ಅಫ್ಗಾನಿಸ್ತಾನ : ಸುರಕ್ಷಿತವಾಗಿ ಭಾರತಕ್ಕೆ ಬಂದಿಳಿದ 150 ಮಂದಿ, ಇನ್ನೂ ಕಾರ್ಯಾಚರಣೆ

0
🌐 Belgaum News :

ನವದೆಹಲಿ: ಅಫ್ಗಾನಿಸ್ತಾನವು ಉಗ್ರರ ಕೈವಶವಾದ ಬಳಿಕ, ಅಫ್ಗಾನಿನಲ್ಲಿರುವ  ಭಾರತೀಯರನ್ನು ರಾಯಭಾರ ಕಚೇರಿಯ ಸಿಬ್ಬಂದಿಯನ್ನು ಸುರಕ್ಷಿತವಾಗಿ  ಕರೆಸಿಕೊಳ್ಳಲಾಗಿದೆ. ದೇಶವು ತಾಲಿಬಾನ್‌ ಸಂಘಟನೆಯ ವಶವಾದ ಬಳಿಕ ಅಫ್ಗಾನಿಸ್ತಾನ ರಾಜಧಾನಿಯಲ್ಲಿ ಭೀತಿ ಮತ್ತು ಅನಿಶ್ಚಿತ ಸ್ಥಿತಿ ಇದೆ.

ಅದರ ನಡುವೆಯೇ ಕಾರ್ಯಾಚರಣೆ ನಡೆಸಲಾಗಿದೆ. ಭಾರತೀಯ ವಾಯುಪಡೆಯ ಗ್ಲೋಬ್‌ಮಾಸ್ಟರ್‌ ಸಿ–17 ವಿಮಾನವು ಸುಮಾರು 150 ಜನರೊಂದಿಗೆ ಗುಜರಾತ್‌ನ ಜಾಮ್‌ನಗರಕ್ಕೆ ಮಂಗಳವಾರ ಬೆಳಿಗ್ಗೆ ಬಂದಿಳಿಯಿತು. ಇಂಧನ ಮರಪೂರಣದ ಬಳಿಕ, ಸಂಜೆ ಐದು ಗಂಟೆ ಸುಮಾರಿಗೆ ವಿಮಾನವು ದೆಹಲಿ ಸಮೀಪದ ಹಿಂಡನ್‌ ವಾಯುನೆಲೆಗೆ ತಲುಪಿತು.

ಕಾಬೂಲ್‌ನಲ್ಲಿ ಪರಿಸ್ಥಿತಿ ಸಂಕೀರ್ಣವಾಗಿದ್ದು, ನಾಗರಿಕ ವಿಮಾನ ಸೇವೆಗಳು ಪುನರಾರಂಭವಾದಾಗ ಅಲ್ಲಿ ಸಿಲುಕಿರುವ ಭಾರತೀಯರನ್ನು ತವರಿಗೆ  ಕರೆತರಲಾಗುವುದು ಎಂದು ಅಫ್ಗಾನಿಸ್ತಾನದ ಭಾರತೀಯ ರಾಯಭಾರಿ ರುದ್ರೇಂದ್ರ ಟಂಡನ್ ಅವರು ಜಾಮ್‌ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.

‘ಸುರಕ್ಷಿತವಾಗಿ ಮನೆಗೆ ಮರಳಿದ್ದರಿಂದ ಸಂತೋಷವಾಗಿದೆ. 192 ಸಿಬ್ಬಂದಿಯನ್ನು ಕರೆತರುವ ಬೃಹತ್ ಕಾರ್ಯಾಚರಣೆ ಇದಾಗಿತ್ತು.  ಅಫ್ಗಾನಿಸ್ತಾನದಿಂದ ಕೇವಲ ಮೂರು ದಿನಗಳ ಅವಧಿಯಲ್ಲಿ ಎರಡು ಹಂತಗಳಲ್ಲಿ ಜನರನ್ನು ಸ್ಥಳಾಂತರ ಮಾಡಲಾಗಿದೆ’ ಎಂದರು.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');