ಲಕ್ಷಾಂತರ ರೂ. ದರೋಡೆ: ಆರೋಪಿಗಳು ಅರೆಸ್ಟ್

0
🌐 Belgaum News :

ಶಿವಮೊಗ್ಗ: ಸಮೀಪದ ಚಿಕ್ಕಮರಡಿ ಗ್ರಾಮದಲ್ಲಿ ಲಕ್ಷಾಂತರ ರೂ.ದರೋಡೆ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಶಿವಮೊಗ್ಗ ಕಾಶಿಪುರದ ಅವಿನಾಶ್(30), ಕೋಣೆಹೊಸೂರು ಗ್ರಾಮದ ಲೋಹಿತ್ ಶೆಟ್ಟಿ(32), ದಾವಣಗೆರೆ ಜಿಲ್ಲೆ ಸಂತೆಬೆನ್ನೂರಿನ ಧರ್ಮರಾಜ(52), ಶಿವಮೊಗ್ಗ ವಿನಾಯಕ ಸರ್ಕಲ್‌ನ ನಾಗರಾಜ(19) ಹಾಗೂ ಕೊಪ್ಪಳ ಜಿಲ್ಲೆ ಭಾನಾಪುರದ ವೀರಯ್ಯ(25) ಎಂದು ಗುರುತಿಸಲಾಗಿದೆ.

ಚಿಕ್ಕಮರಡಿ ಗ್ರಾಮದ ಜಯಣ್ಣ ಅವರ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು ಮನೆಯಲ್ಲಿದ್ದವರಿಗೆ ಬೆದರಿಕೆ ಹಾಕಿದ್ದಲ್ಲದೇ,  ಮೇಘನ ಎಂಬುವರಿಗೆ ಚಾಕುವುನಿಂದ ಚುಚ್ಚಿದ್ದರು. ಈ ಬಗ್ಗೆ ಆಗಸ್ಟ್ 03 ರಂದು ದೂರು ದಾಖಲಾಗಿತ್ತು.ತನಿಖೆ ಕೈಗೆತ್ತಿಕೊಂಡ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ 3 ಲಕ್ಷ ರೂ. ನಗದು, 01 ವ್ಯಾಗನಾರ್ ಕಾರು, 120 ಗ್ರಾಂ ಬಂಗಾರದ ಆಭರಣ ಮತ್ತು 340 ಗ್ರಾಂ ಬೆಳ್ಳಿ ಆಭರಣ ವಶಕ್ಕೆ ಪಡೆಯಲಾಗಿದೆ.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');