ಕಾರ್ಮಿಕರಿಗೆ ಪಡಿತರ ಕಿಟ್ ವಿತರಣೆಯ ಅವ್ಯವಸ್ಥೆಗೆ ಗಜಾನನ ಮಂಗಸೂಳಿ ಆಕ್ರೋಶ

0
🌐 Belgaum News :
ಅಥಣಿ: ತಾಲೂಕಿನ ಕಾರ್ಮಿಕರಿಗೆ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯಿಂದ ಪಡಿತರ ಕಿಟ್ ಗಳನ್ನು ಕಾಟಾಚಾರಕ್ಕೆ ವಿತರಣೆ ಮಾಡಲಾಗುತ್ತಿದ್ದು ನೈಜ ಫಲಾನುಭವಿಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಆಕ್ರೋಶ ವ್ಯಕ್ತಪಡಿಸಿದರು. ಅಥಣಿ ಪಟ್ಟಣದ ಪೋಲಿಸ್ ಸಮುದಾಯ ಭವನದಲ್ಲಿ ಸಾಕಷ್ಟು ಜನ ಕಾರ್ಮಿಕರು,ಮಹಿಳೆಯರು ಮತ್ತು ಮಕ್ಕಳು ಬರುತ್ತಿದ್ದಂತೆಯೆ ಜನದಟ್ಟಣೆ ಹಾಗೂ ನೂಕಾಟ ತಳ್ಳಾಟ ನಡೆಯುತ್ತಿರುವದನ್ನು ಗಮನಿಸಿ ಕಾರ್ಮಿಕ ಇಲಾಖೆಯ ಸಿಬ್ಬಂದಿ ಪಡಿತರ ಕಿಟ್ ವಿತರಣೆಯನ್ನು ಸ್ಥಗಿತಗೊಳಿಸಿ ಸ್ಥಳದಿಂದ ನಾಪತ್ತೆಯಾದರು.
ಈ ವೇಳೆ ನೂರಾರು ಜನ ಕಾರ್ಮಿಕರು ಮಳೆಯಲ್ಲಿ ಗಂಟೆಗಟ್ಟಲೆ ಸ್ಥಳದಲ್ಲಿ ಕಾರ್ಮಿಕ ಇಲಾಖೆಯ ಪಡಿತರ ಕಿಟ್ ವಿತರಣೆಗಾಗಿ ಕಾಯ್ದು ಕುಳಿತಿದ್ದು ಮಳೆಯಲ್ಲಿ ವಯೋವೃದ್ದರು,ಮಹಿಳೆಯರು, ಕಾಯುತ್ತ ಕುಳಿತ ಸುದ್ದಿ ತಿಳಿದು ಕಾಂಗ್ರೆಸ್ ಪಕ್ಷದ ಮುಖಂಡ ಗಜಾನನ ಮಂಗಸೂಳಿ ಸ್ಥಳಕ್ಕೆ ಆಗಮಿಸಿ ಕಾರ್ಮಿಕ ಇಲಾಖೆಯ ಅಧಿಕಾರಿಗಳನ್ನು ಪೋನ್ ಮೂಲಕ ಸಂಪರ್ಕಿಸಿ ಕಾರ್ಮಿಕರನ್ನು ಹೀಗೆ ಕಾಯಿಸುವದು ಸರಿ ಅಲ್ಲ ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಸರಿಯಾಗಿ ತಲುಪಿಸಿ ನಿಮ್ಮ ಜವಾಬ್ದಾರಿ ನಿಭಾಯಿಸಿ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಬೆಳಗಿನ ಹನ್ನೊಂದು ಗಂಟೆಯಿಂದ ಸಂಜೆ ಐದು ಗಂಟೆಯಾದರು ಸುರಿಯುವ ಮಳೆಯಲ್ಲಿ ಕಾಯುತ್ತ ನಿಂತಿದ್ದ ಕಾರ್ಮಿಕರು,ಮಹಿಳೆಯರು ತಮ್ಮ ನಿತ್ಯದ ದುಡಿಮೆ ಬಿಟ್ಟು ಕೂಲಿ ಕೆಲಸದ ಸಂಬಳವನ್ನು ಬಿಟ್ಟು ಗಂಟೆಗಟ್ಟಲೆ ಕಾಯ್ದರೂ ಕೂಡ ಕಾರ್ಮಿಕ ಇಲಾಖೆಯ ಅಧಿಕಾರಿ ಬೆಳಗಾವಿಯಲ್ಲಿ ಅಧಿಕಾರಿಗಳ ಸಭೆ ಇರುವದರಿಂದ ಮತ್ತೊಂದು ದಿನ ಪಡಿತರ ಕಿಟ್ ವಿತರಿಸುವದಾಗಿ ಹೇಳುವ ಮೂಲಕ ತಮ್ಮ ಜವಾಬ್ದಾರಿಯಿಂದ ಜಾರಿಕೊಳ್ಳುವ ಪ್ರಯತ್ನ ಮಾಡಿದ್ದು
 ಕಾರ್ಮಿಕರು ಇಲಾಖೆಯ ಸಿಬ್ಬಂದಿಗೆ ಹಿಡಿಶಾಪ ಹಾಕುತ್ತ ಖಾಲಿ ಕೈಯ್ಯಲ್ಲೆ ಮನೆಗೆ ಮರಳುವದನ್ನು ನೋಡಿ ಕಾರ್ಮಿಕ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೆ ಅಸಹಾಯಕ ಜನರೆಂದು ಅನ್ಯಾಯ ಮಾಡಿದರೆ ಅನಿವಾರ್ಯವಾಗಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗಜಾನನ ಮಂಗಸೂಳಿ ಎಚ್ಚರಿಸುತ್ತಿದ್ದಂತೆಯೆ ಸ್ಥಳಕ್ಕೆ ಆಗಮಿಸಿದ ಕಾರ್ಮಿಕ ಇಲಾಖೆಯ ಸಿಬ್ಬಂದಿ ಪಡಿತರ ಕಿಟ್ ಗಳನ್ನು ವಿತರಿಸಿದರು.
Attachments area
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');