ತಾಲೂಕು ಆಸ್ಪತ್ರೆಯಲ್ಲಿ ವಾತ್ಸಲ್ಯ ಯೋಜನೆಗೆ ಚಾಲನೆ

0
🌐 Belgaum News :
ಜಿಲ್ಲಾ ಪಂಚಾಯತ  ತಾಲೂಕು ಆಡಳಿತ ಮತ್ತು ಜಿಲ್ಲಾ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಭಾಗಿತ್ವದಲ್ಲಿ ವಾತ್ಸಲ್ಯ ನಾಮಾಂಕಿತ ಹದಿನೆಂಟು ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣಾ ಕಾರ್ಯಕ್ರಮಕ್ಕೆ ಅಥಣಿ ಶಾಸಕ ಹಾಗೂ ಕೊಳಗೇರಿ ನಿಗಮ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ ಸಸಿಗೆ ನೀರು ಎರೆಯುವ ಮೂಲಕ ಚಾಲನೆ  ನೀಡಿದರು.
ರಾಜ್ಯ ಸರ್ಕಾರ ಕೋವಿಡ್ ಸಂಕಷ್ಟದ ಸಮಯದಲ್ಲಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ವಾತ್ಸಲ್ಯ ಕಾರ್ಯಕ್ರಮ ಜಾರಿಗೊಳಿಸಿದ್ದು ಹುಟ್ಟಿದ ಮಗುವಿನಿಂದ ಹಿಡಿದು ಹದಿನೆಂಟು ವರ್ಷ ವಯೋಮಿತಿಯ ಒಳಗಿನ ಮಕ್ಕಳ ಆರೋಗ್ಯದ ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುತ್ತಿದ್ದು ಸಾರ್ವಜನಿಕರು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುವದರ ಜೊತೆಗೆ ಮೂರನೆ ಅಲೆ ಮಕ್ಕಳಿಗೆ ಹರಡುವ ಸಾಧ್ಯತೆ ಇರುವದರಿಂದ ಹದಿನೆಂಟು ವರ್ಷದೊಳಗಿನ ಮಕ್ಕಳ ಬಗ್ಗೆ ಪೋಷಕರು,ಮತ್ತು ವೈದ್ಯರು ಹೆಚ್ಚಿನ ಕಾಳಜಿ ವಹಿಸುವಂತೆ ತಿಳಿಸಿದರು.
ಈ ವೆಳೆ ಚಿಕ್ಕಮಕ್ಕಳ ತಜ್ಞ ವೈದ್ಯ ಡಾಕ್ಟರ್ ಬಾಳಾಸಾಹೇಬ ಇರಳಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಿದರು.ಈ ವೇಳೆ ಡಾಕ್ಟರ್ ಬಸಗೌಡ ಕಾಗೆ ಮಾತನಾಡಿ ತಾಲೂಕಿನ ಪ್ರತಿ ಗ್ರಾಮ ಮಟ್ಟದಲ್ಲಿ ವೈದ್ಯಕೀಯ ಟಾಸ್ಕ ಪೋರ್ಸ ಕಮೀಟಿ ರಚನೆ ಮಾಡುವ ಮೂಲಕ ಪ್ರತಿ ಮಕ್ಕಳ ಆರೊಗ್ಯ ತಪಾಸಣೆಯನ್ನು ಉಚಿತವಾಗಿ ಮಾಡುವದರ ಜೊತೆಗೆ ಸರ್ಕಾರದ ಮಟ್ಟದಲ್ಲಿ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಒದಗಿಸಲಾಗುವದು.
ಕೋವಿಡ್ ಮೂರನೆಯ ಅಲೆಯ ಹಿನ್ನೆಲೆಯಲ್ಲಿ ಜನರು ಸಾಧ್ಯವಾದಷ್ಟೂ ಅನವಶ್ಯಕ ವಾಗಿ ಮನೆಯಿಂದ ಹೊರಗೆ ಬರದೆ ಅನಿವಾರ್ಯ ಸಮಯದಲ್ಲಿ ಮಾತ್ರ ಹೊರಗೆ ಬರುವದರ ಜೊತೆಗೆ ಸಾಮಾಜಿಕ ಅಂತರ ಮತ್ತು ಮಾಸ್ಕ್ ಹಾಗೂ ಆಗಾಗ ಕೈ ತೊಳೆಯುವ ಮೂಲಕ ಕೋವಿಡ್ ಹರಡುವಿಕೆಯನ್ನು ತಡೆಯಲು ಸಹಕರಿಸಬೇಕು ಅದರ ಜೊತೆಗೆ ಗ್ರಾಮೀಣ ಭಾಗದಲ್ಲಿರುವ ಅನಾರೋಗ್ಯ ಪೀಡಿತ ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಯುವಕರು ಮತ್ತು ಸಂಘ ಸಂಸ್ಥೆಗಳು ಮಕ್ಕಳ ಪೋಷಕರ ಮನವೊಲಿಸಲು ಕೈ ಜೋಡಿಸುವ ಮೂಲಕ ಆರೋಗ್ಯಕರ ಸಮಾಜಕ್ಕೆ ನಾಂದಿ ಹಾಡಬೇಕು ಎಂದರು.
ಈ ವೇಳೆ ಅಥಣಿ ತಹಶಿಲ್ದಾರ ದುಂಡಪ್ಪ ಕೋಮಾರ,ಪಿ ಎಸ್ ಐ ಕುಮಾರ ಹಾಡಕಾರ,ತಾ ಪಂ ಅಧಿಕಾರಿ ಶೇಖರ ಕರಬಸಪ್ಪಗೋಳ,ಸಿ ಎಮ್ ಓ ಸಿ ಎಸ್ ಪಾಟೀಲ, ಸಿಡಿಪಿಓ ಅಶೋಕ ಕಾಂಬಳೆ,ಮತ್ತು ಡಾಕ್ಟರ್ ಎಚ್ ಜಿ ಕನಮಡಿ ಹಾಗೂ ತಾಲೂಕು ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');