ಹುಕ್ಕೇರಿ ಮೆಗಾ ಲೋಕ ಅದಾಲತ್ ಯಶಸ್ವಿ: ನ್ಯಾಯಾಧೀಶ ರೊಟ್ಟೆರ

0
🌐 Belgaum News :

ಹುಕ್ಕೇರಿ : ಇಲ್ಲಿನ ನ್ಯಾಯಾಲಯಗಳಲ್ಲಿ ಎರಡು ದಿನಗಳ ಕಾಲ ನಡೆದ ಮೆಗಾ ಲೋಕ ಅದಾಲತ್ ಯಶಸ್ವಿಯಾಗಿದೆ ಎಂದು ದಿವಾಣಿ ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಎಸ್.ರೊಟ್ಟೆರ ಹೇಳಿದರು.

ಪಟ್ಟಣದ ನ್ಯಾಯಾಲಯದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಕ್ಷಿದಾರರ, ನ್ಯಾಯವಾದಿಗಳ, ಸಂಘ-ಸಂಸ್ಥೆಗಳ, ಸಿಬ್ಬಂದಿಗಳು ಸೇರಿದಂತೆ ಸಾರ್ವಜನಿಕರು ಸಹಕಾರ ನೀಡಿದ್ದರಿಂದ ಮೆಗಾ ಲೋಕ ಅದಾಲತ್ ಯಶಸ್ವಿಯಾಗಲು ಕಾರಣವಾಗಿದೆ ಎಂದರು.

ಇದೇ ತಿಂಗಳು 14 ಮತ್ತು 16 ರಂದು ಎರಡು ದಿನಗಳ ಕಾಲ ಮೆಗಾ ಲೋಕ ಅದಾಲತ್ ನಡೆದಿದ್ದು ಕೋರ್ಟ್‍ನಲ್ಲಿದ್ದ 4403 ಪ್ರಕರಣಗಳ ಪೈಕಿ 680 ಕೇಸ್‍ಗಳನ್ನು ಇತ್ಯರ್ಥಗೊಳಿಸಲಾಗಿದೆ. ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ 188 ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿ 11,21,008 ರೂ ಗಳನ್ನು ವಸೂಲು ಮಾಡಲಾಗಿದೆ.

ಇನ್ನು ಹುಕ್ಕೇರಿ ವ್ಯಾಪ್ತಿಯ ರಾಷ್ಟ್ರೀಕೃತ ಬ್ಯಾಂಕ್‍ಗಳ 58 ಪ್ರಕರಣಗಳಲ್ಲಿ 1,89,36,550 ರೂಗಳನ್ನು ವಸೂಲಾತಿ ಮಾಡಲಾಗಿದೆ ಎಂದು ಅವರು ಹೇಳಿದರು.
ಲೋಕ ಅದಾಲತ್ ಕುರಿತು ಸಾಕಷ್ಟು ಪ್ರಚಾರ ಮಾಡಿದ್ದರಿಂದ ಅನೇಕ ಜಾಗೃತರಾಗಿ ರಾಜಿ ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡಿದ್ದಾರೆ. ಕಕ್ಷಿದಾರರು ಮತ್ತು ಪ್ರಕರಣ ದಾಖಲಿಸಿದವರಿಗೆ ನ್ಯಾಯದಾನ ಮಾಡಿರುವ ತೃಪ್ತಿಯಿದೆ.

ಸಮಾಜಕ್ಕೆ ಈ ಮೂಲಕ ಒಳ್ಳೆಯ ಸಂದೇಶ ನೀಡಲಾಗಿದೆ. ಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಹಳೆ ಬಾಕಿ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ಅವರು ಹೇಳಿದರು.
ದಿವಾಣಿ ಸಿವಿಲ್ ನ್ಯಾಯಾಧೀಶ ಕೆ.ಅಂಬಣ್ಣಾ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಡಿ.ಕೆ.ಅವರಗೋಳ, ಈರಣ್ಣಾ ಹೂಲಿಕಟ್ಟಿ, ಎಚ್.ಎಲ್.ಪಾಟೀಲ, ಬಿ.ವಿ.ಹುಂಡೇಕಾರ ಮತ್ತಿತರರು ಉಪಸ್ಥಿತರಿದ್ದರು./////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');