ನಮಗೆ ಈ ಜೀವ ಬೇಡ, ನಮ್ಮನ್ನ ಸಾಯಲು ಬಿಡಿ : ಡೇತ್ ನೋಟ್ ಬರೆದಿಟ್ಟು ಇಡೀ ಕುಟುಂಬ ಕಾಣೆ

0
🌐 Belgaum News :

ಬೆಂಗಳೂರು : ನಮಗೆ ಈ ಜೀವನ ಬೇಡವೇ ಬೇಡ. ದಯಮಾಡಿ ನಮ್ಮನ್ನ ಸಾಯಲು ಬಿಡಿ ಎಂದು   ಡೆತ್ ನೋಟ್  ಬರೆದಿಟ್ಟು ಇಡೀ ಕುಟುಂಬವೇ ನಾಪತ್ತೆ ಆಗಿರೋ ಘಟನೆ ನಗರದ ಬಾಗಲಗುಂಟೆಯಲ್ಲಿ ನಡೆದಿದೆ.

ಗಾಂಧಿ, ಶಾಲಿನಿ, ಭನುಶ್ರೀ, ಹೇಮಶ್ರೀ ನಾಪತ್ತೆಯಾದ ಕುಟುಂಬದ ಸದಸ್ಯರು. ಇದೇ ಕುಟುಂಬದ ಚಿರಂಜೀವಿ ಎಂಬಾತ ತುಮಕೂರಿನಲ್ಲಿ ವಿದ್ಯಾಭ್ಯಾಸ್ ಮಾಡುತ್ತಿದ್ದಾನೆ. ಪ್ರತಿದಿನ ಪೋಷಕರು, ಸಹೋದರಿಯೊಂದಿಗೆ ಪೋನ್ ಅಲ್ಲಿ ಮಾತನಾಡುತ್ತಿದ್ದನು. ಆದರೆ ಆ.12ರಂದು ಕರೆ ಮಾಡಿದಾಗ ಎಲ್ಲ ಪೋನ್ ಗಳು ಸ್ವೀಚ್ ಆಫ್ ಆಗಿವೆ.

ಇದರಿಂದ ಭಯಗೊಂಡ ಚಿರಂಜೀವಿ ಪೋಷಕರ ಮನೆ ಬಳಿ ಇದ್ದಂತ ಸ್ನೇಹಿತರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾನೆ. ಆಗ ಸ್ನೇಹಿತ ಮನೆಯ ಬಳಿ ಹೋದ್ರೆ ಸಂಪೂರ್ಣ್ ಲಾಕ್ ಆಗಿದೆ. ಮನೆ ಮಾಲೀಕರನ್ನು ಕೇಳಿದಾಗ ಅವರು ಫ್ಯಾಮಿಲಿ ಸಮೇತ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ ಅಂದಿದ್ದಾರೆ.

ಕೂಡಲೇ ಚಿರಂಜೀವಿಗೆ ಮಾಹಿತಿ ತಿಳಿಸಿದ್ದ ಸ್ನೇಹಿತ, ವಿಷಯ ತಿಳಿಯುತ್ತಿದ್ದ ಹಾಗೆ  ಬೆಂಗಳೂರಿಗೆ ಬಂದಿದ್ದಾರೆ. ತನ್ನ ಬಳಿಯಿದ್ದ ನಕಲಿ ಕೀ ತೆರೆದು ನೋಡಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಇನ್ನು ಮನೆಯನ್ನ ಪರಿಶೀಲನೆ ನಡೆಸಿದಾಗ ಕಿಟಿಕಿ ಬಳಿ ಸೂಸೈಡ್ ನೋಟ್ ಬರೆದಿಟ್ಟಿರೋದು ಪತ್ತೆಯಾಗಿದೆ. ಕೂಡಲೇ ಬಗಲಗುಂಟೆ ಪೊಲೀಸರಿಗೆ ಚಿರಂಜೀವಿ ಮಾಹಿತಿ ತಿಳಿಸಿದ್ದಾನೆ.

ಕಾಣೆಯಾಗಿದ್ದಾರೆ ಎಂಬ ದೂರು  ದಾಖಲಿಸಿಕೊಂಡಿರುವ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ./////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');