ಮಂಗಸೂಳಿ ಗ್ರಾಮದಲ್ಲಿ 2021-22 ನೇ ಸಾಲಿನಡಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನರೇಗಾ) ಯೋಜನೆಯಡಿ ಮಂಗಳವಾರ “ಪೌಷ್ಟಿಕ ತೋಟ” ಅಭಿಯಾನ ಅನುಷ್ಠಾನಗೊಳಿಸಲಾಯಿತು.

0
🌐 Belgaum News :

ಕಾಗವಾಡ: ತಾಲೂಕಿನ ಮಂಗಸೂಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಂಗಸೂಳಿ ಗ್ರಾಮದಲ್ಲಿ 2021-22 ನೇ ಸಾಲಿನಡಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನರೇಗಾ) ಯೋಜನೆಯಡಿ ಮಂಗಳವಾರ  “ಪೌಷ್ಟಿಕ ತೋಟ” ಅಭಿಯಾನ ಅನುಷ್ಠಾನಗೊಳಿಸಲಾಯಿತು.

ಗ್ರಾಮದ ಸರ್ಕಾರಿ ಕನ್ನಡ ಹಾಗೂ ಮರಾಠಿ ಶಾಲಾ ಆವರಣದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವೀರನಗೌಡ ಏಗನಗೌಡರ್ ಸಸಿ  ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ಆವರಣದಲ್ಲಿ ಕರಿಬೇವು, ನುಗ್ಗೆ ಸೇರಿ ವಿವಿಧ ತಳಿಯ ಸಸಿ ನೆಡಲಾಯಿತು.

ಈ ಸಂದರ್ಭದಲ್ಲಿ ತೋಟಗಾರಿಕೆ ಹಿರಿಯ ಸಹಾಯಕ‌ ನಿರ್ದೇಶಕಿ ಶ್ವೇತಾ ಹಾಡಕಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪ್ರವೀಣ ಪಾಟೀಲ್, ಕಾಗವಾಡ ಸಿಡಿಪಿಯು ಸಂಜೀವಕುಮಾರ್ ಸದಲಗಿ, ಗ್ರಾಪಂ ಅಭಿವೃದ್ದಿ ಅಧಿಕಾರಿ, ತಾಂತ್ರಿಕ ಸಿಬ್ಬಂದಿ, ಐಇಸಿ ಸಂಯೋಜಕರು, ಶಾಲಾ ಶಿಕ್ಷಕರು ಹಾಗೂ ಆಶಾ ಕಾರ್ಯಕರ್ತರು ಇದ್ದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');