರ ಅಕಿವಾಟೆಯವರು ಮಾತನಾಡಿ ನೂತನ ಕಟ್ಟಡದ ಬೇಡಿಕೆಯನ್ನು ಶಾಸಕರ ಮುಂದೆ ಇಟ್ಟಾಗ ತಕ್ಷಣವೇ ಭೂ ಸೇನಾ ನಿಗಮದ ಅಧಿಕಾರಿಗೆ ಕರೆಯಿಸಿ ಕಟ್ಟಡ ನಿರ್ಮಿಸಿ ಕೋಟ್ಟಿದ್ದಾರೆ, ಆದರೆ ವೈದ್ಯರ ಕೊರತೆ ಇದೆ ತಕ್ಷಣವೇ ವೈದ್ಯರನ್ನು ನೇಮಕ ಮಾಡುವಂತೆ ಶಾಸಕರಿಗೆ ಅಭಯಕುಮಾರ ಅಕಿವಾಟೆ ಮನವಿ ಮಾಡಿದರು.
ಈ ವೇಲೆ ಗ್ರಾಮ ಪಂಚಾಯತ ಅಧ್ಯಕ್ಷೆ ಗೀತಾಂಜಲಿ ಚೌಗುಲೆ, ಪಿಎಲ್‍ಡಿ ಬ್ಯಾಂಕಿನ ಅಧ್ಯಕ್ಷ ಶೀತಲಗೌಡ ಪಾಟೀಲ, ಮುಖಂಡರಾದ ರಾಮಗೌಡ ಪಾಟೀಲ, ದೀಪುಗೌಡ ಪಾಟೀಲ, ಮಹಾವೀರ ಕಾತ್ರಾಳೆ, ಬೊಮ್ಮಣ್ಣ ಚೌಗುಲೆ, ಪಂಡಿತ ವಡ್ಡರ, ದಾದಾ ಪಾಟೀಲ, ಅಪ್ಪಾಸಾಬ ಚೌಗುಲೆ, ಷಣ್ಮುಖಪ್ಪ, ಡಾ.ಮಲ್ಲಿಕಾರ್ಜುನ ಹುಂಡೇಕರ, ಡಾ. ಅಭಿನಂದನ ಪಾಟೀಲ, ಪಿಡಿಓ ಶೈಲಶ್ರೀ ಭಜಂತ್ರಿ ಸೇರಿದಂತೆ ಅನೇಕರು ಇದ್ದರು.

 

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');