ರೈಲ್ವೆ ಇಲಾಖೆಗೆ ತ್ಯಾಜ್ಯ ಮಾರಾಟದಿಂದ 391 ಕೋಟಿ ರೂ. ಲಾಭ

0
🌐 Belgaum News :

ದೆಹಲಿ: ಕೊರೋನಾ ಹಿನ್ನಲೆಯಲ್ಲಿ ಭಾರತದಲ್ಲಿ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಸೆಂಟ್ರಲ್ ರೈಲ್ವೆ ಈ ಅವಧಿಯಲ್ಲಿ ಅದ್ಭುತ ಕೆಲಸ ಮಾಡಿ, ಸಾಕಷ್ಟು ಹಣ ಗಳಿಸಿದೆ. ಸೆಂಟ್ರಲ್ ರೈಲ್ವೆ, ಬಿಡುಗಡೆ ಮಾಡಿರುವ ದತ್ತಾಂಶಗಳ ಪ್ರಕಾರ, 2020-21ರಲ್ಲಿ, ಸೆಂಟ್ರಲ್ ರೈಲ್ವೆ ತ್ಯಾಜ್ಯದಿಂದ 391 ಕೋಟಿ ರೂಪಾಯಿ ಗಳಿಸಿದೆ.

ಕೇಂದ್ರ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಿವಾಜಿ ಸುತಾರ್, ಈ ಬಗ್ಗೆ ಮಾಹಿತಿ ನೀಡಿದ್ದಾರೆ.  ಲಾಕ್‌ಡೌನ್ ಸಮಯದಲ್ಲಿ ತ್ಯಾಜ್ಯವನ್ನು ಮಾರಾಟ ಮಾಡುವ ಮೂಲಕ, ಕೇಂದ್ರ ರೈಲ್ವೆ 391 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಆದಾಯ ಗಳಿಸಿದೆ.  ಈ ಮೂಲಕ ರೈಲ್ವೆ ಆವರಣವನ್ನು ಸ್ವಚ್ಛಗೊಳಿಸಿದೆ.

ಸೆಂಟ್ರಲ್ ರೈಲ್ವೇ ಶೂನ್ಯ ಸ್ಕ್ರ್ಯಾಪ್ ಮಿಷನ್ ಆರಂಭಿಸಿದೆ. ಇದರ ಅಡಿಯಲ್ಲಿ ಕೇಂದ್ರ ರೈಲ್ವೆಯ ಪ್ರತಿಯೊಂದು ವಿಭಾಗ, ಕಾರ್ಖಾನೆ ಮತ್ತು ಶೆಡ್ ಗಳನ್ನು ಸ್ವಚ್ಛವಾಗಿಡಲಾಗ್ತಿದೆ. ಕೇಂದ್ರ ರೈಲ್ವೆಗೆ ಬೇಡದ ವಸ್ತುಗಳನ್ನು ಇ-ಹರಾಜಿನ ಮೂಲಕ ವಿಲೇವಾರಿ ಮಾಡಲಾಗುತ್ತದೆ. ಇದ್ರಿಂದ ರೈಲ್ವೆ ಇಲಾಖೆ 8.65 ಕೋಟಿ ರೂಪಾಯಿ ಆದಾಯ ಗಳಿಸಿದೆ.

ಮಾಹಿತಿ ಪ್ರಕಾರ, 2020-21 ರಲ್ಲಿ ಕೇಂದ್ರ ರೈಲ್ವೆ, ತ್ಯಾಜ್ಯದ ಮೂಲಕ ಗಳಿಸಿದ ಮೊತ್ತ, ಕಳೆದ 15 ವರ್ಷಗಳಲ್ಲಿ ಅತಿ ಹೆಚ್ಚು. ಲಾಕ್‌ಡೌನ್ ಸಮಯದಲ್ಲಿ ಪ್ಯಾಸೆಂಜರ್ ರೈಲು ಓಡಾಡದ ಕಾರಣ ರೈಲ್ವೆ ಅನುಭವಿಸಿದ ನಷ್ಟವನ್ನು ಸರಿದೂಗಿಸಲು ಇದು ಸಹಾಯ ಮಾಡಿದೆ./////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');